Ram Navami 2025: ರಾಮ ನವಮಿಯ ಈ ದಿನ ಅಯೋಧ್ಯ ಶ್ರೀರಾಮನಿಗೆ ವಿಶೇಷ ಪೂಜೆ, ಡ್ರೋನ್ ಮೂಲಕ ಸರಯೂ ಜಲ
ಲಕ್ನೋ ಏಪ್ರಿಲ್ 6: ಇಂದು ರಾಮ ನವಮಿ. ದೇಶದಾದ್ಯಂತ ರಾಮನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉತ್ತರಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯದ ರಾಮ ಮಂದಿರದಲ್ಲಿ ರಾಮಲಲ್ಲಾಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಈ ವಿಶೇಷ ದಿನಕ್ಕಾಗಿ ಇಡೀ ರಾಮಮಂದಿರವನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಬೆಳಗ್ಗೆಯಿಂದಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಹಾಗಾದರೆ ಈ ದಿನ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಈಗ ತಿಳಿಯೋಣ.
ಈ ಬಾರಿ ರಾಮ ನವಮಿಗೆ ರಾಮನಗರಿ ಅಯೋಧ್ಯೆಯಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ರಾಮಪಥದ ಉದ್ದಕ್ಕೂ ನೆರಳಿನ ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಲಾಗಿದೆ ಮತ್ತು 243 ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಅಯೋಧ್ಯೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಇಂದು ಒಂದೇ ದಿನ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ರಾಮಜನ್ಮಭೂಮಿ ಮಾರ್ಗದಲ್ಲಿ ರೆಡ್ ಕಾರ್ಪೆಟ್ ಹಾಸಲಾಗಿದೆ. ಭಕ್ತರು ಸಿಲ್ಲುವ ಬಿಸಿಲಿಗೆ ಕಾದಿರುವ ಸ್ಥಳದಲ್ಲಿ ನಿಯಮಿತವಾಗಿ ನೀರನ್ನು ಸಿಂಪಡಿಸಲಾಗುತ್ತಿದೆ.

ಭಕ್ತರ ಮೇಲೆ ಪವಿತ್ರ ಸರಯೂ ಜಲವನ್ನು ಸುರಿಸಲಿರುವ ಡ್ರೋನ್‌ಗಳ ವ್ಯವಸ್ಥೆ
ಅತ್ಯಂತ ವಿಶೇಷವಾದ ವಿಷಯವೆಂದರೆ ಈ ಬಾರಿ ಪವಿತ್ರ ಸರಯೂ ನೀರನ್ನು ಡ್ರೋನ್‌ಗಳ ಮೂಲಕ ಭಕ್ತರ ಮೇಲೆ ಸುರಿಯಲಾಗುವುದು. ಈ ದೃಶ್ಯವೇ ಸಾಕಷ್ಟು ಆನಂದದಾಯಕವಾಗಿರುತ್ತದೆ. ಸುಡುವ ಬಿಸಿಲಿನಿಂದ ರಕ್ಷಿಸಲು ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ಕುಡಿಯುವ ನೀರಿಗಾಗಿ ಹೆಚ್ಚುವರಿ ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೆ ತುರ್ತು ಸಂದರ್ಭಗಳಲ್ಲಿ ಭಕ್ತರಿಗೆ ತಕ್ಷಣದ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಆಂಬ್ಯುಲೆನ್ಸ್ ಸೇವೆಗಳನ್ನು ಸಹ ನಿಯೋಜಿಸಲಾಗುವುದು.
ರಾಮಲಾಲಾ ಅವರ ಹಣೆಯ ಮೇಲೆ ಸೂರ್ಯ ತಿಲಕ
ರಾಮ ನವಮಿಯ ಮುಖ್ಯ ದಿನವಾದ ಇಂದು (ಏಪ್ರಿಲ್ 6) ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ವಿಶೇಷ ಆಚರಣೆಗಳನ್ನು ಆಯೋಜಿಸಲಾಗುವುದು. ಮಧ್ಯಾಹ್ನ 12:00 ಗಂಟೆಗೆ ರಾಮಲಾಲಾ ಅವರ ಹಣೆಯ ಮೇಲೆ ಸೂರ್ಯ ತಿಲಕವನ್ನು ಹಚ್ಚಲಾಗುತ್ತದೆ. ಅಂದರೆ ಸೂರ್ಯನ ಕಿರಣ ಶ್ರೀರಾಮನ ಹಣೆಗೆ ಬೀಳಲಿದೆ. ಇದು ಸುಮಾರು 4 ನಿಮಿಷಗಳ ಕಾಲ ಇರುತ್ತದೆ.

ಈ ಸಮಯದಲ್ಲಿ ರಾಮಲಾಲಾಗೆ 56 ನೈವೇದ್ಯಗಳನ್ನು ಅರ್ಪಿಸಲಾಗುವುದು ಮತ್ತು ವಿಶೇಷ ಅಲಂಕಾರವನ್ನು ಮಾಡಲಾಗುತ್ತದೆ. ಈ ಐತಿಹಾಸಿಕ ಕ್ಷಣವನ್ನು ತಜ್ಞರ ತಂಡವು ಕಾರ್ಯಗತಗೊಳಿಸಲಿದ್ದು ಪ್ರಪಂಚದಾದ್ಯಂತ ನೇರ ಪ್ರಸಾರ ಮಾಡಲಾಗುವುದು. ಈ ಅದ್ಭುತ ದೃಶ್ಯವನ್ನು ನೋಡಿ ಪ್ರಪಂಚದಾದ್ಯಂತದ ಭಕ್ತರು ಸಂತೋಷದಿಂದ ಶ್ರೀರಾಮನಾಮ ಜಪಿಸಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ಮಾಹಿತಿಯನ್ನು ನೀಡಿದ್ದಾರೆ.
ಅಯೋಧ್ಯೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ದೀಪ
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್, ಶ್ರೀ ರಾಮ ಜನ್ಮೋತ್ಸವದ ಈ ದಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ದಿನ ಅಯೋಧ್ಯೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಗುತ್ತದೆ. ಜೊತೆಗೆ ಕನಕ ಭವನದಿಂದ 'ಪಾರಂಪರಿಕ ನಡಿಗೆ' ಆಯೋಜಿಸಲಾಗುವುದು.

ಈ ನಡಿಗೆಯ ಮೂಲಕ ಭಕ್ತರು ಮತ್ತು ಪ್ರವಾಸಿಗರು ಅಯೋಧ್ಯೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹತ್ತಿರದಿಂದ ನೋಡಲು ಸಾಧ್ಯವಾಗುತ್ತದೆ. ರಾಮ ಕಥಾ ಪಾರ್ಕ್‌ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.ಈ ದಿನ ಶ್ರೀ ರಾಮನಿಗೆ ಸಮರ್ಪಿತವಾದ ಹಾಡುಗಳು ಮತ್ತು ಭಜನ್ ಜೊತೆಗೆ ರಾಮನಗರಿಯಲ್ಲಿ ಪ್ರತಿಧ್ವನಿಸುತ್ತವೆ ಎಂದಿದ್ದಾರೆ.
ಏಪ್ರಿಲ್ 6ರ ಭಾನುವಾರದಂದು ರಾಮ ನವಮಿಯಂದು ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಮಾಲಿನಿ ಅವಸ್ಥಿ ಮತ್ತು ಕೈಲಾಶ್ ಖೇರ್ ಅವರು ರಾಮ ಜನ್ಮೋತ್ಸವಕ್ಕೆ ಸಂಬಂಧಿಸಿದ ವರ್ಚುವಲ್ ಪ್ರಸ್ತುತಿಯನ್ನು ನೀಡಲಿದ್ದಾರೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications