ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಅಸಾದುದ್ದೀನ್ ಓವೈಸಿ ಪ್ರಚೋದನಕಾರಿ ಹೇಳಿಕೆ!
ದೆಹಲಿ ಜನವರಿ 3: 'ನಾವು ನಮ್ಮ ಮಸೀದಿಯನ್ನು ಕಳೆದುಕೊಂಡಿದ್ದೇವೆ' ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಮಲಲ್ಲಾ ಪಟ್ಟಾಭಿಷೇಕದ ಸಿದ್ಧತೆಯ ನಡುವೆಯೇ ಅಸಾದುದ್ದೀನ್ ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಸೋಮವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಮಸೀದಿಗಳು ನಮ್ಮಿಂದ ದೂರವಾಗದಂತೆ ಮಸೀದಿಗಳನ್ನು ಇರಿಸುವಂತೆ ಯುವಕರಿಗೆ ಕರೆ ನೀಡಿದ್ದಾರೆ.

"ಯುವಜನರೇ, ನಾನು ನಿಮಗೆ ಹೇಳುತ್ತಿದ್ದೇನೆ, ನಾವು ನಮ್ಮ ಮಸೀದಿಯನ್ನು ಕಳೆದುಕೊಂಡಿದ್ದೇವೆ ಮತ್ತು ಅಲ್ಲಿ ಏನು ಮಾಡಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ನಿಮ್ಮ ಹೃದಯದಲ್ಲಿ ನೋವು ಇಲ್ಲವೇ?" ಎಂದು ಸೋಮವಾರ ಭವಾನಿ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಓವೈಸಿ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಓವೈಸಿಯ ಪ್ರಚೋದನಕಾರಿ ಹೇಳಿಕೆ
"ನಾವು 500 ವರ್ಷಗಳಿಂದ ಕುಳಿತು ಕುರಾನ್ ಪಠಿಸಿದ ಸ್ಥಳ ಇಂದು ನಮ್ಮ ಕೈಯಲ್ಲಿಲ್ಲ, ಯುವಕರೇ, ಸುನ್ಹೇರಿ ಮಸೀದಿ (ಸುವರ್ಣ ಮಸೀದಿ) ಇನ್ನೂ ಮೂರು-ನಾಲ್ಕು ಮಸೀದಿಗಳ ಬಗ್ಗೆ ಪಿತೂರಿ ನಡೆಯುತ್ತಿರುವುದು ನಿಮಗೆ ಕಾಣಿಸುತ್ತಿಲ್ಲವೇ? ದೆಹಲಿಯೂ ಸೇರಿದೆಯೇ? ವರ್ಷಗಳ ಕಠಿಣ ಪರಿಶ್ರಮದ ನಂತರ ನಾವು ಇಂದು ನಮ್ಮ ಸ್ಥಾನವನ್ನು ಸಾಧಿಸಿದ್ದೇವೆ. ನೀವು ಈ ವಿಷಯಗಳತ್ತ ಗಮನ ಹರಿಸಬೇಕು ಎಂದು ಓವೈಸಿ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಮಾತ್ರವಲ್ಲ, ಇತರ ಕೆಲ ಮಸೀದಿಗಳನ್ನು ಟಾರ್ಗೆಟ್ ಮಾಡಲಾಗಿದೆ. ಈ ಪೈಕಿ ದೆಹಲಯ ಸುನ್ಹೇರಿ ಮಸೀದಿಯೂ ಸೇರಿಕೊಂಡಿದೆ. ಸತತ ಹೋರಾಟ, ಪರಿಶ್ರಮದಿಂದ ನಾವು ಈ ಸ್ಥಾನದಲ್ಲಿ ನಿಂತಿದ್ದೇವೆ.ಆದರೆ ನಾವು ಒಗ್ಗಟ್ಟಾಗಿ ಹೋರಾಡದಿದ್ದರೆ ಯಾವುದು ಉಳಿಯುವುದಿಲ್ಲ. ಮುಸ್ಲಿಂ ಯುವಕರೇ ಸದಾ ಎಚ್ಚರಿಕೆಯಿಂದ ಇರಬೇಕು, ಸಂಘಟಿತರಾಗಬೇಕು ಎಂದು ಒವೈಸಿ ಕರೆ ನೀಡಿದ್ದಾರೆ.
ಇತ್ತೀಚೆಗೆ ಮಥುರಾ ಶ್ರೀ ಕೃಷ್ಣ ಮಂದಿರ ಆವರಣದಲ್ಲಿರುವ ಈದ್ಗಾ ಮಸೀದಿ ಸರ್ವೇ ಕಾರ್ಯಕ್ಕೆ ಕೋರ್ಟ್ ಅನುಮತಿ ನೀಡಿತ್ತು. ಇದು ಹಲವರು ಮುಸ್ಲಿಂ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವೇಳೆ ಪ್ರತಿಕ್ರಿಯಿಸಿದ ಒವೈಸಿ, ಈಗನ ಬಿಜೆಪಿ ಸರ್ಕಾರಕ್ಕೆ ಮುಸ್ಲಿಮರ ಘನತೆಯನ್ನು ಕಸಿಯುತ್ತಿದೆ. ಸರ್ವೆ ಪೂಜಾ ಸ್ಥಳ ಕಾಯ್ದೆಗೆ ವಿರುದ್ಧವಾಗಿದೆ. ಇದಕ್ಕ ಅವಕಾಶ ನೀಡಬಾರದು ಎಂದು ಒವೈಸಿ ಒತ್ತಾಯಿಸಿದ್ದರು.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಭರದ ಸಿದ್ಧತೆ ನಡೆಯುತ್ತಿರುವಾಗಲೇ ಒವೈಸಿ ಈ ಹೇಳಿಕೆ ನೀಡಿದ್ದಾರೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಭಗವಾನ್ ರಾಮ್ ಲಲ್ಲಾ ಪವಿತ್ರೀಕರಣಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ದೇಶದಾದ್ಯಂತ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಅವಧಿಯಲ್ಲಿ ದೇಶದ ಎಲ್ಲಾ ದೊಡ್ಡ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯಲಿವೆ. ಈ ಕಾರ್ಯದಲ್ಲಿ ದೇಶದ ಎಲ್ಲ ಜನರನ್ನು ಸಂಪರ್ಕಿಸಲು ಸಿದ್ಧತೆ ನಡೆಸಲಾಗಿದೆ.












Click it and Unblock the Notifications