• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಸಭೆ ಚುನಾವಣೆ 2020: 19 ರಲ್ಲಿ 10 ಸ್ಥಾನ ಗೆದ್ದ ಎನ್ಡಿಎ

|

ನವದೆಹಲಿ, ಜೂನ್ 19: ಕೊರೊನಾವೈರಸ್ ಹಿನ್ನೆಲೆಯಿಂದ ಮುಂದೂಡಲ್ಪಟ್ಟಿದ್ದ ರಾಜ್ಯಸಭೆ ಚುನಾವಣೆ ಕೊನೆಗೂ ರಾಜ್ಯಸಭೆಯ 19 ಸ್ಥಾನಗಳಿಗೆ ಶುಕ್ರವಾರ(ಜೂನ್ 19) ರಂದು ಚುನಾವಣೆ ನಡೆದಿದ್ದು, ರಾತ್ರಿ ವೇಳೆಗೆ ಅಧಿಕೃತವಾಗಿ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

   ಮತ್ತೆ ಕ್ರಿಕೆಟ್ ಅಂಗಳಕ್ಕೆ ವಾಪಸಾದ ಶ್ರೀಶಾಂತ್ | Sreesanth | Oneindia Kannada

   ರಾಜ್ಯಸಭೆ ಚುನಾವಣೆ 2020 ಫಲಿತಾಂಶ: 19 ಸ್ಥಾನಗಳ ಪೈಕಿ 10 ಸ್ಥಾನ ಗೆದ್ದ ಎನ್ಡಿಎ; ಬಿಜೆಪಿ 8, ಕಾಂಗ್ರೆಸ್ 5, ವೈಎಸ್ಸಾರ್ ಕಾಂಗ್ರೆಸ್ 4, ಎನ್ಪಿಪಿ 1, ಎಂಎನ್ಎಫ್ 1.

   ಮಾರ್ಚ್ ತಿಂಗಳಿನಲ್ಲಿ ನಿಗದಿಯಾಗಿದ್ದ ರಾಜ್ಯಸಭೆ ಚುನಾವಣೆಯನ್ನು ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಮುಂದೂಡಿತ್ತು. ಮಾರ್ಚ್ 26 ರಂದು ರಾಜ್ಯಸಭೆಯ 55 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಆದರೆ, ನಂತರ ಜೂನ್ 19ಕ್ಕೆ ಚುನಾವಣೆ ಮುಂದೂಡಲಾಯಿತು. ಜೂನ್ 19 ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆದಿದ್ದು, ಗುಜರಾತ್ ಫಲಿತಾಂಶ ವಿಳಂಬವಾಗಿ ಪ್ರಕಟವಾಗಿದೆ. ಜೂನ್ 22ರೊಳಗೆ ಎಲ್ಲಾ ಚುನಾವಣೆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕಿತ್ತು.

   Oneindia explainer; ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?

   ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಣಿಪುರ, ಜಾರ್ಖಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ ಹಾಗೂ ರಾಜಸ್ಥಾನ ರಾಜ್ಯಗಳಿಗೆ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ ಕರ್ನಾಟಕದ 4 ಹಾಗೂ ಅರುಣಾಚಲಪ್ರದೇಶದ ಒಂದು ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ.

   LIVE: ರಾಜ್ಯಸಭೆ ಚುನಾವಣೆ 2020 ಫಲಿತಾಂಶ

   19 ಸ್ಥಾನಗಳ ಫಲಿತಾಂಶ ಬಾಕಿ: ಅಂಧ್ರಪ್ರದೇಶ (4 ಸ್ಥಾನ), ಗುಜರಾತ್ (4), ಮಧ್ಯಪ್ರದೇಶ(3), ಜಾರ್ಖಂಡ್(2), ಮಣಿಪುರ(1), ಮೇಘಾಲಯ (1), ಮಿಜೋರಾಂ (1) ಹಾಗೂ ರಾಜಸ್ಥಾನದ (3) ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಫಲಿತಾಂಶ ಮುಂದಿದೆ..

   ಕರ್ನಾಟಕ (4): ಬಿಜೆಪಿ 2, ಕಾಂಗ್ರೆಸ್ 1, ಜೆಡಿಎಸ್ 1

   ಕರ್ನಾಟಕ (4): ಬಿಜೆಪಿ 2, ಕಾಂಗ್ರೆಸ್ 1, ಜೆಡಿಎಸ್ 1

   ಕರ್ನಾಟಕ (4 ಸ್ಥಾನ): ಬಿಜೆಪಿಯಿಂದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನಿಂದ ಎಚ್. ಡಿ. ದೇವೇಗೌಡ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

   ಮಲ್ಲಿಕಾರ್ಜುನ ಖರ್ಗೆ ಮತ್ತು ಎಚ್. ಡಿ. ದೇವೇಗೌಡ 2019ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು.

   *******

   ಅರುಣಾಚಲಪ್ರದೇಶ (1ಸ್ಥಾನ): ಭಾರತೀಯ ಜನತಾ ಪಕ್ಷ(ಬಿಜೆಪಿ)ಯ ಅಭ್ಯರ್ಥಿ ನಬಾಮ್ ರೆಬಿಯಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

   ಜಾರ್ಖಂಡ್ (2): ಬಿಜೆಪಿ 1, ಜೆಎಂಎಂ 1

   ಜಾರ್ಖಂಡ್ (2): ಬಿಜೆಪಿ 1, ಜೆಎಂಎಂ 1

   ಜಾರ್ಖಂಡ್ (2): ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಹಾಗೂ ಬಿಜೆಪಿಗೆ ತಲಾ 1 ಸ್ಥಾನ ಗಳಿಸಿದೆ. ಜೆಎಂಎಂ ಅಧ್ಯಕ್ಷ ಶಿಬು ಸೊರೆನ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ದೀಪಕ್ ಪ್ರಕಾಶ್ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಶಿಬು 31 ಹಾಗೂ ಪ್ರಕಾಶ್ 30, ಕಾಂಗ್ರೆಸ್ಸಿನ ಶಹಜಾದಾ ಅನ್ವಾ 18 ಮತಗಳಿಸಿದರು.

   ಚಿತ್ರದಲ್ಲಿ: ಜೆಎಂಎಂ ಅಧ್ಯಕ್ಷ ಶಿಬು ಸೊರೆನ್

   ಮಧ್ಯಪ್ರದೇಶ (3) : ಬಿಜೆಪಿ 2, ಕಾಂಗ್ರೆಸ್ 1

   ಮಧ್ಯಪ್ರದೇಶ (3) : ಬಿಜೆಪಿ 2, ಕಾಂಗ್ರೆಸ್ 1

   ಮಧ್ಯಪ್ರದೇಶ (3) : ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಇತ್ತೀಚೆಗೆ ಬಿಜೆಪಿ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಸುಮೇರ್ ಸಿಂಗ್ ಸೋಲಂಕಿ ಬಿಜೆಪಿ ಅಭ್ಯರ್ಥಿಗಳಾಗಿ ಜಯಗಳಿಸಿದರೆ, ಕಾಂಗ್ರೆಸ್ಸಿನಿಂದ ಹಿರಿಯ ರಾಜಕಾರಣಿ ದಿಗ್ವಿಜಯ್ ಸಿಂಗ್ ಗೆಲುವು ಸಾಧಿಸಿದ್ದಾರೆ.

   ರಾಜಸ್ಥಾನ(3): ಕಾಂಗ್ರೆಸ್ 2, ಬಿಜೆಪಿ 1

   ರಾಜಸ್ಥಾನ(3): ಕಾಂಗ್ರೆಸ್ 2, ಬಿಜೆಪಿ 1

   ರಾಜಸ್ಥಾನ(3): ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಕೆಸಿ ವೇಣುಗೋಪಾಲ್, ನೀರಜ್ ಡಾಂಗಿ ಗೆಲುವು ಸಾಧಿಸಿದರೆ, ಬಿಜೆಪಿಯಿಂದ ರಾಜೇಂದ್ರ ಗೆಹ್ಲೋಟ್ ಗೆದ್ದಿದ್ದಾರೆ.

   ಮಾಜಿ ಸಂಸದ ಕೆಸಿ ವೇಣುಗೋಪಾಲ್ ಅವರು ಇದೇ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸುತ್ತಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ, ಮಲ್ಲಿಕಾರ್ಜುನ ಖರ್ಗೆ, ಎಂ ತಂಬಿ ದೊರೈ(ಲೋಕಸಭೆ ಮಾಜಿ ಸ್ಪೀಕರ್),ಕೆಆರ್ ಸುರೇಶ್ ರೆಡ್ಡಿ ಕೂಡಾ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ.

   ಮಣಿಪುರ (1): ಬಿಜೆಪಿಗೆ ಗೆಲುವು

   ಮಣಿಪುರ (1): ಬಿಜೆಪಿಗೆ ಗೆಲುವು

   ಬಿಜೆಪಿ ಏಕೈಕ ಸ್ಥಾನವನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ಸಿನ ಮೂವರು ರೆಬೆಲ್ ಶಾಸಕರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಮೂವರು ಶಾಸಕರು ವಿಧಾನಸಭೆ ಪ್ರವೇಶಿಸದಂತೆ ಹೈಕೋರ್ಟ್ ಆದೇಶವಿತ್ತು. ಆದರೂ, ಸ್ಪೀಕರ್ ಮೂವರಿಗೂ ಮತ ಹಾಕಲು ಅನುಮತಿ ನೀಡಿದ್ದರು. ಎಐಟಿಸಿ ಶಾಸಕ ಮತದಾನ ಮಾಡಲಿಲ್ಲ. ಮೂವರು ಬಿಜೆಪಿ ಶಾಸಕರೂ ಮತ ಹಾಕಲಿಲ್ಲ. ನಾಲ್ವರು ಎನ್ ಪಿಪಿ ಸಚಿವರು ಮತ ಹಾಕಿದರು.

   ಮೇಘಾಲಯ(1): ಎನ್ ಪಿಪಿಗೆ ಗೆಲುವು

   ಮೇಘಾಲಯ(1): ಎನ್ ಪಿಪಿಗೆ ಗೆಲುವು

   ಮೇಘಾಲಯ(1): ನ್ಯಾಷನಲ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಡಬ್ಲ್ಯೂ ಆರ್ ಖಾರ್ಲುಖಿ ಗೆಲುವುಸಾಧಿಸಿದ್ದಾರೆ.

   ****

   ಮಿಜೋರಾಂ 1 : ಎಂಎನ್ಎಫ್ ಗೆ ಗೆಲುವು

   ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ಮಿಜೋರಾಂ ರಾಜ್ಯಸಭೆ ಚುನಾವಣೆಯ ಏಕೈಕ ಸ್ಥಾನವನ್ನು ಮಿಜೋ ನ್ಯಾಷನಲ್ ಫ್ರಂಟ್ ಅಭ್ಯರ್ಥಿ ಕೆ ವನ್ಲಾಲ್ವೆನಾ ಅವರು ದಕ್ಕಿಸಿಕೊಂಡಿದ್ದಾರೆ

   ಆಂಧ್ರಪ್ರದೇಶ (4): 4 ವೈಎಸ್ಸಾರ್ ಕಾಂಗ್ರೆಸ್

   ಆಂಧ್ರಪ್ರದೇಶ (4): 4 ವೈಎಸ್ಸಾರ್ ಕಾಂಗ್ರೆಸ್

   ಆಂಧ್ರಪ್ರದೇಶ(4): ಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ ಪಕ್ಷವು ಎಲ್ಲಾ ನಾಲ್ಕು ಸ್ಥಾನಗಳನ್ನು ನಿರೀಕ್ಷೆಯಂತೆ ಗೆದ್ದುಕೊಂಡಿದೆ. ಪಕ್ಷದ ಅಭ್ಯರ್ಥಿಗಳಾದ ಪಿಲ್ಲಿ ಸುಭಾಷ್ ಚಂದ್ರ ಬೋಸ್, ಮೊಪಿದೇವಿ ವೆಂಕಟರಮಣ, ಅಲ್ಲ ಅಯೋಧ್ಯಾರಾಮಿ ರೆಡ್ಡಿ, ಪರಿಮಲ್ ನಾತ್ವಾನಿ ಗೆಲುವು ಸಾಧಿಸಿದ್ದಾರೆ. ಈ ಪೈಕಿ ಉದ್ಯಮಿ ಪರಿಮಲ್ ನಾತ್ವಾನಿ ಅವರನ್ನು ಮತ್ತೊಂದು ಅವಧಿಗೆ ಮೇಲ್ಮನೆಗೆ ಕಳಿಸಲು ಜಗನ್ ನಿರ್ಧಾರ ತೆಗೆದುಕೊಂಡಿದ್ದರ ಹಿಂದೆ ಅಪಸ್ವರ ಕೇಳಿ ಬಂದಿತ್ತು. ಮುಖೇಶ್ ಅಂಬಾನಿ ಒತ್ತಡದಿಂದ ನಾತ್ವಾನಿ ಆಯ್ಕೆಯಾಗಿದೆ ಎಂಬುದು ಬಹಿರಂಗ ಸತ್ಯವಾಗಿದೆ.

   ಗುಜರಾತ್ (4): ಬಿಜೆಪಿ 3, ಕಾಂಗ್ರೆಸ್ 1

   ಗುಜರಾತ್ (4): ಬಿಜೆಪಿ 3, ಕಾಂಗ್ರೆಸ್ 1

   ಗುಜರಾತ್ 4 ಸ್ಥಾನಗಳ ಪೈಕಿ ಬಿಜೆಪಿ 3, ಕಾಂಗ್ರೆಸ್ 1ರಲ್ಲಿ ಗೆಲುವು;

   ಬಿಜೆಪಿಯ ಅಭಯ್ ಭಾರದ್ವಾಜ್, ರಮಿಲಾ ಬರ, ನರ್ಹರಿ ಅಮಿನ್ ಗೆ ಗೆಲುವು; ಕಾಂಗ್ರೆಸ್ ಅಭ್ಯರ್ಥಿ ಶಕ್ತಿಸಿಂಗ್ ಗೋಹಿಲ್ ಗೆ ಜಯ

   ***

   ಬಿಜೆಪಿ ಶಾಸಕ ಕೇಸರಿ ಸಿಂಗ್ ಸೋಲಂಕಿ ಹಾಗೂ ಸಚಿವ ಭೂಪೇಂದ್ರ ಸಿಂಗ್ ಚೂಡಾಸಮಾ ಅವರ ಮತಗಳನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಚೂಡಾಸಮಾ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಗುಜರಾತ್ ಹೈಕೋರ್ಟ್ ಆದೇಶ ನೀಡಿದೆ. ಗುರುವಾರದ ತನಕ ಹುಷಾರಾಗಿದ್ದ ಕೇಸರಿ ಸಿಂಗ್ ಅವರು ಶುಕ್ರವಾರದಂದು ಪ್ರಾಕ್ಸಿ ವೋಟ್ ಹಾಕಿಸಿದ್ದಾರೆ. ಹೀಗಾಗಿ, ಎರಡು ಮತ ಅನೂರ್ಜಿತಗೊಳಿಸಲು ಕಾಂಗ್ರೆಸ್ ಆಗ್ರಹಿಸಿದೆ.

   English summary
   Rajya Sabha Election Results 2020: Elections for 19 Rajya Sabha seats spread across eight states held on Friday(June 19). Here are the list of New Members Elected To Rajya Sabha.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X