ರಜನಿ 'ಬಾಬಾ' ಚಿನ್ಹೆಯಿಂದ ಮುಂಬೈ ಕಂಪನಿಗೆ ಚಿಂತೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada
   ರಜಿನಿ ತಮ್ಮ ಪಕ್ಷಕ್ಕೆ ಯಾವ ಚಿಹ್ನೆ ಬಳಸ್ತಾರಂತೆ ಗೊತ್ತಾ ? | Oneindia Kannada

   ಮುಂಬೈ, ಜನವರಿ 08: ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸುವ ಬಗ್ಗೆ ಘೋಷಿಸಿದ ನಂತರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಬಾಬಾ ಚಿತ್ರದಲ್ಲಿ ಬಳಸಲಾದ ಯೋಗ ಮುದ್ರೆಯೊಂದನ್ನೇ ರಜನಿ ಅವರು ತಮ್ಮ ಪಕ್ಷಕ್ಕೆ ಬಳಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದರ ಜತೆಗೆ ರಜನಿ ಅವರ ಈ ಚಿನ್ಹೆ ಬಗ್ಗೆ ಮುಂಬೈನ ನವೋದ್ಯಮ(start up) ಸಂಸ್ಥೆಯೊಂದು ತಲೆ ಕೆಡಿಸಿಕೊಂಡಿದೆ.

   ಮಧ್ಯದ ಬೆರಳು ಹಾಗೂ ಉಂಗುರದ ಬೆರಳನ್ನು ಹೆಬ್ಬರಳು ಒತ್ತಿ ಹಿಡಿಯುವ ಅಪಾನ ಮುದ್ರೆಯನ್ನು ರಜನಿ ಅವರು ತಮ್ಮ ಪಕ್ಷದ ಚಿನ್ಹೆಯಾಗಿ ಬಳಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮುಂಬೈ ಸಂಸ್ಥೆ ತಲೆ ಕೆಡಿಸಿಕೊಳ್ಳಲು ಕಾರಣವಿದೆ.

   Rajinikanth’s hand symbol has this Mumbai start up worried, here is why

   18 ತಿಂಗಳ ಹಿಂದೆ ಆರಂಭವಾದ ನೆಟ್ವರ್ಕಿಂಗ್ ಅಪ್ಲಿಕೇಷನ್ ಸಂಸ್ಥೆ ವೋಕ್ಸ್ ವೆಬ್ (Voxweb) ನ ಲೋಗೋ ಕೂಡಾ ಇದೇ ರೀತಿ ಇದೆ. ಇದೇ ರೀತಿ ಲೋಗೋ ಬೇರೆ ಕಂಪನಿ ಅಥವಾ ಬ್ರ್ಯಾಂಡ್ ಇದ್ದರೆ ನಾವು ಅಷ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

   ಆದರೆ, ರಾಜಕೀಯ ಪಕ್ಷವೊಂದರ ಚಿನ್ಹೆ, ಅದರಲ್ಲೂ ರಜನಿಕಾಂತ್ ಅವರು ಈ ಚಿನ್ಹೆಯನ್ನು ಬಳಸುತ್ತಿದ್ದಾರೆ ಎಂದ ಮೇಲೆ ಇದರ ಪ್ರಭಾವವನ್ನು ಊಹಿಸಲು ಸಾಧ್ಯವಿಲ್ಲ. ಇದರಿಂದ ನಮ್ಮಂತ ಪ್ರವರ್ಧಮಾನಕ್ಕೆ ಬರುತ್ತಿರುವ ಕಂಪನಿ ಮೇಲಂತೂ ಭಾರಿ ಪರಿಣಾಮ ಬೀರುತ್ತದೆ ಎಂದು ವೋಕ್ಸ್ ವೆಬ್ ನ ಸ್ಥಾಪಕ ಯಶ್ ಮಿಶ್ರಾ ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The hand symbol made popular by Rajinikanth has a start up in Mumbai worried. The hand position that the actor-and-would-be politician is known for is often likened to "apana mudra", a yoga finger and palm posture.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ