ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸುಂಧರಾ ರಾಜೇ ನಮ್ಮ ಫ್ಯಾಮಿಲಿ ಫ್ರೆಂಡ್: ಲಲಿತ್

By Mahesh
|
Google Oneindia Kannada News

ನವದೆಹಲಿ, ಜೂ.16: ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿಗೆ ವೀಸಾ ಒದಗಿಸಿದ ಪ್ರಕರಣದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ನಂತರ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೆಸರು ಕೇಳಿ ಬಂದಿದೆ. ಲಲಿತ್ ಮೋದಿ ಕೂಡಾ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ, ರಾಜೇ ಅವರು ನಮ್ಮ ಫ್ಯಾಮಿಲಿ ಫ್ರೆಂಡ್ ಎಂದಿದ್ದಾರೆ.

ಮಾಂಟೆನೆಗ್ರೋದಲ್ಲಿ ಹಾಲಿಡೇ ಮೂಡ್ ನಲ್ಲಿದ್ದ ಲಲಿತ್ ಮೋದಿ ಅವರನ್ನು ಇಂಡಿಯಾ ಟುಡೇ ಟಿವಿಯ ರಾಜದೀಪ್ ಸರ್ದೇಸಾಯಿ ಅವರು ಸಂದರ್ಶಿಸಿದ್ದಾರೆ. ಸಂದರ್ಶನದ ವೇಳೆ ಲಲಿತ್ ಮೋದಿ ಅವರು ಅನೇಕ ವಿಷಯಗಳನ್ನು ಹೊರ ಹಾಕಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗಾಗಿ ತಮ್ಮ ಪತ್ನಿಯನ್ನು ಕರೆದೊಯ್ದಿದ್ದೆ ವಸುಂಧರಾ ರಾಜೇ, ಲಂಡನ್ ನಲ್ಲಿ ನೆಲೆಸಲು, ಲಂಡನ್ನಿಂದ ಪೋರ್ಚುಗಲ್ ಆಸ್ಪತ್ರೆಗೆ ತೆರಳಲು ರಾಜೇ ನೆರವಾದರು ಎಂದಿದ್ದಾರೆ.

ಆದರೆ, ಕ್ಯಾನ್ಸರ್ ಪೀಡಿತ ಪತ್ನಿ ಶಸ್ತ್ರಚಿಕಿತ್ಸೆಯಾದ ಮೂರು ದಿನಗಳ ಬಳಿಕ ಇಡೀ ಕುಟುಂಬ ಸಂಭ್ರಮಾಚರಣೆಯಲ್ಲಿ ತೊಡಗಿದ್ದರ ಬಗ್ಗೆ ರಾಜದೀಪ್ ಕೇಳಿದ ಪ್ರಶ್ನೆಗೆ ಲಲಿತ್ ಸಮರ್ಪಕ ಉತ್ತರ ನೀಡಲಿಲ್ಲ. ಮಾರಾಣಾಂತಿಕ ಕಾಯಿಲೆ ದೂರಾದ ಖುಷಿಯನ್ನು ಆಚರಿಸಿದ್ದು ತಪ್ಪೇ ಎಂದಿದ್ದಾರೆ. ಮೋದಿ ಹೇಳಿದ ಮಾತುಗಳು ಹಾಗೂ ಮೋದಿ ಹಾಗೂ ರಾಜೇ ಕುಟುಂಬ ಗೆಳೆತನ ವಿವರ ಇಂತಿದೆ:

Lalit Modi

* 2011ರಲ್ಲಿ ರಾಜಸ್ಥಾನದ ಪ್ರತಿಪಕ್ಷ ನಾಯಕಿಯಾಗಿದ್ದ ವಸುಂಧರಾ ಅವರು ಲಲಿತ್ ಮೋದಿ ಅವರ ವಲಸೆ ದಾಖಲೆಗಳಿಗೆ 'ವಿಟ್ನೆಸ್' ಆಗಿದ್ದರು.
* ಲಲಿತ್‌ ಮೋದಿ ಅವರ ವಕೀಲ ಮೆಹಮೂದ್‌ ಅಬ್ದಿ ಅವರ ತಂಡ ಮಾಧ್ಯಮಗಳಿಗೆ ನೀಡಿದ ಪತ್ರದಲ್ಲಿ ರಾಜೇ ಅವರ ನೆರವಿನ ಬಗ್ಗೆ ಮಾಹಿತಿ ಇದೆ.
* ಲಲಿತ್‌ ಮೋದಿ ಅವರ ಪತ್ನಿ ಪೋರ್ಚುಗಲ್‌ನಲ್ಲಿರುವ ಲಂಡನ್‌ ಮೂಲದ "ಚಾಂಪ್ಲಿಮೌಡ್‌ ಫೌಂಡೇಷನ್‌' ಆಸ್ಪತ್ರೆಯೊಂದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. 2014ರಲ್ಲಿ ವಸುಂಧರಾ ರಾಜೇ ಅವರು ರಾಜಸ್ಥಾನದ ಸಿಎಂ ಆದ ಬಳಿಕ ಇದೇ ಚಾಂಪ್ಲಿಮೌಡ್‌ ಫೌಂಡೇಷನ್‌ಗೆ ರಾಜಸ್ಥಾನದಲ್ಲಿ ಆಸ್ಪತ್ರೆಗೆ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
* ಆಸ್ಪತ್ರೆಗೆ ನಿರ್ಮಿಸಲು ಲಂಡನ್‌ ಮೂಲದ ಕಂಪನಿಗೆ 35000 ಚದರಅಡಿಯಷ್ಟು ಜಾಗವನ್ನು ರಾಜಸ್ಥಾನ ಸರ್ಕಾರ ನೀಡಿದೆ.
* ಲಲಿತ್‌ ಮೋದಿ ಕುಟುಂಬದ ಪರಿಚಯ ನನಗೆ ಚೆನ್ನಾಗಿದೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವ ಪತ್ರ(2011ರ ಸಾಕ್ಷಿ ಹೇಳಿಕೆ)ದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.

English summary
Lalit Modi, former IPL chief, tonight made explosive claims that Rajasthan Chief Minister Vasundhra Raje had supported in writing his immigration plea in Britain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X