ಕಾಂಗ್ರೆಸ್‌ನಿಂದ ಸಚಿನ ಪೈಲಟ್‌ ದೂರವಾಗುವುದು ಬಹುತೇಕ ಖಚಿತ: ಹೊಸ ಪಕ್ಷ ನಿಶ್ಚಿತ- ಮೂಲಗಳು ಹೇಳುತ್ತಿರುವುದೇನು?

ಜೈಪುರ, ಜೂನ್‌ 06: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಕಾಂಗ್ರೆಸ್‌ನಿಂದ ಸಂಬಂಧವನ್ನು ಕಡಿದುಕೊಳ್ಳಲು ಸಿದ್ಧರಾಗಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರೊಂದಿಗಿನ ಸುದೀರ್ಘ ಸಂಘರ್ಷದ ಬಳಿಕ ಪೈಲಟ್ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿನ್‌ ಪೈಲಟ್ ಅವರು ಜೂನ್ 11 ರಂದು ತಮ್ಮ ಹೊಸ ಪಕ್ಷವನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Sachin Pilot to snap ties with Congress

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಿಷ್ಕ್ರಿಯವಾಗಿದೆ. ಇದರ ವಿರುದ್ಧ ಪ್ರತಿಭಟಿಸಲು ಇತ್ತೀಚೆಗೆ 'ಜನಸಂಘರ್ಷ ಯಾತ್ರೆ' ಅನ್ನು ಸಚಿನ್‌ ಪೈಲಟ್‌ ಅವರು ಕೈಗೊಂಡಿದ್ದಾರೆ. ಇದಾದ ಬಳಿಕ ಸಚಿನ್‌ ಪೈಲಟ್‌ ಅವರು ದೇವಾಲಯಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ.

ಮೂಲಗಳ ಪ್ರಕಾರ, ಪ್ರಗತಿಶೀಲ ಕಾಂಗ್ರೆಸ್ ಮತ್ತು ರಾಜ್ ಜನ್ ಸಂಘರ್ಷ್ ಪಕ್ಷ ಸೇರಿದಂತೆ ಎರಡು ಹೊಸ ರಾಜಕೀಯ ಪಕ್ಷಗಳು ರಾಜಸ್ಥಾನದಲ್ಲಿ ನೋಂದಣಿಯಾಗಿವೆ.

ಗೆಹಲೋಟ್‌ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸಲಿರುವ ಪೈಲಟ್ ಜೂನ್ 11 ರಂದು ತಮ್ಮ ರಾಜಕೀಯ ಪಕ್ಷವನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Sachin Pilot to snap ties with Congress

ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಲಿರುವ ಪೈಲಟ್, ತಮ್ಮ ಹೊಸ ಪಕ್ಷದ ಹೆಸರಿನೊಂದಿಗೆ ರಾಜ್ಯ ಪ್ರವಾಸ ಮಾಡಲಿದ್ದಾರೆ.

ರಾಜ್ಯಾದ್ಯಂತ ಪ್ರವಾಸದ ಮಾರ್ಗಸೂಚಿಯಂತೆ ಸಚಿನ್‌ ಪೈಲಟ್‌ ಮೊದಲು ಮಾರ್ವಾರ್‌ಗೆ ಭೇಟಿ ನೀಡಲಿದ್ದಾರೆ.

ಪೈಲಟ್ ಮತ್ತು ಗೆಹಲೋಟ್‌ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ದೆಹಲಿಯಲ್ಲಿ ಸಭೆ ನಡೆಸಿದ್ದರು. ಆದಾಗ್ಯೂ, ಈ ಇಬ್ಬರು ನಾಯಕರು ತಮ್ಮ ಬೇಡಿಕೆಗಳ ಮೇಲೆ ಅಚಲವಾಗಿದ್ದರಿಂದ ಈ ಸಂಧಾನ ವಿಫಲವಾಗಿದೆ ಎಂದು ತಿಳಿದುಬಂದಿದೆ.

Sachin Pilot to snap ties with Congress

ಹೊಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಂಧಾನ ಸೂತ್ರ ಕೆಲಸ ಮಾಡಿದೆ ಎಂದು ವರದಿಯಾಗಿತ್ತು. ಆದರೆ, ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಈ ಇಬ್ಬರು ನಾಯಕರನ್ನು ಸಮಾಧಾನ ಮಾಡುವಲ್ಲಿ ಖರ್ಗೆ ಅವರು ವಿಫಲರಾಗಿದ್ದಾರೆ ಎನ್ನಲಾಗಿದೆ.

ಕಳೆದ ತಿಂಗಳು, ಪೈಲಟ್ ಅವರು ಗೆಹ್ಲೋಟ್ ಸರ್ಕಾರ ಮತ್ತು ಅದರ ಕಾರ್ಯವೈಖರಿಯ ಮೇಲೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದರು. ನಂತರ ಅವರು ಕಾಂಗ್ರೆಸ್ ಹೈಕಮಾಂಡ್ ಅನ್ನು ಭೇಟಿ ಮಾಡಿದ್ದರು.

ತಮ್ಮ ಕ್ಷೇತ್ರ ಟೋಂಕ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರು ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಉದ್ಯೋಗದಂತಹ ವಿಷಯಗಳ ಬಗ್ಗೆ ಗೆಹ್ಲೋಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+