Rajasthan: ಭ್ರಷ್ಟಾಚಾರ ಕ್ವಿಟ್ 'ಇಂಡಿಯಾ': I.N.D.I.A ಮೈತ್ರಿಕೂಟದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ರಾಜಸ್ಥಾನ, ಜುಲೈ 27: ಹೊಸದಾಗಿ ರಚನೆಯಾದ ಕೇಂದ್ರ ಪ್ರತಿಪಕ್ಷಗಳ 'ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕ್ಕೂಟ (I.N.D.I.A) ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಟುವಾದ ವಾಗ್ದಾಳಿ ನಡೆಸಿದರು ಮತ್ತು ಮಹಾತ್ಮಾ ಗಾಂಧಿಯವರು ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯನ್ನು ನೀಡಿದ ರೀತಿಯಲ್ಲಿ, ಇದು ಭ್ರಷ್ಟಾಚಾರ ಮತ್ತು ಭಾರತವನ್ನು ತೊಡೆದು ಹಾಕಲು ಸಮಯವಾಗಿದೆ ಎಂದು ವಿಪಕ್ಷಗಳನ್ನು ಕಟುವಾಗಿ ಟೀಕಿಸಿದರು.

ಸಿಕಾರ್‌ನಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, I.N.D.I.A (ಇಂಡಿಯಾ) ಎಂಬ ಹಣೆಪಟ್ಟಿಯೊಂದಿಗೆ ಮೈತ್ರಿಕೂಟದ ವಿಪಕ್ಷಗಳು ಹಳೆಯ ಕೆಲಸಗಳನ್ನು ಮುಂದುವರಿಸಿದ್ದಾರೆ. ಯುಪಿಎ ಕಾರ್ಯಗಳನ್ನು ಮುಚ್ಚಿಡಲು ಬಯಸುತ್ತಿದೆ. ಅವರಿಗೆ ಭಾರತದ ಬಗ್ಗೆ ಕಾಳಜಿ ಇದ್ದಿದ್ದೇ ಆದಲ್ಲಿ ವಿದೇಶಿಯರನ್ನು ಭಾರತದಲ್ಲಿ ಹಸ್ತಕ್ಷೇಪ ಮಾಡಲು ಬಿಡುತ್ತಿರಲಿಲ್ಲ ಎಂದು ಗಾಂಧಿ ಕುಟುಂಬದವರ ಮೇಲೆ ವಾಗ್ದಾಳಿ ನಡೆಸಿದರು.

pm-modi-slams-on-india-alliance

ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ ಹೇಳಿದ ರೀತಿಯಲ್ಲಿ ಇಂದಿನ ಘೋಷವ್ಯಾಕ್ಯ ಇದು ಎಂದು ಕರೆದ ಪ್ರಧಾನಿ 'ಭ್ರಷ್ಟಾಚಾರ (ಭ್ರಷ್ಟಾಚಾರ) ಕ್ವಿಟ್ ಇಂಡಿಯಾ, ಪರಿವಾರವಾದ್ ಕ್ವಿಟ್ ಇಂಡಿಯಾ, ತುಷ್ಟೀಕರಣ (ತುಷ್ಟೀಕರಣ) ಕ್ವಿಟ್ ಇಂಡಿಯಾ'' ಎಂದು ಅವರು ವಿಪಕ್ಷಗಳಿಗೆ ಟಾಂಗ್ ನೀಡಿದರು.

ಕಾಂಗ್ರೆಸ್ ಘೋಷವಾಕ್ಯ ಬುಡಮೇಲು

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 'ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ' ಎಂಬ ಘೋಷಣೆ ಕೂಗಿದ್ದರು. ಆದರೆ ದೇಶದ ಜನರು ಕಾಂಗ್ರೆಸ್ ಅನ್ನು ಸೋಲಿಸಿದ್ದಾರೆ. ಅವರ ಘೋಷವಾಕ್ಯವನ್ನು ಬುಡಮೇಲು ಮಾಡಿದ್ದಾರೆ.

ಕಾಂಗ್ರೆಸ್ ದಿಕ್ಕು ತೋಚದ ಪಕ್ಷವಾಗಿ ಮಾರ್ಪಟ್ಟಿದೆ ಎಂದರು

ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು ಹಿಂದಿನ ಹೆಸರುಗಳನ್ನು ಬದಲಾಯಿಸಿಕೊಂಡಿವೆ. ಅವರು ಭಯೋತ್ಪಾದನೆಯ ಮುಂದೆ ಶರಣಾಗುವ ಕಳಂಕವನ್ನು ತೆಗೆದುಹಾಕಲು ಹೀಗೆ ಹೆಸರು ಬದಲಾಯಿಸಿಕೊಂಡಿದ್ದರೆ. ವಿಪಕ್ಷಗಳು ಅನುಸರಿಸುವ ಮಾರ್ಗಗಳು ದೇಶಪ್ರೇಮವನ್ನು ತೋರಿಸುವ ಮಾರ್ಗಗಳ ಅಲ್ಲ, ದೇಶ ದೋಚುವ ಮಾರ್ಗ ಎಂದು ಹೇಳಿದರು.

pm-modi-slams-on-india-alliance

ರೈತಪರ 9ವರ್ಷಗಳಿಂದ ಬಿಜೆಪಿ ಶ್ರಮ

ಸ್ವಾತಂತ್ರ್ಯ ನಂತರ ಹಲವು ದಶಕಗಳ ಬಳಿಕ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರೈತರ ನೋವು ಮತ್ತು ದುಃಖ ನಾವು ಅರ್ಥ ಮಾಡಿಕೊಂಡು ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ. ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಕುರತು ಕಳೆದ 9 ವರ್ಷಗಳಿಂದ ಬಿಜೆಪಿ ಆಡಳಿತ ನೀಡುತ್ತಿದೆ.

ರಾಜಸ್ತಾನ ಸಿಕರ್ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಒಂದು ಲಕ್ಷಕ್ಕೂ ಅಧಿಕ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದಂತೆ ಕೋಟ್ಯಂತರ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಪ್ರಧಾನಿ ಮೋದಿ ಅವರು ಜುಲೈ 27 ರಂದು ರಾಜಸ್ತಾನ ಬೇಟಿ ನಂತರ ಜುಲೈ 28 ರಂದು ನಾಳೆ ಶುಕ್ರವಾರ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಇಂದು ಸಂಜೆಯೇ ಅವರು ಗುಜರಾತ್‌ನ ರಾಜ್‌ಕೋಟ್‌ಗೆ ತಲುಪಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+