ರಾಜಸ್ಥಾನ : ಚುನಾವಣೆ ಕಾರ್ಯದಲ್ಲಿ ಒಂಟೆಗಳು ಬ್ಯುಸಿ

ಮರುಳುಗಾಡಿನ ಹಡಗು ಎಂದೇ ಖ್ಯಾತವಾಗಿರುವ ಒಂಟೆಗಳಿಗೆ ರಾಜಸ್ಥಾನದಲ್ಲಿ ಸದ್ಯ ಹೆಚ್ಚು ಬೇಡಿಕೆ. ರಾಜಸ್ಥಾನದ ಮರಳುಗಾಡಿನಿಂದ ಕೂಡಿರುವ ರಾಜ್ಯವಾಗಿರುವುದರಿಂದ ಇಲ್ಲಿ ಕಾರು, ಹೆಲಿಕಾಪ್ಟರ್ ಗಳಿಗೆ ಇಲದಷ್ಟು ಬೇಡಿಕೆ ಒಂಟೆಗಳಿಗೆ. ವಿವಿಧ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ಈಗಾಗಲೇ ಒಂಟೆಗಳನ್ನು ಬುಕ್ ಮಾಡಿಕೊಂಡಿದ್ದಾರೆ.
ಡಿ.1ರಂದು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸದ್ಯ ವಿವಿಧ ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿವೆ. ಥಾರ್ ಮರುಭೂಮಿ ವ್ಯಾಪ್ತಿಯಲ್ಲಿ ಬರುವ ಜೈಸಲ್ಮೇರ್, ಪೋಖ್ರಾನ್, ಬರ್ಮರ್, ಛೋಟಾನ್ ಮರುಭೂಮಿಗಳ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಒಂಟೆಗಳೇ ರಾಜಕೀಯ ನಾಯಕರಿಗೆ ಆಸರೆಯಾಗಿವೆ. ಇಲ್ಲಿನ ಹಲವು ಗ್ರಾಮಗಳಿಗೆ ತೆರಳಲು ಒಂಟೆ ಬಳಸುವುದು ಅನಿವಾರ್ಯವಾಗಿದೆ.
ಕೇವಲ ರಾಜಕೀಯ ನಾಯಕರು ಮಾತ್ರವಲ್ಲ ಚುನಾವಣೆಗೆ ತೆರಳುವ ಸಿಬ್ಬಂದಿ ಮತಯಂತ್ರದ ಜೊತೆಗೆ ಒಂಟೆಯ ಮೇಲೆಯೇ ಪ್ರಯಾಣ ಬೆಳಸಬೇಕು. ಆದ್ದರಿಂದ ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಂಟೆಗಳಿಗೆ ಸದ್ಯ ಸಖತ್ ಡಿಮ್ಯಾಂಡ್, ಚುನಾವಣೆ ಕಾರ್ಯ ಮುಗಿಯುವ ತನಕ ಒಂಟೆಗಳನ್ನು ಮಾಡಿಕೊಳ್ಳಲಾಗಿದೆ.
2008ರ ಚುನಾವಣೆಯಲ್ಲಿ ಚುನಾವಣಾ ಆಯೋಗ ಕೆಲವು ಕ್ಷೇತ್ರಗಳಲ್ಲಿ ಮೊಬೈಲ್ ಮತ ಕೇಂದ್ರಗಳನ್ನು ಪರಿಚಯಿಸಿತ್ತು. ಕೆಲವು ಪ್ರದೇಶಗಳಲ್ಲಿ ಮತದಾರನ ಮನೆ ಬಾಗಿಲಿಗೆ ಹೋಗಿ ಮತ ಹಾಕಿಸಿಕೊಂಡು ಬರಲಾಗಿತ್ತು. ಈ ವರ್ಷವೂ ಕೆಲವು ಹಳ್ಳಿಗಳಿಗೆ ಇದೇ ಯೋಜನೆ ವಿಸ್ತರಣೆ ಆಗಲಿದೆ. ಇನ್ನೂ ಕೆಲವು ಹಳ್ಳಿಗಳಿಗೆ ಸರ್ಕಾರ ರಸ್ತೆ ಸಂಪರ್ಕ ಕಲ್ಪಿಸಿದೆ.
ನಾವು 2ಜಿ, 3ಜಿ ಯುಗದಲ್ಲಿ ಬದುಕುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು, ದೇಶದ ಹಲವು ಗ್ರಾಮಗಳಿಗೆ ಇನ್ನೂ ರಸ್ತೆ ಸಂಪರ್ಕವಿಲ್ಲ. ರಾಜಸ್ಥಾನದ ಸ್ಥಿತಿಯೂ ಇದೆ. ಆದ್ದರಿಂದ ಸದ್ಯ ಅಲ್ಲಿ ಒಂಟೆಗಳು ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿವೆ. (ರಾಜಸ್ಥಾನ ಚುನಾವಣಾ ವೇಳಾಪಟ್ಟಿ)












Click it and Unblock the Notifications