ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ತನ್ನ ಮದುವೆಗೆ ಕುದುರೆ ಏರಿ ಬಂದ ವಧು!

|
Google Oneindia Kannada News

ಝುಂಝುನು(ರಾಜಸ್ಥಾನ), ಜನವರಿ 30: ಕಡಲ ದಾಟಿಬಂದ, ಕುದುರೆ ಏರಿ ಬಂದ, ನನ್ನ ಹೃದಯದ ಚೋರ... ಚೆಲುವ ರಾಜಕುಮಾರ.... ಅಂತ ಕನ್ನಡ ಹಾಡೊಂದನ್ನು ಕೇಳಿರಬಹುದು. ಆದರೆ ಇಲ್ಲಿ ರಾಜಕುಮಾರನ ಬದಲು ರಾಜಕುಮಾರಿಯೇ ಕುದುರೆ ಏರಿಬಂದಿದ್ದಾಳೆ! ಅದೂ ವಧುವಾಗಿ!

ಉತ್ತರ ಭಾರತದಲ್ಲಿ ವರ ಕುದುರೆ ಏರಿ ಮದುವೆಯ ಛತ್ರಕ್ಕೆ ಬರುವ ಪದ್ಧತಿ ಇದೆ. ಆದರೆ ರಾಜಸ್ಥಾನದ ಝುಂಝುನು ಕ್ಷೇತ್ರದ ಬಿಜೆಪಿ ಸಂಸದರೊಬ್ಬರ ಮಗಳು ತಮ್ಮ ಮದುವೆಯಂದು ತಾವೇ ಕುದುರೆ ಏರಿ ಬಂದಿದ್ದಾರೆ. ಈ ಮೂಲಕ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ.

ಕುಡುಕ ಗಂಡ ಬೇಡ ಎಂದು ಹಸೆಮಣೆ ಬಿಟ್ಟು ಎದ್ದೇಬಿಟ್ಟ ವಧುಕುಡುಕ ಗಂಡ ಬೇಡ ಎಂದು ಹಸೆಮಣೆ ಬಿಟ್ಟು ಎದ್ದೇಬಿಟ್ಟ ವಧು

ಇಂಗ್ಲೆಂಡಿನಲ್ಲಿ ಎಂಬಿಎ ಓದಿರುವ ಗಾರ್ಗಿ ಅಹ್ಲಾವತ್, 'ನಾನು ಪ್ರಧಾನಿ ನರೇಂದ್ರ ಮೋದಿಯವರ ಬೇಟಿ ಬಚಾವೋ, ಬೇಟಿ ಪಢಾವೋ' ಆಂದೋಲನಕ್ಕೆ ಈ ಮೂಲಕ ಬೆಂಬಲ ನೀಡುತ್ತಿದ್ದೇನೆ ಎಂದಿದ್ದಾರೆ.

Rajasthan bride rides a horse insted of groom in her wedding

'ಯಾವಾಗಲೂ ವರನೇ ಕುದರೆ ಏರಿ ಬರಬೇಕೆಂದಿಲ್ಲ. ನಾವು ಕೆಲವು ಪದ್ಧತಿಗಳನ್ನು ಮುರಿಯಬೇಕಾಗುತ್ತದೆ. ಈ ಕಾಲದಲ್ಲಿ ಎಲ್ಲರೂ ಸಮಾನರು, ಮಹಿಳೆಯರು ಕೀಳರಿಮೆಯಿಂದ ಬಳಲಬೇಕಿಲ್ಲ' ಎಂದು ಗಾರ್ಗಿ ಹೇಳಿದ್ದಾರೆ.

English summary
A bride from Rajasthan rides a horse to remove inferiority among women. A daughter of BJP MP from Jhunjhunu is an MBA graduate form UK's university. I support Beti Bachao Beti Padhao mission of PM Narendra Modi she told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X