Get Updates
Get notified of breaking news, exclusive insights, and must-see stories!

Rajasthan Paper Leak Case: ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥರ ಪುತ್ರರಿಗೆ ಸಮನ್ಸ್!

Rajasthan Paper Leak Case: ಜೈಪುರ ನವೆಂಬರ್ 2: ಪೇಪರ್ ಲೀಕ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥರ ಪುತ್ರರಿಗೆ ಇಡಿ ಸಮನ್ಸ್ ನೀಡಿದೆ.

ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಗಾಗಿ ಕಳೆದ ವರ್ಷ ನಡೆದ ಪರೀಕ್ಷಾ ಪತ್ರಿಕೆಗಳ ಸೋರಿಕೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದೆ. ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸಾರಾ ಅವರ ಪುತ್ರರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ.

Rajasthan assembly election 2023: Paper leak case: Rajasthan Congress chiefs sons summoned!

ಮನಿ ಲಾಂಡರಿಂಗ್ ಪ್ರಕರಣ ರಾಜಸ್ಥಾನ ಪೊಲೀಸರು ಹಲವಾರು ಜನರ ವಿರುದ್ಧ ದಾಖಲಿಸಿದ ಪ್ರಥಮ ಮಾಹಿತಿ ವರದಿಗಳಿಂದ (ಎಫ್‌ಐಆರ್) ಹುಟ್ಟಿಕೊಂಡಿದೆ. ಆದರೆ ಕಾಂಗ್ರೆಸ್ ಮತ್ತು ಎಎಪಿ ಆಡಳಿತವಿರುವ ರಾಜ್ಯಗಳಲ್ಲಿ ವಿಷೇಶವಾಗಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಡಿ ತೆಗೆದುಕೊಳ್ಳಲಾಗುತ್ತಿರುವ ಈ ಕ್ರಮವು ವಿವಾದ ಹುಟ್ಟುಹಾಕುವ ಸಾಧ್ಯತೆಯಿದೆ.

ಇದೇ ಕೇಂದ್ರ ತನಿಖಾ ಸಂಸ್ಥೆ ಅಕ್ಟೋಬರ್ 30 ರಂದು ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ ಆರೋಪದ ಪ್ರತ್ಯೇಕ ಪ್ರಕರಣದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಅವರನ್ನು ಒಂಬತ್ತು ಗಂಟೆಗಳ ಕಾಲ ಶೋಧಿಸಿತ್ತು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಇಡಿ ನೋಟೀಸ್ ಜಾರಿ ಮಾಡಿದೆ.

ಇಡಿ ದಾಳಿ

ಪೇಪರ್ ಸೋರಿಕೆ ಪ್ರಕರಣದಲ್ಲಿ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಸಾರಾ ಅವರ ನಿವಾಸದ ಮೇಲೆ ಹಾಗೂ ಅವರಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಇಡಿ ಈ ಹಿಂದೆ ದಾಳಿ ನಡೆಸಿತ್ತು. ಜೈಪುರ, ದೌಸಾ ಮತ್ತು ಸಿಕರ್‌ನಲ್ಲಿ ಇಡಿ ದಾಳಿ ನಡೆದಿತ್ತು.

ಜೂನ್ 5, 2023 ರಂದು ಇಡಿ ಆರೋಪಿಗಳ 15 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಈ ಅವಧಿಯಲ್ಲಿ ಆಕ್ಷೇಪಾರ್ಹ ದಾಖಲೆಗಳು ಮತ್ತು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಇಡಿ 3,11,93,597.88 ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಜಪ್ತಿ ಮಾಡಿದೆ. ಈ ಹಿಂದೆ ಇಬ್ಬರು ಆರೋಪಿಗಳಾದ ಬಾಬುಲಾಲ್ ಕಟಾರಾ ಮತ್ತು ಅನಿಲ್ ಕುಮಾರ್ ಮೀನಾ ಅಲಿಯಾಸ್ ಶೇರ್ ಸಿಂಗ್ ಮೀನಾ ಅವರನ್ನು ಇಡಿ ಬಂಧಿಸಿತ್ತು.

ಪೇಪರ್ ಸೋರಿಕೆ ಪ್ರಕರಣ, ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ಮೂಲಕ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಡಿ ಗೋವಿಂದ್ ಸಿಂಗ್ ದೋತಸಾರಾ ಅವರ ಪುತ್ರರ ವಿರುದ್ಧ ರಹಸ್ಯ ದೂರುಗಳನ್ನು ಸ್ವೀಕರಿಸಿತ್ತು. ಇತ್ತೀಚೆಗೆ ಆರ್‌ಪಿಎಸಿ ಸದಸ್ಯ ಬಾಬುಲಾಲ್ ಕತಾರ ಅವರ ವಿಚಾರಣೆ ಮತ್ತು ಕೆಲವು ಕೋಚಿಂಗ್ ಆಪರೇಟರ್‌ಗಳು ಇಡಿಗೆ ದೂರು ನೀಡಿದ ನಂತರ ಇಡಿ ಸಮನ್ಸ್ ನೀಡಿದೆ.

ಏನಿದು ಪ್ರಕರಣ?

2022 ರ ಹಿರಿಯ ಶಿಕ್ಷಕರ ಗ್ರೇಡ್ II ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯನ್ನು ಭೂಪೇಂದ್ರ ಸರನ್ ಮತ್ತು ಇತರ ಆರೋಪಿಗಳು ಸೋರಿಕೆ ಮಾಡಿದ್ದಾರೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. ಈ ಪರೀಕ್ಷೆಯನ್ನು RPSC ರಾಜಸ್ಥಾನದಲ್ಲಿ 2022 ನವೆಂಬರ್ 21, 22 ಮತ್ತು 24ರಂದು ನಡೆಸಿತು. ಈ ಕೆಲಸಕ್ಕಾಗಿ ಲಕ್ಷಾಂತರ ರೂಪಾಯಿ ನೀಡಿದ್ದಿ ಹಾಗೂ ಪಡೆದಿದ್ದು ತಿಳಿದು ಬಂದಿದೆ. ಇದರಲ್ಲಿ ಗೋವಿಂದ್ ಸಿಂಗ್ ದೋತಸಾರಾ ಅವರ ಪುತ್ರರು ಭಾಗಿಯಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+