ಬಸ್‌ನಲ್ಲಿ ಚಾಲಕರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ದೆಹಲಿ ಕೇಸ್ ನೆನಪಿಸಿದ ಘಟನೆ
ರಾಜಸ್ಥಾನ, ಡಿಸೆಂಬರ್ 17: ದೇಶದಲ್ಲಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡರು ಸಹಿತ ಕಾಮುಕರ ಅಟ್ಟಹಾಸ ನಿಲ್ಲುತ್ತಿಲ್ಲ. ಬಸ್ ಏರಿದ್ದ ಬಾಲಕಿಯೊಬ್ಬಳನ್ನು ಇಬ್ಬರು ಚಾಲಕರು ಕೂಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಹೌದು, ರಾಜಸ್ತಾನ ರಾಜ್ಯದ ಕಾನ್ಪುರದಿಂದ ಜೈಪುರಕ್ಕೆ ಹೋಗುತ್ತಿದ್ದ ಬಾಲಕಿಯ ಮೇಲೆ ಡಿಸೆಂಬರ್ 9 ಮತ್ತು 10 ರ ಮಧ್ಯರಾತ್ರಿಯಂದು ಇಬ್ಬರು ಚಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 9 ರಾತ್ರಿ 7:30 ರ ಸುಮಾರಿಗೆ, ಕಾನ್ಪುರದಿಂದ ಜೈಪುರಕ್ಕೆ ಸಂತ್ರಸ್ತ ಬಾಲಕಿ ತನ್ನ ಚಿಕ್ಕಪ್ಪನ ಮನೆಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದಳು. ಬಸ್ ಏರಿದ ಸಂತ್ರಸ್ತೆಗೆ ಹೆಣ್ಣು ಮಗಳಿಗೆ ಯಾವುದೇ ಸೀಟುಗಳು ಸಿಗದ ಕಾರಣ, ಅವಳನ್ನು ಕ್ಯಾಬಿನ್ ಮೇಲೆ ಕುಳಿತುಕೊಳ್ಳುವಂತೆ ಸೂಚಿಸಲಾಯಿತು. ಅದರಂತೆ ಹುಡುಗಿ ಕ್ಯಾಬಿನ್ ಮೇಲೆ ಕುಳಿತಿದ್ದಳು.
ಪ್ರಯಾಣದ ಸಮಯದಲ್ಲಿ, ಕ್ಯಾಬಿನ್‌ನಲ್ಲಿದ್ದ ಇತರ ಪ್ರಯಾಣಿಕರು ಹೊರಟು ಹೋದ ಬಳಿಕ ಮಧ್ಯರಾತ್ರಿ ಕಾಮುಕರು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಸ್ಸಿ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಫೂಲ್‌ಚಂದ್ ಮೀನಾ ಘಟನೆಯ ಕುರಿತು ವಿವರಿಸಿದರು.
ಅರೆ ಬರೆ ಸ್ಥಿತಿಯ ಬಾಲಕಿ ಕಂಡು ಚಾಲಕರಿಗೆ ಥಳಿತ
ಘಟನೆ ಬಳಿಕ ಪ್ರಯಾಣಿಕರು ಕ್ಯಾಬಿನ್ ಬಾಗಿಲು ತೆರೆದು ನೋಡಿದಾಗ ಅರೆಬರೆ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಕಳಪೆ ಸ್ಥಿತಿಯಲ್ಲಿ ಕಂಡು ಚಾಲಕರನ್ನು ಥಳಿಸಿದ್ದಾರೆ. ಹೊರಗಡೆ ಕುಳಿತಿದ್ದ ಪ್ರಯಾಣಿಕರು ಅನುಮಾನಗೊಂಡು ಕ್ಯಾಬಿನ್ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದ್ದು, ಕೂಡಲೇ ಕೃತ್ಯದ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಬಾಲಕಿಯ ಸ್ಥಿತಿಯನ್ನು ನೋಡಿದ ಪ್ರಯಾಣಿಕರು ದುಶ್ಕೃತ್ಯ ವೆಸಗಿದ ಚಾಲಕರಿಗೆ ಗೂಸಾ ನೀಡಿದ್ದಾರೆ. ಇಬ್ಬರು ಚಾಲಕರ ಪೈಕಿ ಒಬ್ಬ ತಪ್ಪಿಸಿಕೊಂಡಿದ್ದಾನೆ. ಮತ್ತೊಬ್ಬನನ್ನು ಸಾರ್ವಜನಿಕರು ಹಿಡಿದ್ದಾರೆ. ನಂತರ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಕಣದ ಕುರಿತು ದೂರು ದಾಖಲಿಸಲು ಆಕೆಯ ಚಿಕ್ಕಪ್ಪನನ್ನು ಠಾಣೆಗೆ ಕರೆಸಲಾಯಿತು ಎಂದು ಪೊಲೀಸರು ತಿಳಿಸಿದರು.
ಪರಾರಿಯಾದ ಅತ್ಯಾಚಾರಿಗಾಗಿ ಶೋಧ
ಅತ್ಯಾಚಾರಿಗಳಲ್ಲಿ ಇಬ್ಬರ ಪೈಕಿ ಒಟ್ಟು ಚಾಲಕನನ್ನು ಮೊಹಮ್ಮದ್ ಆರಿಫ್ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಚಾಲಕನನ್ನು ಬಂಧಿಸಲು ಶೋಧ ಕಾರ್ಯ ನಡೆದಿದೆ. ಪರಾರಿಯಾಗಿರುವ ಲಲಿತ್ ಎಂದು ಗುರುತಿಸಲಾಗಿದೆ.
ಈ ಘಟನೆಯು ಅದೇ ಡಿಸೆಂಬರ್ ತಿಂಗಳಲ್ಲಿ ನಡೆದ 2012 ರ ದೆಹಲಿಯ ಸಾಮೂಹಿಕ ಅತ್ಯಾಚಾರದ ಘಟನೆಯನ್ನು (ನಿರ್ಭಯ ಕೇಸ್) ನೆನಪಿಸುತ್ತದೆ. ಈ ಪ್ರಕರಣ ದೇಶಾದ್ಯಂತ ಜನರಿಗೆ ಆಘಾತ ನೀಡಿತ್ತು. ಅಂದು ಸಹ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಯೊಬ್ಬಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅತ್ಯಾಚಾರ ನಡೆಸಲಾಗಿತ್ತು. ಕೆಲವು ತಿಂಗಳ ನಂತರ ಅತ್ಯಾಚಾರ ಸಂತ್ರಸ್ತೆ ಚಿಕಿತ್ಸೆ ಫಲಿಸದೇ ಸಾವಿಗೀಡಾದರು.












Click it and Unblock the Notifications