ರಾಜನ್ ನೇಮಕ ಮಾಧ್ಯಮಗಳಿಗೆ ಸಂಬಂಧಿಸಿಲ್ಲ: ಮೋದಿ

Written By:
Subscribe to Oneindia Kannada

ವಾಷಿಂಗ್ಟನ್, ಮೇ 27: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ರಘುರಾಂ ರಾಜನ್ ಅವರನ್ನು ಮರುನೇಮಕ ಮಾಡುವ ವಿಚಾರ ಮಾಧ್ಯಮಗಳಿಗೆ ಸಂಬಂಧಿಸಿದ್ದಲ್ಲ. ಇದೊಂದು ಆಡಳಿತಾತ್ಮಕ ವಿಷಯವಾಗಿದ್ದು ಮಾಧ್ಯಮಗಳಿಗೆ ಆಸಕ್ತಿಯ ಸಂಗತಿ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಮೂಲಕ ಕಳೆದ ಕೆಲ ದಿನಗಳಿಂದ ಮಾಧ್ಯಮಗಳು ಕೆಣಕುತ್ತಿದ್ದ ವಿವಾದಕ್ಕೆ ಮೋದಿ ಶುಕ್ರವಾರ ತಿರುಗೇಟು ನೀಡಿದ್ದಾರೆ.[ಇರಾನ್ ಜತೆ ಕರಾರು, ಈಗ ಪಾಕ್ ಮಾಡಲಿ ತಕರಾರು?]

modi

ಸದ್ಯಕ್ಕೆ ಈ ವಿಷಯ ಚರ್ಚೆ ಮಾಡುವ ಅಗತ್ಯವೇ ಇಲ್ಲ. ಸೆಪ್ಟೆಂಬರ್ ತಿಂಗಳವರೆಗೆ ಕಾಲಾವಕಾಶ ಇದೆ ಎಂದು ಹೇಳಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ ಗೆ ನೀಡಿದ ಸಂದರ್ಶನದಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ.[ಇರಾನ್ ಜತೆ 12 ಒಪ್ಪಂದ: ಇದಪ್ಪಾ ಪಾಕ್, ಚೀನಾಕ್ಕೆ ಸೆಡ್ಡು]

ಅಸಹಿಷ್ಣುತೆ ಬಗ್ಗೆ ರಘುರಾಂ ರಾಜ್ ಮಾತನಾಡಿದ್ದು, ರಾಜ್ಯಸಭಾ ಸದಸ್ಯ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ರಾಜನ್ ಮೇಲೆ ವಾಗ್ದಾಳಿ ಮಾಡಿದ್ದು ಎಲ್ಲದಕ್ಕೂ ಮೋದಿ ಉತ್ತರ ನೀಡಿದಂತೆ ಆಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ವೈಯಕ್ತಿಕ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ. ಅದು ಯಾರ ಮೇಲೆ ಇರಬಹುದು ಕೇಂದ್ರ ಸರ್ಕಾರ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi has said the issue of reappointment of RBI Governor Raghuram Rajan was an administrative subject and it should not be an issue of interest of the media, in his first comments in the wake of continuing attack on the top economist in recent months.
Please Wait while comments are loading...