Rain update: ಅತ್ತ ರಾಷ್ಟ್ರ ರಾಜಧಾನಿಯಲ್ಲಿ ಮಳೆ, ಇತ್ತ ರಾಜ್ಯದಲ್ಲಿ ಬರ!
ನವದೆಹಲಿ, ಮಾರ್ಚ್ 03: ದೇಶದಲ್ಲಿ ಈ ಹವಾಮಾನ ವಿಚಿತ್ರವಾಗಿದೆ. ದೇಶದ ಹಲವೆಡೆ ಗುಡುಗು ಸಿಡಿಲು ಮಳೆ ಕಾಣಿಸಿಕೊಂಡರೆ, ಮತ್ತೆ ಕೆಲವು ಕಡೆಗಳಲ್ಲಿ ಬರ ಕಾಣಿಸುತ್ತಿದೆ. ಉತ್ತರ ಭಾರತದಲ್ಲಿ ಮಳೆಯ ವಾತಾವರಣವಿದೆ. ಹಿಮಪಾತ, ಗುಡು, ಸಿಡಿಲು ಕಾಣಿಸುತ್ತಿದೆ. ಆದರೆ, ದಕ್ಷಿಣ ಭಾರತದ ಪರಿಸ್ಥಿತಿ ಬೇರೆಯೇ ಆಗಿದೆ.
ಭಾನುವಾರ ಮುಂಜಾನೆ ದೆಹಲಿ, ನೋಯ್ಡಾ ಸೇರಿದಂತೆ ರಾಷ್ಟ್ರ ರಾಜಧಾನಿ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಮಂಡಿ ಹೌಸ್, ಆರ್‌ಕೆ ಪುರಂ, ಇಂದ್ರಪ್ರಸ್ಥ, ಕರ್ತವ್ಯ ಪಥ್, ಸೆಂಟ್ರಲ್ ದೆಹಲಿ, ರೈಸಿನಾ ರಸ್ತೆ, ಪಾರ್ಲಿಮೆಂಟ್ ಸ್ಟ್ರೀಟ್ ಪ್ರದೇಶ ಮತ್ತು ಪಂತ್ ಮಾರ್ಗ ಸೇರಿದಂತೆ ದೆಹಲಿಯ ಹಲವು ಭಾಗಗಳಲ್ಲಿ ಮಳೆ ಸುರಿದಿದೆ.

ಮಳೆಯ ನಂತರ, ಮೋಡ ಕವಿದ ವಾತಾವರಣವು ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಆವರಿಸಿದ್ದು, ಬೇಸಿಗೆಯ ಧಗೆಯಲ್ಲಿದ್ದ ದೆಹಲಿಗೆ ತಂಪೆರೆದಿದೆ. ಗ್ರೇಟರ್ ಕೈಲಾಶ್, ಇಂಡಿಯಾ ಗೇಟ್, ಆರ್‌ಕೆ ಪುರಂ, ಮತ್ತು ಜನಪಥ್ ಸೇರಿದಂತೆ ಪ್ರದೇಶಗಳಲ್ಲಿ ಶನಿವಾರ ಲಘು ಮಳೆ ಸುರಿದಿದ್ದರಿಂದ ದೆಹಲಿ-ಎನ್‌ಸಿಆರ್ ಹವಾಮಾನದಲ್ಲಿ ಹಠಾತ್ ಬದಲಾವಣೆಯನ್ನು ಅನುಭವಿಸಿದೆ.
ಭಾರತದ ಹವಾಮಾನ ಇಲಾಖೆ (IMD) ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ ಸೇರಿದಂತೆ ಉತ್ತರ ಭಾರತದ ಬೆಲ್ಟ್‌ನಲ್ಲಿ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಯ ಗಾಳಿಯೊಂದಿಗೆ ಚದುರಿದಂತೆ ಸಾಕಷ್ಟು ವ್ಯಾಪಕವಾದ ಮಳೆಯಾಗುವ ಮುನ್ಸೂಚನೆ ನೀಡಿದೆ.
ಮುಂದಿನ ಮೂರು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗುವುದಿಲ್ಲ, ನಂತರ ಅದು 3 ರಿಂದ 5 ಡಿಗ್ರಿ ಸೆಲ್ಸಿಯಸ್ ಇಳಿಯುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಾಯುವ್ಯ ಅಫ್ಘಾನಿಸ್ತಾನ ಮತ್ತು ಅದರ ಸಮೀಪದಲ್ಲಿ ಚಂಡಮಾರುತದ ಪರಿಚಲನೆಯಿದೆ.

ಅರೇಬಿಯನ್ ಸಮುದ್ರದಿಂದ ವಾಯುವ್ಯ ಭಾರತದವರೆಗೆ ಹೆಚ್ಚಿನ ತೇವಾಂಶವಿರಲಿದ್ದು. ಭಾನುವಾರದವರೆಗೆ ತಂಪಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಇನ್ನು, ಮಳೆಯ ಕಾರಣದಿಂದ ರಾಜಧಾನಿಯಲ್ಲಿ 137 ದಿನಗಳಲ್ಲಿ ರಾಷ್ಟ್ರೀಯ ರಾಜಧಾನಿ ಅತ್ಯುತ್ತಮ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ಗಳಿಸಿದೆ.












Click it and Unblock the Notifications