Get Updates
Get notified of breaking news, exclusive insights, and must-see stories!

Winter Rain Update: ಮಾಸಿದ ಮಂಜು, ಬಿಸಿಯಾದ ಬಿಸಿಲು, ಮತ್ತೆ ಮಳೆ: ಮುಂದಿನ 48 ಗಂಟೆಗಳಲ್ಲಿ ಈ ಭಾಗದಲ್ಲಿ ವರುಣ ಅರ್ಭಟ

ಚಳಿ ಚಳಿ ಅಂತಿದ್ದ ಜನ ಈಗ ಬಿಸಿ ಬಿಸಿ ಬಿಸಿಲು ಅಂತಿದ್ದಾರೆ. ಈ ನಡುವೆ ಮಳೆರಾಯನ ಕಣ್ಣಾಮುಚ್ಚಾಲೆ ಆಟ ಕೂಡ ಮುಂದುವರೆದಿದೆ. ದೇಶದ ಹಲವೆಡೆ ಮಂಜು ಮುಸುಕಿದ ವಾತಾವರಣವಿದ್ದರೆ, ಕೆಲವೆಡೆ ಮೈ ಸುಡುವ ಬಿಸಿಲು ಇದೆ. ಇನ್ನೂ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಈ ಚಳಿ ಬಿಸಿಲು ಹಾಗೂ ಮಳೆ ಆಟದಲ್ಲಿ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಹೌದು.... ದೇಶದ ಹಲವೆಡೆ ಈ ವಾತಾವರಣ ಮನುಷ್ಯನಿಗೆ ಒಗ್ಗಿಕ್ಕೊಳಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ಚುಮು ಚುಮು ಚಳಿ, ಸೂರ್ಯ ಹುಟ್ಟುತ್ತಿದ್ದಂತೆ ಮೈ ಸುಡುವ ಬಿಸಿಲು, ಇದರ ನಡುವೆ ಮಳೆ ಕೆಲವೊಮ್ಮೆ ಇವೆಲ್ಲವೂ ಒಂದೇ ದಿನ ನಡೆದು ಹೋಗುತ್ತವೆ.

Rain Alert: Rain in this part of India in next 48 hours

ಚಳಿಗಾಲ ಮುಗಿಯುತ್ತಿದ್ದಂತೆ ಬೇಸಿಗೆ ಕಾಲ ಬರುವುದು ವಾಡಿಕೆ. ಆದರೆ ಈ ಚಳಿ ಬಿಸಿಲು ನಡುವೆ ಮಳೆಯಾರ ಆಗಾಗ ಎಂಟ್ರಿ ಕೊಡುತ್ತಿದೆ. ಹೌದು... ಮುಂದಿನ 48 ಗಂಟೆಗಳಲ್ಲಿ ಈ ಭಾಗದಲ್ಲಿ ವರುಣ ಅರ್ಭಟ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಹೀಗಾಗಿ ಕೆಲ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮೈಕೊರೆಯೋ ಚಳಿಯ ಅಬ್ಬರ ಇರಲಿದೆ. ಹಾಗಾದರೆ ಎಲ್ಲೆಲ್ಲಿ ಇಂದಿನ ವಾತಾವರಣ ಹೇಗಿರಲಿದೆ ಎಂದು ತಿಳಿಯೋಣ. ಹವಾಮಾನಶಾಸ್ತ್ರಜ್ಞರ ಪ್ರಕಾರ ಹಲವೆಡೆ ಮಳೆ ಮತ್ತು ಹಿಮಪಾತದೊಂದಿಗೆ, ಅಧಿಕ ಚಳಿಯೂ ಇರಲಿದೆ. ಜನವರಿ 31 ರಿಂದ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ವಾಯುವ್ಯ ಭಾರತದ ಪಕ್ಕದ ಬಯಲು ಪ್ರದೇಶಗಳ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮ ಬೀರಬಹುದು.

ಇದರಿಂದಾಗಿ ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯಲ್ಲಿ ನೀಡಿದೆ.

ಇದರಿಂದಾಗಿ ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಮುಂದಿನ 3-5 ದಿನಗಳಲ್ಲಿ ಕನಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಪೂರ್ವ ಉತ್ತರ ಪ್ರದೇಶದ ವಿವಿಧ ಭಾಗಗಳು ಸೇರಿದಂತೆ ಪಂಜಾಬ್, ಹರಿಯಾಣದಲ್ಲಿ ಚಳಿಗಾಳಿ ಬೀಸಲಿದೆ ಎನ್ನಲಾಗಿದೆ.

ಪಶ್ಚಿಮ ಉತ್ತರ ಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಬಿಹಾರದ ಪ್ರತ್ಯೇಕ ಭಾಗಗಳಲ್ಲಿ ದಟ್ಟವಾದ ಮಂಜು ಕಂಡು ಬರಲಿದೆ. ಬಿಹಾರದ ಕೆಲವು ಭಾಗಗಳಲ್ಲಿ ತೀವ್ರ ಚಳಿಯ ಪರಿಸ್ಥಿತಿ ಮುಂದಿನ 2 ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಶೀತ ವಾತಾವರಣ ಇರುತ್ತದೆ ಎಂದು ಐಎಂಡಿ ತಿಳಿಸಿದೆ.

ಕೆಲ ರಾಜ್ಯಗಳಲ್ಲಿ ಮಳೆ:-

ಇಂದಿನ ಹವಾಮಾನದ ಕುರಿತು ಮಾತನಾಡುವುದಾದರೆ, ಮುಂದಿನ 2 ದಿನಗಳಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸ್ಕೈಮೆಟ್ ಹವಾಮಾನ ವರದಿಯ ಪ್ರಕಾರ, ಹವಾಮಾನ ವೈಪರೀತ್ಯದಿಂದಾಗಿ ಗಿಲ್ಗಿಟ್ ಬಾಲ್ಟಿಸ್ತಾನ್, ಮುಜಫರಾಬಾದ್, ಲಡಾಖ್ ಮತ್ತು ಜಮ್ಮು ಕಾಶ್ಮೀರದಲ್ಲಿ ಸಾಧಾರಣ ಮಳೆಯೊಂದಿಗೆ ಹಿಮಪಾತವಾಗುವ ಸಾಧ್ಯತೆ ಇದೆ.

ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಮತ್ತು ಉತ್ತರಾಖಂಡದ ಮೇಲಿನ ಪ್ರದೇಶಗಳಲ್ಲಿ ಲಘು ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಇಂದು ಮತ್ತು ನಾಳೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಅರುಣಾಚಲ ಪ್ರದೇಶ, ತಮಿಳುನಾಡು, ಸಿಕ್ಕಿಂ, ಅಸ್ಸಾಂ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+