Rain Alart: ಶಬರಿಮಲೆಯಲ್ಲಿ ಭಾರೀ ಮಳೆ ಮುನ್ಸೂಚನೆ.. ಅಯ್ಯಪ್ಪ ಭಕ್ತರಿಗೆ ಬಿಗ್ ಅಲರ್ಟ್!
ಕೇರಳ ರಾಜ್ಯದಲ್ಲಿ ವರುಣನ ಅರ್ಭಟ ಜೋರಾಗಿದೆ. ರಾಜ್ಯದ ಹಲವೆಡೆ ಅಧಿಕ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ಕೇರಳ ರಾಜ್ಯದ ಪತ್ತನಂತಿಟ್ಟ ಜಿಲ್ಲೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ವಾತಾವರಣದಲ್ಲಿ ಪ್ರಕೃತಿ ವಿಕೋಪ ಸಂಭವಿಸುವ ಅಪಾಯವಿದೆ ಎಂದು ಸೂಚನೆ ನೀಡಲಾಗಿದ್ದು ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿ ತೆರಳುವ ಭಕ್ತರು ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ.
ಹವಮಾನ ಇಲಾಖೆಯ ಸೂಚನೆಯಂತೆ ಶಬರಿಮಲೆಯಲ್ಲಿ ಇಂದು (ನವೆಂಬರ್ 24) ಭಾರೀ ಮಳೆ ಮುಂದುವರೆಯುವ ಅಪಾಯವಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವವರು ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಭೂಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶಬರಿಮಲೆಗೆ ತೆರಳುವ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಅಧಿಕಾರಿಗಳು ಜಾಗರೂಕರಾಗಿರುವಂತೆ ಮಹತ್ವದ ಆದೇಶ ಹೊರಡಿಸಿದ್ದಾರೆ.

ಅಧಿಕ ಮಳೆಯಾಗುವ ಮುನ್ಸೂಚನೆಯಿಂದ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದರ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಶಬರಿಮಲೆಗೆ ತೆರಳುವಾಗ ಹಾಗೂ ಬರುವಾಗ ವಿಶೇಷವಾಗಿ ರಾತ್ರಿ ವೇಳೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ. ಮತ್ತೊಂದೆಡೆ ಈಗಾಗಲೇ ಪರಿಹಾರ ತಂಡಗಳಿಗೂ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಶಬರಿಮಲೆಗೆ ತೆರಳುವ ಭಕ್ತರು ಭಾರೀ ಮಳೆಯನ್ನು ಗಮನದಲ್ಲಿಟ್ಟುಕೊಂಡು ಜಾಗರೂಕತೆಯಿಂದ ತೆರಳಬೇಕು ಎಂದು ಸೂಚಿಸಲಾಗಿದೆ.
ಮಂಡಲ ಮಕರ ವಿಳಕ್ಕು ಉತ್ಸವದ ಹಿನ್ನೆಲೆಯಲ್ಲಿ ಶಬರಿಮಲೆಗೆ ಭಕ್ತರ ದಂಡು ಹರಿದು ಬರುತ್ತಿದೆ. ಸದ್ಯ ಮಂಡಲ ಪೂಜೆ ಅಂಗವಾಗಿ ಡಿ.27ರವರೆಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಕರ ಜ್ಯೋತಿಗಾಗಿ ಅಯ್ಯಪ್ಪ ದೇವರಿಗೆ ಮಕರ ಜ್ಯೋತಿ ಪೂಜೆಗಳು ಡಿಸೆಂಬರ್ 31ರಿಂದ ಮುಂದಿನ ವರ್ಷ ಜನವರಿ 15ರವರೆಗೆ ಮುಂದುವರೆಯುತ್ತವೆ.
ಮಕರ ಸಂಕ್ರಾಂತಿಯ ದಿನದಂದು ಸಂಜೆ 6.30 ಕ್ಕೆ ಮಕರ ಜ್ಯೋತಿಯ ದರ್ಶನದೊಂದಿಗೆ ವಾರ್ಷಿಕ ಉತ್ಸವಗಳು ಪರಾಕಾಷ್ಠೆಯನ್ನು ತಲುಪುತ್ತವೆ. ಜೊತೆಗೆ ಈ ಬಾರಿ ಅಯ್ಯಪ್ಪನ ವಾರ್ಷಿಕ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಎರಡು ತಿಂಗಳ ಸುದೀರ್ಘ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆಯ ಅಂಗವಾಗಿ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆಯ ಅಯ್ಯಪ್ಪ ಸ್ವಾಮಿ ಬೆಟ್ಟಕ್ಕೆ ತೆರಳುವ ಸಾವಿರಾರು ಭಕ್ತರಿಗೆ ಮಳೆ ತೀವ್ರ ತೊಂದರೆಯನ್ನುಂಟುಮಾಡುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

ಮಳೆಯ ನಡುವೆ ಶಬರಿಮಲೆಯಕ್ಕೆ ಭಕ್ತರ ದಂಡು
ಭಾರೀ ಮಳೆಯ ನಡುವೆಯೂ ಶಬರಿಮಲೆಗೆ ಭಕ್ತರ ದಂಡು ಹರಿದುಬರುತ್ತಿದೆ. ನವೆಂಬರ್ 22ರಂದು ಸುಮಾರು 38,000 ಭಕ್ತರು ಅಯ್ಯಪ್ಪನ ದರ್ಶನ ಪಡೆದಿದ್ದರೆ, ನವೆಂಬರ್ 23 ರಂದು ಸುಮಾರು 50,000 ಭಕ್ತರು ಸ್ವಾಮಿ ದರ್ಶನ ಪಡೆದಿದ್ದಾರೆ. ಆರಂಭದ ಮೂರು ದಿನಗಳಲ್ಲಿ ಒಟ್ಟು 1,61,789 ಭಕ್ತರು ದರ್ಶನಕ್ಕೆ ಆಗಮಿಸಿದ್ದು, ವರ್ಚುವಲ್ ಕ್ಯೂ ವ್ಯವಸ್ಥೆ ಮಾಡಲಾಗಿದೆ.
ಅಯ್ಯಪ್ಪ ಭಕ್ತರಿಗಾಗಿ ಅರಣ್ಯ ಮಾರ್ಗವನ್ನು ಇತ್ತೀಚೆಗೆ ತೆರೆಯಲಾಗಿದೆ. ಇಲ್ಲಿಯವರೆಗೆ, ಕಾಡು ಪ್ರಾಣಿಗಳಿಂದ ಯಾವುದೇ ತೊಂದರೆ ಅಥವಾ ಇತರ ಯಾವುದೇ ಸಮಸ್ಯೆಗಳ ಬಗ್ಗೆ ವರದಿಯಾಗಿಲ್ಲ. ಮುಂಬರುವ ದಿನಗಳಲ್ಲಿ ಸನ್ನಿಧಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುವ ನಿರೀಕ್ಷೆಯನ್ನು ದೇವಸ್ವಂ ಮಂಡಳಿ ವ್ಯಕ್ತಪಡಿಸಿದೆ. ಅರಣ್ಯ ರಸ್ತೆಯಲ್ಲಿ ಹೆಚ್ಚಿನ ಭದ್ರತೆಗಾಗಿ ಅರಣ್ಯ ಇಲಾಖೆ ಸುಮಾರು 50 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.












Click it and Unblock the Notifications