Rain Alert: ಕೇರಳದಲ್ಲಿ ಸುರಿಯಲಿದೆ ಭಾರೀ ಮಳೆ- ಕರ್ನಾಟಕದ ಕತೆ ಏನು? ಮಾಹಿತಿ, ವಿವರ ತಿಳಿಯಿರಿ
ತಿರುವನಂತಪುರಂ, ಸೆಪ್ಟೆಂಬರ್ 09: ಕೇರಳದಲ್ಲಿ ಮುಂಗಾರು ಚುರುಕಾಗಿದೆ. ತಿರುವನಂತಪುರಂ, ಕೊಲ್ಲಂ ಮತ್ತು ಪತ್ತನಂತಿಟ್ಟವನ್ನು ಹೊರತುಪಡಿಸಿ ದಕ್ಷಿಣ ಕೇರಳದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಭಾರತೀಯ ಹವಮಾನ ಇಲಾಖೆ ನೀಡಿದೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಡಿಎಸ್‌ಎಂಎ) ಹೇಳಿಕೆಯ ಪ್ರಕಾರ, ಸೆಪ್ಟೆಂಬರ್ 11 ರ ವರೆಗೆ ರಾಜ್ಯದಲ್ಲಿ ಭಾರೀ ಮಳೆ ಸುರಿಯಬಹುದು.

ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಿಗೆ ಪ್ರತ್ಯೇಕ ಭಾರೀ ಮಳೆಯ ಎಚ್ಚರಿಕೆಯನ್ನು ಶನಿವಾರ ನೀಡಲಾಗಿದೆ.
ಇಡುಕ್ಕಿ, ತ್ರಿಶ್ಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಭಾನುವಾರ ಪ್ರತ್ಯೇಕವಾಗಿ ಭಾರೀ ಮಳೆಯಾಗಲಿದೆ.

ಕರ್ನಾಟಕದಲ್ಲಿ ಇಂದು ಮತ್ತೆ ನಾಳೆ ಪ್ರತ್ಯೇಕ ಪ್ರದೇಶಗಳಲ್ಲಿ ಮಳೆಯಾಗಲಿದೆ. ಆದರೆ, ಭಾರೀ ಮಳೆ ಸುರಿಯುವ ನಿರೀಕ್ಷೆ ಇಲ್ಲವೆಂದು ಹೇಳಲಾಗಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಮೋಡ ಕವಿದ ವಾತಾವರಣವಿದೆ.
ಶುಕ್ರವಾರ ಸುರಿದ ಮಳೆಯ ಅಂಕಿಅಂಶ
ಉಡುಪಿ: 96.5 ಮಿ.ಮೀ
ದಕ್ಷಿಣ ಕನ್ನಡ: 64 ಮಿ.ಮೀ
ಉತ್ತರ ಕನ್ನಡ: 61 ಮಿ.ಮೀ
ಬಳ್ಳಾರಿ: 51 ಮಿ.ಮೀ
ಬೆಳಗಾವಿ: 47.5 ಮಿ.ಮೀ
ಶಿವಮೊಗ್ಗ: 45.5 ಮಿ.ಮೀ
ಚಿಕ್ಕಮಗಳೂರು: 44 ಮಿ.ಮೀ
ಹಾಸನ: 44 ಮಿ.ಮೀ
ಕೊಡಗು: 35.5 ಮಿ.ಮೀ
ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬಿದ್ದ ಸ್ಥಳಗಳು
ಉಡುಪಿ ಜಿಲ್ಲೆ
ಕಾಂತಾವರ (ಜಿಪಿ)- 96.5 ಮಿ.ಮೀ
ಉಪ್ಪುಂದ- 76.5 ಮಿ.ಮೀ
ಕರ್ಕುಂಜೆ- 75 ಮಿ.ಮೀ
ಪಡುವರಿ- 75 ಮಿ.ಮೀ
ಕಾಲ್ತೋಡು- 64 ಮಿ.ಮೀ

ಭಾನುವಾರದಂದು ದೇಶದ ಈ ರಾಜ್ಯಗಳಲ್ಲಿ ಸುರಿಯಲಿದೆ ಮಳೆ
ಮಧ್ಯಪ್ರದೇಶ, ದೆಹಲಿ- ಎನ್‌ಸಿಆರ್, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 10 ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಘಟ್ಟ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪಶ್ಚಿಮ ರಾಜಸ್ಥಾನದಲ್ಲಿ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications