ಪ್ರಮುಖ ರೈಲು ನಿಲ್ದಾಣಗಳಲ್ಲಿ 2400 ಎಟಿಎಂಗಳನ್ನು ಸ್ಥಾಪನೆ!

Posted By:
Subscribe to Oneindia Kannada

ನವದೆಹಲಿ, ಜನವರಿ 08: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಅನುಕೂಲದ ಜತೆಗೆ ಇಲಾಖೆಗೆ ಆದಾಯ ತರಬಲ್ಲ ಹಲವಾರು ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ಅಳವಡಿಸಲಾಗುವುದು, ಅದರಲ್ಲಿ ಎಟಿಎಂ ಸ್ಥಾಪನೆ ಕೂಡಾ ಒಂದು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

ವಾರ್ಷಿಕವಾಗಿ 2000 ಕೋಟಿ ರೂ.ಗಳ ಆದಾಯ ಗಳಿಕೆಯನ್ನು ಪ್ರಯಾಣ ದರ ಬಿಟ್ಟು ಉಳಿದ ಮಾರ್ಗದಿಂದ ಗಳಿಸಲು ರೈಲ್ವೆ ಇಲಾಖೆ ಮುಂದಾಗಿದೆ. ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ 2400 ಎಟಿಎಂಗಳನ್ನು ಸ್ಥಾಪನೆಗೆ ಚಾಲನೆ ನೀಡಲಿದೆ. ರೈಲ್ವೆ ಇಲಾಖೆಯಲ್ಲಿ ಪ್ರಥಮ ಎನ್ನಲಾದ ಈ ರೀತಿಯ ಆದಾಯ ಗಳಿಕೆ ನೀತಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಸದ್ಯದಲ್ಲೇ ಪ್ರಕಟಿಸಲಿದ್ದಾರೆ.

Railways to offer platforms for setting up over 2,000 ATM's

ರೈಲ್ವೆ ಬ್ರಾಂಡಿಂಗ್, ರೈಲು ರೇಡಿಯೋ ಯೋಜನೆಗಳು ಮತ್ತು ದೇಶದ ಪ್ರಮುಖ ರೈಲು ಅಂಕಣಗಳಲ್ಲಿ 2400 ಎಟಿಎಂಗಳನ್ನು ಸ್ಥಾಪಿಸುವುದು ಇದರಲ್ಲಿ ಸೇರಿದೆ. ಮುಂದಿನ ಈ ವಾರ ಈ ನೀತಿಯನ್ನು ರೈಲ್ವೆ ಸಚಿವರು ಪ್ರಕಟಿಸಲಿದ್ದು , ಸುಂಕ ರಹಿತ ಮೂಲಗಳಿಂದ ವಾರ್ಷಿಕವಾಗಿ ಎರಡು ಸಾವಿರ ಕೋಟಿ ರೂ. ವರಮಾನ ಗಳಿಸಲು ಉದ್ದೇಶಿಸಲಾಗಿದೆ.

ಎಲ್ ಇಡಿ ಪ್ರದರ್ಶಕ, ಓವರ್ ಬ್ರಿಜ್ ಗಳ ನಿರ್ಮಾಣ, ವಿನೈಲ್ ಬಳಸಿ ಜಾಹೀರಾತು ಫಲಕ, ಸಿನಿಮಾಗಳ ಪ್ರದರ್ಶನ, ಶಿಕ್ಷಣ ಕಾರ್ಯಕ್ರಮಗಳ ಎಲ್ಲವೂ ಯೋಜನೆಯ ಭಾಗವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian railways offering major platforms for installing over 2000 ATMs. Minister Suresh Prabhu to launch revenue-yielding activities including train branding, rail radio schemes and the mega offer of setting up about 2400 ATMs at platforms of major stations across the country early next week.
Please Wait while comments are loading...