ಮುದ್ರಣ ಪ್ರಮಾದಕ್ಕೆ ಭಾರಿ ದಂಡ ತೆತ್ತ ರೈಲ್ವೆ ಇಲಾಖೆ
Recommended Video

ಲಕ್ನೋ, ಜೂನ್ 15: ಮುಂಗಡವಾಗಿ ಕಾಯ್ದಿರಿಸಿದ ರೈಲಿನ ಟಿಕೆಟ್‌ನಲ್ಲಿ ಆದ ಮುದ್ರಣ ದೋಷದಿಂದಾಗಿ ಉಂಟಾದ ಪ್ರಮಾದಕ್ಕೆ ಭಾರತೀಯ ರೈಲ್ವೆ ಭಾರಿ ದಂಡ ತೆತ್ತಿದೆ.
ಪ್ರಯಾಣದ ವರ್ಷವನ್ನು ತಪ್ಪಾಗಿ ಮುದ್ರಿಸಿದ್ದಲ್ಲದೆ, ಪ್ರಯಾಣದ ಮಧ್ಯೆ ರೈಲಿನಿಂದ ಹಿರಿಯ ನಾಗರಿಕರೊಬ್ಬರನ್ನು ಇಳಿಸಿದ ರೈಲ್ವೆ ಇಲಾಖೆಗೆ ಇಲ್ಲಿನ ಗ್ರಾಹಕ ನ್ಯಾಯಾಲಯ 13 ಸಾವಿರ ರುಗಳನ್ನು ದಂಡ ವಿಧಿಸಿದೆ.

ಶಹರನ್ ಪುರದ 70 ವರ್ಷದ ನಿವೃತ್ತ ಪ್ರಾಧ್ಯಾಪಕ ವಿಷ್ಣುಕಾಂತ್ ಶುಕ್ಲಾ ಅವರು ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ಕೇಂದ್ರದಲ್ಲಿ ಕನೌಜ್‌ಗೆ ಮುಂಗಡ ಟಿಕೆಟ್ ಬುಕ್ ಮಾಡಿದ್ದರು. ಆ ಟಿಕೆಟ್‌ನಲ್ಲಿ 2013ನೇ ಇಸವಿ ಎಂದು ಮುದ್ರಿಸುವ ಬದಲಿಗೆ 3013ನೇ ಇಸವಿ ಎಂದು ಮುದ್ರಿಸಲಾಗಿತ್ತು.
ಶುಕ್ಲಾ ಅವರು ಪ್ರಯಾಣಿಸುವಾಗ ಟಿಕೆಟ್ ಪರೀಕ್ಷಕರು ಆಗಿರುವ ತಪ್ಪನ್ನು ಗಮನಿಸಿ, ದಂಡ ತೆರುವಂತೆ ಅವರಿಗೆ ಸೂಚಿಸಿದರು. ಶುಕ್ಲಾ ನಿರಾಕರಿಸಿದಾಗ ಅವರನ್ನು ರೈಲಿನಿಂದ ಮಧ್ಯದಲ್ಲೇ ಇಳಿಸಲಾಗಿತ್ತು.
ಇದರಿಂದ ನೊಂದ ಶುಕ್ಲಾ ಅವರು, ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಅಧಿಕಾರಿಗಳ ವರ್ತನೆಯಿಂದ ಮಾನಸಿಕ ಹಿಂಸೆ, ತೊಂದರೆಗೆ ಪರಿಹಾರ ಕೊಡಿಸುವಂತೆ ಕೋರಿದ್ದರು. ಒಟ್ಟಾರೆ, ನೊಂದ ಗ್ರಾಹಕ ಶುಕ್ಲಾ ಅವರಿಗೆ 10,000 ರು ಪರಿಹಾರ ಧನ ಹಾಗೂ 3,000 ರು ಬಡ್ಡಿ ರೂಪದಲ್ಲಿ ನೀಡುವಂತೆ ಸೂಚಿಸಲಾಗಿದ್ದು, ಕೋರ್ಟ್ ಆದೇಶಕ್ಕೆ ಶುಕ್ಲಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications