ರೈಲ್ವೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಪ್ರಮಾಣ ಹೆಚ್ಚಳ!
ನವದೆಹಲಿ, ಡಿ.16: ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವಿಕೆ ಪ್ರಕ್ರಿಯೆ ಜನಪ್ರಿಯತೆಗೊಳ್ಳುತ್ತ್ತಿರುವ ಹಿನ್ನಲೆಯಲ್ಲಿ ಭಾರತೀಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ.
ಸದ್ಯ ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ರಮಾಣ ಶೇ.56ರಷ್ಟಿದ್ದು, ಮುಂದಿನ ಮೂರು ವರ್ಷಗಳಲ್ಲಿ ಶೇ.75ಕ್ಕೆ ಹೆಚ್ಚಿಸಲಾಗುತ್ತದೆ.
ಕೇಟರಿಂಗ್, ಸ್ವಚ್ಛತೆ ಮತ್ತು ಆನ್‌ಲೈನ್ ಬುಕ್ಕಿಂಗ್ ಮೂಲಕ ಸುಲಭದಲ್ಲಿ ಟಿಕೆಟ್‌ಗಳ ಲಭ್ಯತೆ ಸೇರಿದಂತೆ ಪ್ರಯಾಣಿಕ ಸೌಲಭ್ಯಗಳ ಸುಧಾರಣೆಗೆ ಹೆಚ್ಚಿನ ಗಮನವನ್ನು ಹರಿಸಲಾಗುವುದು ಎಂದು ರೈಲ್ವೆ ಮಂಡಳಿಯ ನೂತನ ಸದಸ್ಯ (ಸಂಚಾರ) ಮುಹಮ್ಮದ್ ಜಂಷೆಡ್ ಅವರು ಅಧಿಕಾರ ಸ್ವೀಕಾರದ ಬಳಿಕ ಹೇಳಿದರು.[ಕನಿಷ್ಠ ಪ್ರಯಾಣ ದರ ಏರಿಕೆ ಮಾಡಿದ ರೈಲ್ವೆ ಇಲಾಖೆ]

ಮುಂದಿನ ರೈಲ್ವೆ ಬಜೆಟ್ ಮಂಡನೆ ಸನ್ನಿಹಿತ(ಫೆಬ್ರವರಿ 2016)ವಾಗಿರುವ ಹಿನ್ನೆಲೆಯಲ್ಲಿ ಜಂಷೆಡ್ ಅವರು, ತಾತ್ಕಾಲಿಕವಾಗಿ ಹುದ್ದೆಯಲ್ಲಿದ್ದ ಹೆಚ್ಚುವರಿ ಸದಸ್ಯ ಕುಂದನ್ ಸಿಂಗ್ ಅವರಿಂದ ಅಧಿಕಾರವನ್ನು ಹಸ್ತಾಂತರಿಸಿಕೊಂಡಿರುವುದು ಮಹತ್ವವನ್ನು ಪಡೆದುಕೊಂಡಿದೆ.[ರೈಲು ಹೊರಡುವ ಅರ್ಧ ತಾಸು ಮುನ್ನ ಬುಕ್ಕಿಂಗ್]
ಡಿಜಿಟಲ್ ಭಾರತ ಅಭಿಯಾನದ ಅಂಗವಾಗಿ ಆನ್ ಲೈನ್ ಬುಕಿಂಗ್‌ಗಳನ್ನು ಹೆಚ್ಚಿಸಲು ಇನ್ನಷ್ಟು ಐಟಿ ಸಂಬಂಧಿತ ಕ್ರಮಗಳನ್ನು ರೈಲ್ವೆಯು ಕೈಗೊಳ್ಳಲಿದೆ ಎಂದು ಜಂಷೆಡ್ ತಿಳಿಸಿದರು. ಪ್ರಸಕ್ತ ಆನ್‌ಲೈನ್‌ನಲ್ಲಿ ದಿನಕ್ಕೆ 5.5 ಲಕ್ಷ ಟಿಕೆಟ್‌ಗಳನ್ನು ಕಾದಿರಿಸಲಾಗುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇದನ್ನು 7.5ಲಕ್ಷಕ್ಕೆ ಹೆಚ್ಚಿಸುವ ಗುರಿಯಿದೆ ಎಂದರು. (ಪಿಟಿಐ)












Click it and Unblock the Notifications