ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಟೆಂಡರ್ ಪ್ರಕರಣ: ಲಾಲೂ ಹಾಗೂ ಕುಟುಂಬ ವಿರುದ್ಧ ಚಾರ್ಜ್ ಶೀಟ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 24: ರೈಲ್ವೆ ಟೆಂಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಹಾಗೂ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು, ಚಾರ್ಜ್ ಶೀಟ್ ಹಾಕಿದೆ.

ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ, ತೇಜಸ್ವಿ ಯಾದವ್, ಪಿಸಿ ಗುಪ್ರಾ, ಲಾರಾ ಪ್ರಾಜೆಕ್ಟ್ ಎಲ್ಎಲ್ ಟಿ ಹಾಗೂ ಇನ್ನಿತರ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಲೈಟ್ ಮಾರ್ಕೆಟಿಂಗ್ ಗೆ ಸೇರಿರುವ 44.75 ಕೋಟಿ ರು ಗಳನ್ನು ವಶಪಡಿಕೊಳ್ಳಲಾಗಿದೆ.

ED chargesheet Lalu, wife, son others in Railway Tender scam

ಲಾಲೂ ಅವರು ರೈಲ್ವೆ ಸಚಿವರಾಗಿದ್ದ 2004-2009ರ ಅವಧಿಯಲ್ಲಿ ರಾಂಚಿ ಮತ್ತು ಪುರಿಯಲ್ಲಿ ಐಆರ್‌ಸಿಟಿಸಿ ಹೋಟೆಲ್‌ಗಳ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪೆನಿಯೊಂದಕ್ಕೆ ನೀಡುವಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ.

ರೈಲ್ವೆ ಹೋಟೆಲ್ ಹಗರಣ: ಲಾಲೂ ಕುಟುಂಬಕ್ಕೆ ಸಮನ್ಸ್ರೈಲ್ವೆ ಹೋಟೆಲ್ ಹಗರಣ: ಲಾಲೂ ಕುಟುಂಬಕ್ಕೆ ಸಮನ್ಸ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 05ರಂದು ಎಫ್ಐಆರ್ ಹಾಕಲಾಗಿದೆ. ರಾಂಚಿಯಲ್ಲಿನ ರೈಲ್ವೆ ಸುಪರ್ದಿಯ ಹೋಟೆಲ್ ಗಳನ್ನು ನಿರ್ವಹಿಸಲು ಸುಜಾತಾ ಹೋಟೆಲ್ ಗೆ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಟೆಂಡರ್ ನಿಯಮ ಸೇರಿದಂತೆ ಎಲ್ಲಾ ನಿಯಮಗಳನ್ನು ಮೀರಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.

2004 ರಿಂದ 14ರ ಅವಧಿಯಲ್ಲಿ ನಡೆದಿರುವ ಅಕ್ರಮ ಇದಾಗಿದ್ದು, ಸುಜಾತಾ ಹೋಟೆಲ್ ಗೆ ಅನುಕೂಲವಾಗುಂತೆ ಮಾಡಲಾಗಿದೆ ಎಂದು ಸಿಬಿಐ ಹೆಚ್ಚುವರಿ ನಿರ್ದೇಶಕ ರಾಕೇಶ್ ಆಸ್ತಾನ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದಲ್ಲದೆ, ಲಾಲೂ ಯಾದವ್ ಕುಟುಂಬಸ್ಥರಿಗೆ ಸೇರಿರುವ ಲಾರಾ ಪ್ರಾಜೆಕ್ಟ್ಸ್ ಸಂಸ್ಥೆಗೆ ಅಕ್ರಮವಾಗಿ ಭೂ ಪರಭಾರೆಯಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

English summary
The Enforcement Directorate has failed a prosecution complaint against former Bihar Chief Minister, Lalu Prasad Yadav in connection with the Railway Hotel Tender Scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X