Get Updates
Get notified of breaking news, exclusive insights, and must-see stories!

Indian Railways: ಮೇ 1 ರಿಂದ ಎಲ್ಲಾ ರೈಲುಗಳು ಬಂದ್!?: ಏನಿದು ಸುದ್ದಿ

ಬೆಂಗಳೂರು, ಮಾರ್ಚ್ 01: ಹಳೆಯ ಪಿಂಚಣಿ ಯೋಜನೆ (OPS) ಜಾರಿಗೆ ತರಬೇಕು ಎಂಬ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮೇ 1 ರಿಂದ ಭಾರತದಾದ್ಯಂತ ಎಲ್ಲಾ ರೈಲು ಸೇವೆಗಳನ್ನು ನಿಲ್ಲಿಸುವುದಾಗಿ ರೈಲ್ವೆ ನೌಕರರು ಮತ್ತು ಕಾರ್ಮಿಕರ ಹಲವಾರು ಒಕ್ಕೂಟಗಳು ಗಂಭೀರ ಬೆದರಿಕೆ ಹಾಕಿವೆ.

ಈ ಒಕ್ಕೂಟಗಳು ಜಾಯಿಂಟ್ ಫೋರಂ ಫಾರ್ ರಿಸ್ಟೋರೇಶನ್ ಆಫ್ ಓಲ್ಡ್ ಪೆನ್ಶನ್ ಸ್ಕೀಮ್ (JFROPS) ಅಡಿಯಲ್ಲಿ ಒಗ್ಗೂಡಿವೆ. ಜೆಎಫ್‌ಆರ್‌ಒಪಿಎಸ್ ಕೋರ್ ಕಮಿಟಿ ಸಭೆಯಲ್ಲಿ ಮೇ ಒಂದು 2024 ರಿಂದ ಹಳೆ ಪಿಂಚಣೆ ಯೋಜನೆ ಜಾರಿಗಾಗಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಜೆಎಫ್‌ಆರ್‌ಒಪಿಎಸ್‌ನ ಸಂಚಾಲಕ ಮತ್ತು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ.

Railway employees and workers threaten to stop all trains from May 1

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ನಲ್ಲಿ ಜೆಎಫ್‌ಆರ್‌ಒಪಿಎಸ್‌ನ ಸಂಚಾಲಕ ಮತ್ತು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅನಿರ್ದಿಷ್ಟ ಮುಷ್ಕರದ ಕುರಿತು ಸೂಚನೆಯನ್ನು ಹಂಚಿಕೊಂಡಿದ್ದಾರೆ. "19ನೇ ಮಾರ್ಚ್ 2024 ರಂದು ಸಂಬಂಧಿತ ನಿಯಮಗಳ ಪ್ರಕಾರ ಅನಿರ್ದಿಷ್ಟಾವಧಿ ಮುಷ್ಕರದ ಸೂಚನೆಯನ್ನು ಮತ್ತು ಮೇ 1, 2024 ರಂದು ಅಂದರೆ ಅಂತರಾಷ್ಟ್ರೀಯ ಕಾರ್ಮಿಕ ದಿನದಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ವಾನುಮತದಿಂದ ನಿರ್ಧರಿಸಲಾಗಿದೆ" ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು ಹಂಚಿಕೊಂಡ ಪತ್ರಿಕಾ ಟಿಪ್ಪಣಿಯಲ್ಲಿ "ಪ್ರಚಲಿತ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಗಣಿಸಿ ಮತ್ತು ಎನ್‌ಪಿಎಸ್ ಬದಲಿಗೆ ಖಚಿತವಾದ ಖಾತರಿಯ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಬಗ್ಗೆ ಸರ್ಕಾರದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು, ಟ್ರೇಡ್ ಯೂನಿಯನ್ಸ್ ಎಲ್ಲಾ ಘಟಕಗಳು ಹೀಗೆ ನೇರ ಕ್ರಮವನ್ನು ಆಶ್ರಯಿಸುವುದನ್ನು ಬಿಟ್ಟು ಯಾವುದೇ ಪರ್ಯಾಯ ಉಳಿದಿಲ್ಲ ಎಂದು ನಿರ್ಧರಿಸಿದೆ" ಎಂದು ಹೇಳಿದ್ದಾರೆ.

Railway employees and workers threaten to stop all trains from May 1

"ಹೊಸ ಪಿಂಚಣಿ ಯೋಜನೆಯ ಬದಲಿಗೆ ವ್ಯಾಖ್ಯಾನಿತ ಖಾತರಿಯ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ನಮ್ಮ ಬೇಡಿಕೆಗೆ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿಲ್ಲ. ಈಗ, ನೇರ ಕ್ರಮವನ್ನು ಆಶ್ರಯಿಸುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಜೆಎಫ್‌ಆರ್‌ಒಪಿಎಸ್‌ನ ಅಡಿಯಲ್ಲಿ ವಿವಿಧ ಫೆಡರೇಶನ್‌ಗಳ ಪ್ರತಿನಿಧಿಗಳು ಜಂಟಿಯಾಗಿ ಮಾರ್ಚ್ 19 ರಂದು ರೈಲ್ವೆ ಸಚಿವಾಲಯಕ್ಕೆ ಅಧಿಕೃತವಾಗಿ ನೋಟಿಸ್ ನೀಡಲಾಗುವುದು" ಎಂದಿದ್ದಾರೆ.

"ನಾವು ನೀಡುವ ಈ ನೋಟಿಸ್ ಮೇ 1 ರಿಂದ ದೇಶಾದ್ಯಂತ ಮುಷ್ಕರ ಮತ್ತು ಎಲ್ಲಾ ರೈಲು ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಅವರಿಗೆ ತಿಳಿಸುತ್ತದೆ" ಎಂದು ತಿಳಿಸಿದ್ದಾರೆ. ಇನ್ನು, ಜೆಎಫ್‌ಆರ್‌ಒಪಿಎಸ್‌ನ ಭಾಗವಾಗಿರುವ ಇತರ ಸರ್ಕಾರಿ ನೌಕರರ ಹಲವಾರು ಒಕ್ಕೂಟಗಳು ಸಹ ರೈಲ್ವೆ ಕಾರ್ಮಿಕರ ಜೊತೆಗೆ ಸೇರಿ ಮುಷ್ಕರ ನಡೆಸಲಿವೆ ಎಂದು ಒಕ್ಕೂಟ ತಿಳಿಸಿದೆ.

ಜೆಎಫ್‌ಆರ್‌ಒಪಿಎಸ್‌ನ ಹೊರಡಿಸಿದ ಪತ್ರಿಕಾ ಟಿಪ್ಪಣಿಯಲ್ಲಿ, "ಎಲ್ಲಾ ಘಟಕ ಸಂಸ್ಥೆಗಳು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ಮುಷ್ಕರದ ಸೂಚನೆಯನ್ನು ತಮ್ಮ ಆಡಳಿತಗಳಿಗೆ ಸೂಕ್ತವಾದ ರೀತಿಯಲ್ಲಿ ತಿಳಿಸಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲು ವಿನಂತಿಸಲಾಗಿದೆ. ಹಳೆಯ ಪಿಂಚಣಿ ವ್ಯವಸ್ಥೆ ಕಾರ್ಮಿಕರ ಹಿತಾಸಕ್ತಿಯಲ್ಲಿದ್ದರೂ, ಹೊಸ ಪಿಂಚಣಿ ಯೋಜನೆಯು ಅವರ ಉದ್ಯೋಗಿಗಳ ಕಲ್ಯಾಣವನ್ನು ಕಾಳಜಿ ವಹಿಸುವುದಿಲ್ಲ" ಎಂದು ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+