ಹೊಸ ಆಲೋಚನೆ ಚಿಂತನೆಗಾಗಿ ರಾಹುಲ್ ವಿಶ್ವ ಪರ್ಯಟನ

Posted By:
Subscribe to Oneindia Kannada

ಕಾಂಗ್ರೆಸ್ ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಿಶ್ವದಾದ್ಯಂತ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರ್ವಭಾವಿ ಸಿದ್ಧತೆಯಾಗಿ ಈ ಪ್ರವಾಸಕ್ಕೆ ಕಳುಹಿಸಲಾಗುತ್ತದೆ.

ಇಡೀ ಮಾಧ್ಯಮ ಮೋದಿ ಹಿಡಿತದಲ್ಲಿದೆ : ರಾಹುಲ್ ವಾಗ್ದಾಳಿ

"ಈ ಅಧ್ಯಯನ ಪ್ರವಾಸದಿಂದ ರಾಹುಲ್ ಗಾಂಧಿ ಅವರಿಗೆ ಸಹಾಯವಾಗುತ್ತದೆ. ಜತೆಗೆ ಕಾಂಗ್ರೆಸ್ ಪಕ್ಷ ಹಾಗೂ ಇಡೀ ದೇಶಕ್ಕೆ ಅನುಕೂಲವಾಗುತ್ತದೆ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಪಿ.ಜೋಶಿ ಹೇಳಿದ್ದಾರೆ. ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುವುದರಿಂದ ಹೊಸ ನೀತಿಯನ್ನು ರೂಪಿಸಲು ಅವರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

Rahul Gandhi Will Go On A 'Study Tour' Of The World To Prepare For A 2019 Face-Off With Modi

ರಾಹುಲ್ ಅವರಿಗೆ ಈ ದೇಶಕ್ಕಾಗಿ ಹೊಸ ಆಲೋಚನೆ, ಚಿಂತನೆಯನ್ನು ತರುವ ಉದ್ದೇಶವಿದೆ. ಬೇರೆ ಪಕ್ಷದ ನಾಯಕರು ಇನ್ನೂ ಭೂತಕಾಲದಲ್ಲೇ ಉಳಿದುಹೋಗಿದ್ದಾರೆ. ಆದರೆ ರಾಹುಲ್ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಇದರಿಂದ ಇತರ ದೇಶಗಳಿಂದ ಭಾರತ ಏನು ಕಲಿಯಬಹುದು ಎಂಬ ಬಗ್ಗೆ ಅವರ ಜ್ಞಾನ ವೃದ್ಧಿಸುತ್ತದೆ ಎಂದಿದ್ದಾರೆ.

ಸಾರ್ಥಕ ಸಮಾವೇಶಲ್ಲಿ ಮೋದಿ ಲೇವಡಿ ಮಾಡಿದ ರಾಹುಲ್!

ಕಳೆದ ತಿಂಗಳು ರಾಹುಲ್ ಗಾಂಧಿ ನಾರ್ವೆಗೆ ತೆರಳಿದ್ದರು. ಅಲ್ಲಿ ಉದ್ಯಮಿಗಳನ್ನು ಮತ್ತು ಗಣ್ಯರನ್ನು ಭೇಟಿ ಮಾಡಿದ್ದರು. ಈ ತಿಂಗಳು ರಾಹುಲ್ ಅಮೆರಿಕದ ಸಿಲಿಕಾನ್ ವ್ಯಾಲಿಗೆ ತೆರಳುವ ಸಾಧ್ಯತೆ ಇದೆ. ಅಲ್ಲಿ ಆರ್ಟಿಫಿಷಿಯಲ್ ಇಂಟಲೆಜೆನ್ಸ್ ಬಗ್ಗೆ ಹೆಚ್ಚಿನ ವಿಷಯ ಕಲೆ ಹಾಕಲಿದ್ದಾರೆ.

ಸೆಪ್ಟೆಂಬರ್ ಇಪ್ಪತ್ತರಂದು ಸಂಜೆ ಆರು ಗಂಟೆಗೆ ಅಮೆರಿಕದ ಟೈಮ್ಸ್ ಸ್ಕ್ವಯರ್ ನಲ್ಲಿರುವ ಮೇರಿಯಟ್ ಮಾರ್ಕಿಸ್ ಹೋಟೆಲ್ ನಲ್ಲಿ ಇಂಡಿಯ ನ್ಯಾಷನಲ್ ಓವರ್ ಸೀಸ್ ಕಾಂಗ್ರೆಸ್ ಯುಎಸ್ ಎ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಾಹುಲ್ ಭಾಗವಹಿಸಲಿದ್ದಾರೆ.

ಕಾಂಗ್ರೆಸ್ ಈಗ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ: ಜೈರಾಂ ರಮೇಶ್

ಓವರ್ ಸೀಸ್ ಕಾಂಗ್ರೆಸ್ ನ ಮುಖ್ಯಸ್ಥ ಸ್ಯಾಮ್ ಪಿಟ್ರೋಡಾ, ಯುಎಸ್ ಎ ರಾಷ್ಟ್ರೀಯ ಅಧ್ಯಕ್ಷ ಶುದ್ಧ್ ಪ್ರಕಾಶ್ ಸಿಂಗ್ ಭಾಗವಹಿಸಲಿದ್ದಾರೆ.

ಈ ಎಲ್ಲ ಅಧ್ಯಯನ ಪ್ರವಾಸವು ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾಗುತ್ತಿದೆ. ನಲವತ್ತೇಳು ವರ್ಷದ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ನಿರೀಕ್ಷೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress party's vice president Rahul Gandhi is reportedly being sent for study tours around the world in preparation for the 2019 national elections in India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ