ಮಹಾತ್ಮಾ ಗಾಂಧಿ ಅಲಂಕರಿಸಿದ ಸ್ಥಾನಕ್ಕೆ ರಾಹುಲ್ ಗಾಂಧಿ

Posted By:
Subscribe to Oneindia Kannada
   ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ | Oneindia Kannada

   ನವದೆಹಲಿ, ಡಿಸೆಂಬರ್ 04 : ಭಾರೀ ಚರ್ಚೆಗೆ ಗ್ರಾಸವಾಗಿರುವ, ರಾಹುಲ್ ಗಾಂಧಿ ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚುವ, ಅವರಿಗೆ ಭಾರೀ ಸವಾಲೊಡ್ಡುವ ಪಟ್ಟಾಭಿಷೇಕದ ಮುಹೂರ್ತ ಹತ್ತಿರ ಬರುತ್ತಿದೆ. ಸೋಮವಾರ, ಡಿಸೆಂಬರ್ 4ರಂದು ಅವರು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

   ಎಐಸಿಸಿ ಅಧ್ಯಕ್ಷೀಯ ಚುನಾವಣೆ: ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

   ರಾಹುಲ್ ಗಾಂಧಿಯವರಿಗೆ ಪ್ರತಿಯಾಗಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆ ಈಗ ಭಾರೀ ಕುತೂಹಲ ಕೆರಳಿಸಿದೆ. ಈಗಾಗಲೆ ಕೆಲವರು ರಾಹುಲ್ ಅವಿರೋಧವಾಗಿ ಆಯ್ಕೆಯಾಗುವ ಬಗ್ಗೆ ಚಕಾರ ತೆಗೆದಿದ್ದು, ಮಂಗಳವಾರವಷ್ಟೇ ಯಾರ್ಯಾರು ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

   ಮೋದಿಗೆ ದಿನಕ್ಕೊಂದು ಪ್ರಶ್ನೆ : ರಾಹುಲ್ ಕೇಳಿದ 4 ಪ್ರಶ್ನೆಗಳು!

   1885ರಲ್ಲಿ ವೋಮೇಶ್ ಚಂದರ್ ಬ್ಯಾನರ್ಜಿ ಅವರು ಕಾಂಗ್ರೆಸ್ನ ಮೊದಲ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ದಾದಾಬಾಯಿ ನವರೋಜಿ, ಗೋಪಾಲ ಕೃಷ್ಣ ಗೋಖಲೆ, ಮದನ್ ಮೋಹನ್ ಮಾಳವೀಯ, ಅನಿ ಬೆಸಂಟ್, ಲಾಲಾ ಲಜಪತ್ ರಾಯ್, ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಇಂದಿರಾ ಗಾಂಧಿ ಮುಂತಾದವರು ಭವ್ಯ ಇತಿಹಾಸವಿರುವ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ.

   1978ರಲ್ಲಿ ಇಂದಿರಾ ಗಾಂಧಿಯವರು ಪಕ್ಷದ ಚುಕ್ಕಾಣಿಯನ್ನು ತಮ್ಮ ಹತೋಟಿಗೆ ತೆಗೆದುಕೊಂಡ ನಂತರ ಪಿವಿ ನರಸಿಂಹರಾವ್ ಮತ್ತು ಸೀತಾರಾಂ ಕೇಸರಿಯಂಥವರು ಅಧ್ಯಕ್ಷ ಪದವಿಯನ್ನು ಅಲಂಕರಿಸಿದರಾದರೂ, ಲಗಾಮು ಇದ್ದದ್ದು ಗಾಂಧಿ ಕುಟುಂಬದಲ್ಲಿಯೇ. 1998ರಲ್ಲಿ ಸೋನಿಯಾ ಗಾಂಧಿಯವರು ಅಧ್ಯಕ್ಷರಾದ ನಂತರ ಆ ಸ್ಥಾನಕ್ಕೇರುವ ಧೈರ್ಯವನ್ನು ಯಾರೂ ಮಾಡಿಲ್ಲ. ಮಾಡುವುದು ಕೂಡ ಅಸಾಧ್ಯ.

   ಪಟ್ಟಕ್ಕೇರುವುದು ರಾಹುಲ್ ಅವರಿಗೆ ಅನಿವಾರ್ಯವಾಗಿದೆ

   ಪಟ್ಟಕ್ಕೇರುವುದು ರಾಹುಲ್ ಅವರಿಗೆ ಅನಿವಾರ್ಯವಾಗಿದೆ

   ಸುಮಾರು ಎರಡು ದಶಕಗಳ ಕಾಲ ಕಾಂಗ್ರೆಸ್ ಸಾಮ್ರಾಜ್ಯವನ್ನು ಆಳಿದ ಸೋನಿಯಾ ಗಾಂಧಿಯವರು ಅಸ್ವಸ್ಥರಾಗಿರುವುದರಿಂದ ಅನಿವಾರ್ಯವಾಗಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧಿಕಾರ ಗ್ರಹಣ ಮಾಡುವ ಕಾಲ ಸನ್ನಿಹಿತವಾಗಿದೆ. ಈ ಹಿಂದೆ ಕೂಡ ಈ ಪ್ರಶ್ನೆ ಎದುರಾದಾಗ ರಾಹುಲ್ ಅವರು ಹಿಂದೇಟು ಹಾಕುತ್ತಿದ್ದರು ಮತ್ತು ಅವರು ಆ ಸ್ಥಾನಕ್ಕೆ ಅರ್ಹರೆ ಎಂಬ ಮಾತು ಕೂಡ ಕೇಳಿಬರುತ್ತಿತ್ತು.

   ರಾಹುಲ್ ಬಿಟ್ಟರೆ ಕಾಂಗ್ರೆಸ್ ಮುನ್ನಡೆಸುವ ತಾಕತ್ತು ಯಾರಿಗಿದೆ?

   ತಮ್ಮ ವರ್ಚಸ್ಸು ಬೆಳೆಸಿಕೊಂಡಿದ್ದಾರೆ ರಾಹುಲ್

   ತಮ್ಮ ವರ್ಚಸ್ಸು ಬೆಳೆಸಿಕೊಂಡಿದ್ದಾರೆ ರಾಹುಲ್

   ರಾಹುಲ್ ಗಾಂಧಿಯವರು 2013ರಲ್ಲಿ ಉಪಾಧ್ಯಕ್ಷ ಸ್ಥಾನ ಗ್ರಹಣ ಮಾಡಿದ ನಂತರ ಎದುರಿಸಿರುವ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿರುವುದು ಅವರ ಮೇಲಿನ ಅಪನಂಬಿಕೆಗೆ ಕಾರಣವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿಯವರು ತಮ್ಮ ವರ್ಚಸ್ಸು ಬೆಳೆಸಿಕೊಂಡಿದ್ದಾರೆ ಮತ್ತು ಪಕ್ಷವನ್ನು ಸಮಗ್ರವಾಗಿ ಮುನ್ನಡೆಸಿಕೊಂಡು ಹೋಗುವ ಉತ್ಸುಕತೆಯನ್ನೂ ತೋರಿದ್ದಾರೆ.

   ಸೀತಾರಾಂ ಯಚೂರಿಯವರ ಮಾರ್ಮಿಕ ನುಡಿ

   ಸೀತಾರಾಂ ಯಚೂರಿಯವರ ಮಾರ್ಮಿಕ ನುಡಿ

   ರಾಹುಲ್ ಗಾಂಧಿಯವರು ಸೋನಿಯಾ ಅವರ ಸ್ಥಾನವನ್ನು ಯಶಸ್ವಿಯಾಗಿ ತುಂಬಲು ಸಾಧ್ಯವೇ ಇಲ್ಲ ಎಂದು ಸಿಪಿಐ(ಎಂ) ಹಿರಿಯ ನಾಯಕ ಸೀತಾರಾಂ ಯಚೂರಿಯವರು ಮಾರ್ಮಿಕವಾಗಿ ನುಡಿದಿದ್ದರು. ಸೋನಿಯಾ ಅವರು ವಿರೋಧ ಪಕ್ಷದ ನಾಯಕಿಯಾಗಿ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದು ರಾಹುಲ್ ಅವರಿಂದ ಸಾಧ್ಯವೆ ಎಂಬುದು ಯಚೂರಿಯವರ ಅಂತರ್ಗತ ಮಾತು.

   ಅಮ್ಮ ಮತ್ತು ಮಗ ಮಾತ್ರ ಅಧ್ಯಕ್ಷರಾಗಲು ಸಾಧ್ಯ!

   ಅಮ್ಮ ಮತ್ತು ಮಗ ಮಾತ್ರ ಅಧ್ಯಕ್ಷರಾಗಲು ಸಾಧ್ಯ!

   ಕೆಲ ದಿನಗಳ ಹಿಂದೆ ಕಾಂಗ್ರೆಸ್ ನ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್ ಅವರು ಕೂಡ, ಕಾಂಗ್ರೆಸ್ ನಲ್ಲಿ ಅಮ್ಮ ಮತ್ತು ಮಗ ಮಾತ್ರ ಅಧ್ಯಕ್ಷರಾಗಲು ಸಾಧ್ಯ ಎಂದು ವ್ಯಂಗ್ಯಭರಿತ ಮಾತುಗಳನ್ನಾಡಿದ್ದರು. ಸೋನಿಯಾ ಮತ್ತು ರಾಹುಲ್ ಅವರನ್ನು ಎದುರು ಹಾಕಿಕೊಳ್ಳುವುದು ಕಾಂಗ್ರೆಸ್ ನಾಯಕರಿಗೆ ಬೇಡವಾಗಿರುವುದು ಮತ್ತು ಅವರನ್ನು ಪ್ರಶ್ನಿಸುವ ತಾಕತ್ತು ಯಾರಿಗೂ ಇಲ್ಲದಿರುವುದು ಈ ಮಾತುಗಳಲ್ಲಿ ವೇದ್ಯವಾಗಿತ್ತು.

   ತಾಯಿ ಮಗ ಮಾತ್ರ ಅಧ್ಯಕ್ಷರಾಗಲು ಸಾಧ್ಯ : ಅಯ್ಯರ್ ವ್ಯಂಗ್ಯ

   ಶೆಹಜಾದ್ ಪೂನಾವಾಲಾ ಪ್ರತಿರೋಧ

   ಶೆಹಜಾದ್ ಪೂನಾವಾಲಾ ಪ್ರತಿರೋಧ

   ಈ ನಡುವೆ, ಮಹಾರಾಷ್ಟ್ರದ ಯುವ ಕಾಂಗ್ರೆಸ್ ಧುರೀಣ ಶೆಹಜಾದ್ ಪೂನಾವಾಲಾ ಅವರು ರಾಹುಲ್ ಗಾಂಧಿ ವಿರುದ್ಧ ತಿರುಗಿಬಿದ್ದಿದ್ದು ಭಾರೀ ಮುಜುಗರವನ್ನುಂಟು ಮಾಡಿದೆ. ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಂದುಕೊಂಡ್ರಾ? ಬೇಕಿದ್ದರೆ ನನ್ನ ಜೊತೆ ಮುಕ್ತ ಚರ್ಚೆಗೆ ಬನ್ನಿ ಎಂದು ಪೂನಾವಾಲಾ ಅವರು ರಾಹುಲ್ ಮತ್ತು ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದಿದ್ದಾರೆ. ಈ ಗಟ್ಟಿತನದ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

   ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ನಲ್ಲೇ ಭುಗಿಲೆದ್ದ ಅಸಮಾಧಾನ!

   ಮಂಗಳವಾರವೇ ಫಲಿತಾಂಶ ಹೊರಬೀಳಲಿದೆ

   ಮಂಗಳವಾರವೇ ಫಲಿತಾಂಶ ಹೊರಬೀಳಲಿದೆ

   ರಾಹುಲ್ ಅವರ ಉಮೇದುವಾರಿಕೆಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದೇಶದಲ್ಲಿರುವ ಎಲ್ಲ ರಾಜ್ಯಗಳ ಘಟಕಗಳು ಒಕ್ಕೊರಲಿನಿಂದ ಒಪ್ಪಿಕೊಂಡಿವೆ. ಹೀಗಾಗಿ ಅವರಿಗೆ ಯಾವುದೇ ಸ್ಪರ್ಧೆ ಏರ್ಪಡುವುದು ಅಸಾಧ್ಯ. ಸೋಮವಾರವೇ ಉಮೇದುವಾರಿಕೆ ಸಲ್ಲಿಸಲು ಕಟ್ಟಕಡೆಯ ದಿನವಾಗಿದೆ. ಯಾರೂ ಸ್ಪರ್ಧಿಸಲಿಲ್ಲವೆಂದರೆ ಮಂಗಳವಾರವೇ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಘೋಷಿಸುವ ಸಂಭವನೀಯತೆಯೇ ಹೆಚ್ಚು.

   ರಾಹುಲ್ ಜತೆಗೂಡಲಿದ್ದಾರೆ ಸಿಂಗ್

   ರಾಹುಲ್ ಜತೆಗೂಡಲಿದ್ದಾರೆ ಸಿಂಗ್

   ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಅಧ್ಯಕ್ಷರಾಗಿರುವ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್, ಶೀಲಾ ದೀಕ್ಷಿತ್, ಆಸ್ಕರ್ ಫರ್ನಾಂಡಿಸ್, ಮೊಹಸೀನಾ ಕಿದ್ವಾಯಿ ಅವರು ರಾಹುಲ್ ಅವರನ್ನು ಜೊತೆಗೂಡಲಿದ್ದಾರೆ. ಅವರ ಜೊತೆ ಕಾಂಗ್ರೆಸ್ ನ ಹಿರಿಯ ಮತ್ತು ಕಿರಿಯ ನಾಯಕರ ಹಿಂಡೇ ಇರಲಿದೆ. ರಾಹುಲ್ ಅವರು ಸಲ್ಲಿಸುವ ನಾಮಪತ್ರಕ್ಕೆ ಮನಮೋಹನ ಸಿಂಗ್ ಅವರು ಸಹಿ ಹಾಕಲಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Is Congress Vice-president Rahul Gandhi capable to raise to the post of President of Congress which was once held by people like Mahatma Gandhi, Sardar Vallab Bhai Patel, Indira Gandhi etc? Time will tell, but Rahul has set to take up the challenge.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ