ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತೆ ರಾಹುಲ್ ಗಾಂಧಿ? CWC ಕುತೂಹಲಕಾರಿ

|
Google Oneindia Kannada News

ನವದೆಹಲಿ, ಆ. 23: ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರ ತಾತ್ಕಾಲಿಕ ಅವಧಿ ಮುಕ್ತಾಯವಾಗಿದೆ. ಹೊಸ ಅಧ್ಯಕ್ಷರ ನೇಮಕಾತಿ ತನಕ ಹಂಗಾಮಿಯಾಗಿ ಮುಂದುವರೆಯಲಿದ್ದಾರೆ. ಈ ನಡುವೆ ಗಾಂಧಿ(ಸೋನಿಯಾ ಗಾಂಧಿ ಕುಟುಂಬಸ್ಥರು)ಯೇತರ ಅಧ್ಯಕ್ಷರನ್ನು ನೇಮಿಸುವಂತೆ ಎಐಸಿಸಿಯಲ್ಲಿ ದೊಡ್ಡ ಕೂಗೆದ್ದಿದೆ. ಈ ನಡುವೆ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಬಲವಾಗಿ ಕೇಳಿ ಬಂದಿದೆ ಆದರೆ, 23ಕ್ಕೂ ಅಧಿಕ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರ ಬರೆಯದ್ದೇ ಕಥೆ ಹೇಳುತ್ತಿದೆ.

ನಮ್ಮ ಕುಟುಂಬದಿಂದ ಯಾರೂ ಅಧ್ಯಕ್ಷರಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ಗಾಂಧಿ ಕುಟುಂಬಕ್ಕೆ ಸೇರಿಲ್ಲದವರನ್ನು ನಮ್ಮ ನಾಯಕ ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಸೋನಿಯಾ ಅಧಿಕಾರ ಅವಧಿ ಮುಕ್ತಾಯ? ಮುಂದೆ ಯಾರು?ಸೋನಿಯಾ ಅಧಿಕಾರ ಅವಧಿ ಮುಕ್ತಾಯ? ಮುಂದೆ ಯಾರು?

ಈ ನಡುವೆ ಹಿರಿಯ ನಾಯಕರಾದ ಮನಮೋಹನ್ ಸಿಂಗ್, ಎ.ಕೆ ಆಂಟನಿ ಅವರನ್ನು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವಂತೆ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಕೇಳಿಕೊಳ್ಳುವ ಸಾಧ್ಯತೆಯೂ ಇದೆ. ಸೋಮವಾರ(ಆಗಸ್ಟ್. 24)ದಂದು ನಡೆಯುವ ಕಾರ್ಯಕಾರಿ ಸಭೆ ಭಾರಿ ಕುತೂಹಲ ಕೆರಳಿಸಿದೆ.

Rahul Gandhi may Return as Congress President? 23 Congress leaders call for changes in party

ಈ ನಡುವೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೆಲ ವಾರಗಳ ಕೆಳಗೆ 23ಕ್ಕೂ ಅಧಿಕ ಹಿರಿಯ ಮುಖಂಡರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರು, ಪಕ್ಷದ ಈಗಿನ ಪರಿಸ್ಥಿತಿ ಮುಂದಿನ ಕಾರ್ಯತಂತ್ರದ ಬಗ್ಗೆ ವಿಸ್ತಾರವಾಗಿ ಬರೆಯಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

English summary
The Congress Working Committee (CWC), the highest decision-making body of the grand party will assemble for a virual meet at 11 am on Monday, August 24. 23 Congress leaders call for changes in party, write to Sonia Gandhi. Rahul Gandhi to Return as Congress President?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X