ರಾಗಾ-ಲಾಲು ಮಾಂಸಾಹಾರ ವಿಡಿಯೋ: ಬಿಜೆಪಿ ಸಂಬಿತ್ ಪಾತ್ರಾ ವಾಗ್ದಾಳಿ
ನವದೆಹಲಿ, ಸೆಪ್ಟಂಬರ್ 03: ರಾಷ್ಟ್ರೀಯ ಜನತಾದಳದ (RJD) ಅಧ್ಯಕ್ಷ ಲಾಲುಪ್ರಸಾದ್ ಯಾದವ್ ಅವರೊಂದಿಗೆ ಒಡನಾಟದ ವಿಡಿಯೋ ಹಂಚಿಕೊಂಡಿದ್ದ ರಾಹುಲ್ ಗಾಂಧಿಯವರು ಮಾಂಸದ ಅಡುಗೆ ಮಾಡಿದ್ದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.
ಲಾಲು ಪುಸಾದ್ ಯಾದವ್ ಅವರ ಜೊತೆಯಲ್ಲಿ ಸೇರಿ ಕಾಂಗ್ರೆಸ್ ನಾಯಕ ಜನಿವಾರಧಾರಿ ಬ್ರಾಹ್ಮಣ ರಾಹುಲ್ ಗಾಂಧಿ ಅವರು ಶ್ರಾವಣ ಮಾಸದಲ್ಲಿ ಮಟನ್ ಅಡುಗೆ (ಕುರಿ) ಮಾಂಸದ ಅಡುಗೆ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಕಳೆದ ಶನಿವಾರವಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿನ 'INDIA' ಮೈತ್ರಿಕೂಟ ನಾಯಕ ರಾಹುಲ್ ಗಾಂಧಿ ಅವರು ಲಾಲು ಪ್ರಸಾದ್ ಯಾದವ್ ಒಡನಾಟವನ್ನು ಕಾಣಬಹುದು.
ಅಲ್ಲದೇ ಕುರಿ ಮಾಂಸದ ಅಡುಗೆಯನ್ನು ಮಾಡುತ್ತಾರೆ ಲಾಲು ಅವರು ಕುರಿ ಮಾಂಸದ ಅಡುಗೆ ಬಗ್ಗೆ ರಾಹುಲ್ ಗಾಂಧಿಗೆ ವಿವರಿಸುತ್ತಾ ಅಡುಗೆ ಮಾಡುವ ದೃಶ್ಯವಿದೆ. ಅವರು ಸಾಮಗ್ರಿಗಳನ್ನು ಹಾಕುತ್ತಿದ್ದರೆ, ರಾಹುಲ್ ಗಾಂಧಿ ಅವರು ತಾವು ಸಹ ಅಡುಗೆ ಮಾಡಲು ಸಹ ಸಹಾಯ ಮಾಡುತ್ತಾ ಮಾತನಾಡಿದ್ದು ಕಂಡು ಬಂದಿದೆ.
Oh, the theatrics of this Janeudhaari Brahmin.
— Sambit Patra (@sambitswaraj) September 3, 2023
Rahul Gandhi meets Lalu Yadav on August 4th and suddenly, they're MasterChefs cooking mutton.
But they conveniently waited for Saawan to end before showing us their ‘culinary skills’. How's that for timing? pic.twitter.com/grXwMOGqhp
ಹಿಂದೂಗಳ ಭಾವನೆಗೆ ಧಕ್ಕೆ
ರಾಹುಲ್ ಗಾಂಧಿಯವರ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸ೦ಬಿತ್ ಪಾತ್ರಾ ಅವರು, ಹಿಂದೂಗಳ ಭಾವನೆಗೆ ಧಕ್ಕೆ ತರಲೆಂದೇ ಈ ರೀತಿ ಮಾಡಿದ್ದಾರೆ. ರಾಹುಲ್ ಮತ್ತು ಲಾಲು ಅವರು ತಮ್ಮ ಅಡುಗೆ ಕೌಶಲ್ಯ ತೋರಿಸಲೆಂದೆ ಶ್ರಾವಣ ಮುಗಿಯುವುದನ್ನು ಕಾಯುತ್ತಿದ್ದ ಎಂದು ಅವರು ವ್ಯಂಗ್ಯವಾಡಿದ್ದಾರೆ.
ತಾನೊಬ್ಬ ಶಿವಭಕ್ತ ಎಂದು ಕರೆಯಲ್ಪಡುವ ರಾಹುಲ್ ಗಾಂಧಿಯವರು ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿದ್ದಾರೆ. ಕಳೆದ ತಿಂಗಳು ಆಗಸ್ಟ್ ನಲ್ಲಿ ಉತ್ತರ ಭಾರತದಲ್ಲಿ ಶ್ರಾವಣ ಮಾಸ ನಡೆಯಿತು. ಶ್ರಾವಣ ಮುಗಿದ ನಂತರ ಸೆ.2ರಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆದರೆ ಶ್ರಾವಣದಲ್ಲಿಯೇ ಅಡುಗೆ ಮಾಡಿದ್ದರು ಎನ್ನಲಾಗಿದ್ದು, ಇದು ಆಗಸ್ಟ್ 4 ರ ವಿಡಿಯೋ ಎಂದು ಅವರು ತಿಳಿಸಿದರು.












Click it and Unblock the Notifications