ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ: ಚಿದಂಬರಂ

|
Google Oneindia Kannada News

ನವದೆಹಲಿ, ಅಕ್ಟೋಬರ್ 22: ಎಐಸಿಸಿ ಅಧ್ಯಕ್ಷ ಒಂದೆಡೆ ನಾನೇ ಮುಂದಿನ ಪ್ರಧಾನಿ ಎಂದು ಹೇಳಿಕೊಂಡು ಬರುತ್ತಿದ್ದರೆ ಮತ್ತೊಂದೆಡೆ ಅವರದೇ ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿ ಅವರನ್ನು ಪ್ರಧಾನ ಮಂತ್ರಿ ಸ್ಥಾನದ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಮಾಜಿ ಮಂತ್ರಿ ಪಿ.ಚಿದಂಬರಂ ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, 'ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಲ್ಲ' ಎಂದು ಹೇಳಿದ್ದಾರೆ.

Rahul Gandhi is not prime minister candidate: P Chidambaram

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಲು ಕಾಂಗ್ರೆಸ್‌ನಲ್ಲೇ ಒಮ್ಮತ ಇಲ್ಲ ಎಂಬುದು ಚಿದಂಬರಂ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ. ಅಲ್ಲದೆ ಇದನ್ನು ಚುನಾವಣಾ ರಣತಂತ್ರವಾಗಿಯೂ ನೋಡಬಹುದಾಗಿದೆ.

ಕಾಂಗ್ರೆಸ್ ಜತೆ ಕೈ ಜೋಡಿಸಲು ಷರತ್ತು ಹಾಕಿದ ಕಮಲ್ ಹಾಸನ್ಕಾಂಗ್ರೆಸ್ ಜತೆ ಕೈ ಜೋಡಿಸಲು ಷರತ್ತು ಹಾಕಿದ ಕಮಲ್ ಹಾಸನ್

ರಾಹುಲ್ ಗಾಂಧಿಯನ್ನು ಮಾತ್ರವಲ್ಲ, ಕಾಂಗ್ರೆಸ್‌ ಪಕ್ಷದ ಯಾರನ್ನೂ ನಾವು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದಿಲ್ಲ, ಅದು ಚುನಾವಣೆ ಮುಗಿದ ಮೇಲಷ್ಟೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಚಿದಂಬರಂ ಹೇಳಿದ್ದಾರೆ.

ವಿಡಿಯೋ: ಮಿಮಿಕ್ರಿ ಮಾಡಿ ಮೋದಿಯನ್ನು ಅಣಕಿಸಿದ ರಾಹುಲ್ ಗಾಂಧಿ!ವಿಡಿಯೋ: ಮಿಮಿಕ್ರಿ ಮಾಡಿ ಮೋದಿಯನ್ನು ಅಣಕಿಸಿದ ರಾಹುಲ್ ಗಾಂಧಿ!

'ಮೈತ್ರಿಕೂಟ ಒಪ್ಪಿದರೆ ನಾನು ಪ್ರಧಾನಿ ಆಗಲು ತಯಾರಿದ್ದೀನಿ' ಎಂದು ರಾಹುಲ್ ಗಾಂಧಿ ಇತ್ತೀಚೆಗಷ್ಟೆ ಹೇಳಿದ್ದರು. ಅವರ ಹೇಳಿಕೆ ಬಂದ ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೀಗೆ ಹೇಳಿರುವುದು ಕಾಂಗ್ರೆಸ್‌ ಹಾಗೂ ಮೈತ್ರಿಕೂಟದಲ್ಲಿ ಗೊಂದಲ ಇದೆ ಎಂಬುದಕ್ಕೆ ಸೂಚನೆ ಆಗಿದೆ.

ಎಚ್‌ಎಎಲ್‌ ಸಾಮರ್ಥ್ಯಕ್ಕೆ ಅವಮಾನವಾಗಲು ಬಿಡೆವು: ರಾಹುಲ್ ಗಾಂಧಿಎಚ್‌ಎಎಲ್‌ ಸಾಮರ್ಥ್ಯಕ್ಕೆ ಅವಮಾನವಾಗಲು ಬಿಡೆವು: ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರು ಪ್ರಸ್ತುತ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿದ್ದಾರೆ. ಈ ಐದು ರಾಜ್ಯಗಳ ವಿಧಾಸನಭಾ ಚುನಾವಣೆ ಮುಂದಿನ ವರ್ಷಾರಂಭದಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ.

English summary
Congress senior leader P Chidambaram said that 'congress will not project any leader as Prime minister candidate even Rahul Gandhi. He said the alliance will decide about it after the Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X