Hindenburg Research: ಹಿಂಡೆನ್‌ಬರ್ಗ್ ರಿಸರ್ಚ್‌ ಹಿಂದೆ ರಾಹುಲ್ ಗಾಂಧಿ- ಗಿರಿರಾಜ್ ಸಿಂಗ್

ದೆಹಲಿ ಆಗಸ್ಟ್ 13: ಹಿಂಡೆನ್‌ಬರ್ಗ್ ರಿಸರ್ಚ್‌ ದೇಶಕ್ಕೆ ಕೆಟ್ಟ ಹೆಸರು ತಂದಿದೆ. ಅಲ್ಲದೆ ಹಿಂಡೆನ್‌ಬರ್ಗ್ ರಿಸರ್ಚ್‌ ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ಇಂತಹ ಕೆಲಸ ಮಾಡುತ್ತಿದೆ. ಇದರಿಂದಾಗಿ ಹಿಂಡೆನ್‌ಬರ್ಗ್ ರಿಸರ್ಚ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಹಿಂಡೆನ್‌ಬರ್ಗ್ ರಿಸರ್ಚ್‌ ದೇಶಕ್ಕೆ ಕೆಟ್ಟ ಹೆಸರು ತಂದ ತಂಡ. ಇದರಲ್ಲಿ ರಾಹುಲ್ ಗಾಂಧಿ ಹಾಗೂ ಜೈರಾಮ್ ರಮೇಶ್ ಇದ್ದಾರೆ. ಹಿಂಡನ್ ಬರ್ಗ್‌ ತಂಡದಿಂದ ದೇಶಕ್ಕಾದ ಅವಮಾನವನ್ನು ನಾವು ಸಹಿಸುವುದಿಲ್ಲ. ಇವರು ದೇಶದ ಶತ್ರುಗಳು. ಇದರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

Rahul Gandhi is behind Hindenburg Research - Giriraj Singh

ರಾಹುಲ್ ಗಾಂಧಿ ಅವರಿಗೆ ರಾಜ್ಯ ಹಾಗೂ ದೇಶದ ನಿರ್ದೇಶನದ ಕುರಿತು ಯಾವುದೇ ತಿಳುವಳಿಕೆ ಇಲ್ಲ. ರಾಹುಲ್ ಗಾಂಧಿ ಅವರು 'ಶ್ರೀಮಂತನ ಮಗ' ಎಂದು ಗಿರಿರಾಜ್ ಸಿಂಗ್ ಕರೆದರು. ಅಲ್ಲದೆ, ಗೊಂದಲ ಹಾಗೂ ಭೀತಿ ಹುಟ್ಟಿಸಲು ಪ್ರಯತ್ನಿಸುವ ಇಂತಹ ಜನರ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹಿಂಡೆನ್‌ಬರ್ಗ್ ಹಿಂದಿದೆ. ಹಿಂಡೆನ್‌ಬರ್ಗ್ ಭಾರತವನ್ನು ನಾಶ ಮಾಡುವ ಟೂಲ್ ಕಿಟ್ ಆಗಿದೆ. ಇದರ ರೂವಾರಿ ರಾಹುಲ್ ಗಾಂಧಿ ಎಂದು ಅವರು ಆರೋಪಿಸಿದ್ದಾರೆ. ರಾಹುಲ್ ವಿದೇಶಕ್ಕೆ ಹೋಗಿ ದೇಶಕ್ಕೆ ಕಳಂಕ ತರುತ್ತಾರೆ. ಇವರು ಗೊಂದಲ ಹುಟ್ಟಿಸುತ್ತಾರೆ. ದೇಶಕ್ಕೆ ಇಂಥವರು ಕಂಟಕ, ಹೀಗಾಗಿ ಜನರು ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+