Get Updates
Get notified of breaking news, exclusive insights, and must-see stories!

ಅನರ್ಹಗೊಂಡ ರಾಹುಲ್ ಗಾಂಧಿ ಕ್ಷೇತ್ರ ವಯನಾಡಿನಲ್ಲಿ ಉಪಚುನಾವಣೆ ಇಲ್ಲ: ಚುನಾವಣೆ ಆಯೋಗ ಸ್ಪಷ್ಟನೆ

ಬೆಂಗಳೂರು, ಮಾರ್ಚ್ 29: 'ಮೋದಿ' ಉಪನಾಮ ಟೀಕೆ ವಿಚಾರವಾಗಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಪ್ರತಿನಿಧಿಸುವ ಕ್ಷೇತ್ರ ವಯನಾಡು ಕುರಿತು ಭಾರತೀಯ ಚುನಾವಣಾ ಆಯೋಗದ ಚುನಾವಣಾಧಿಕಾರಿಗಳು ಮಹತ್ವದ ಮಾಹಿತಿಯೊಂದು ನೀಡಿದ್ದಾರೆ.

ನದೆಹಲಿಯಲ್ಲಿ ಭಾರತೀಯ ಚುನಾವಣಾ ಆಯೋಗದ ಚುನಾವಣಾಧಿಕಾರಿಗಳಾದ ರಾಜೀವ್ ಕುಮಾರ್ ಅವರು, ಸೂರತ್ ನ ನ್ಯಾಯಾಲಯ ಪ್ರಕರಣವೊಂದರಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿತ್ತು. ಇದಾದ ಬಳಿಕ ಅವರನ್ನು ಸಚಿವಾಲಯವು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದೆ ಅಧಿಸೂಚನೆ ಹೊರಡಿಸಿತು.

Rahul Gandhi Disqualified: Not hurry for By Election in Wayanad, ECI Clarified

ಈ ಅನರ್ಹತೆ ಕುರಿತಂತೆ ರಾಹುಲ್ ಗಾಂಧಿಯವರು ವಯನಾಡು ಕ್ಷೇತ್ರದಲ್ಲಿ ಯಾವುದೇ ಉಪಚುನಾವಣೆ ಸದ್ಯಕ್ಕೆ ನಡೆಸುವ ಚಿಂತನೆ ಇಲ್ಲ. ಈ ಬಗ್ಗೆ ಚುನಾವಣೆ ಆಯೋಗದಿಂದ ಯಾವುದೇ ಆತುರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಪಚುನಾವಣೆಗೆ ಆತುರ ಇಲ್ಲ

ವಿಚಾರಣಾ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ಪ್ರಕರಣ ಕುರಿತಂತೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಆದ್ದರಿಂದ ಅವರು ಕೇರಳದ ವಯನಾಡಿನಲ್ಲಿ ಉಪಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

Rahul Gandhi Disqualified: Not hurry for By Election in Wayanad, ECI Clarified

ವಯನಾಡಿನಲ್ಲಿ ಉಪಚುನಾವಣೆ ನಡೆಸಲು ಯಾವುದೇ ಆತುರತೆ ಇಲ್ಲ. ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ನೀಡಿರುವ ನಿರ್ದಿಷ್ಟ ಪರಿಹಾರ ಖಾಲಿ ಮಾಡಬೇಕು. ಅಲ್ಲಿಯವರೆಗೆ ಚುನಾವಣೆ ಆಯೋಗ ಯಾವುದನ್ನು ನಿರ್ಧರಿಸುವುದಿಲ್ಲ. ಒಂದು ವೇಳೆ ನಡೆಸುವುದಾದರೆ ಆ ಬಗ್ಗೆ ಚುನಾವಣಾ ಆಯೋಗ ತಿಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಯನಾಡ್ ಸಂಸದೀಯ ಪಕ್ಷದಲ್ಲಿ ಖಾಲಿ ಇರುವ ಸ್ಥಾನಕ್ಕೆ ಈ ವರ್ಷದ ಮಾರ್ಚ್ 23 ರಂದು ಅಧಿಸೂಚನೆ ಹೊರಡಿಸಲಾಗಿದೆ. ಅನರ್ಹಗೊಂಡರೆ, ಅಥವಾ ಕಾಲವಾದರೆ ಕಾನೂನಿನ ಪ್ರಕಾರ ಆರು ತಿಂಗಳೊಳಗೆ ಚುನಾವಣೆ ನಡೆಸಬೇಕು ಎಂಬುದಿದೆ. ಆದರೆ ಅರ್ಹತೆ ಬಳಿಕ ಉಳಿದ ಆಡಳಿತದ ಅಧಿಯು ಒಂದು ವರ್ಷಕ್ಕಿಂತ ಕಡಿಮೆಯಿದ್ದರೆ ಚುನಾವಣೆ ನಡೆಸುವುದಿಲ್ಲ ಎಂದು ಕಾನೂನಲ್ಲಿ ಉಲ್ಲೇಖಿಸಲಾಗಿದೆ ಎಂದು ರಾಜೀವ್ ಕುಮಾರ್ ವಿವರಿಸಿದರು.

ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

ಸಂಸತ್ತಿನ ಸದಸ್ಯತ್ವವನ್ನು ರದ್ದುಗೊಳಿಸಿದ ನಂತರ ರಾಹುಲ್ ಗಾಂಧಿಯ ಹಿರಿಯ ಕಾಂಗ್ರೆಸ್ ನಾಯಕನ ವಿರುದ್ಧದ ಕ್ರಮವನ್ನು ಪ್ರಜಾಪ್ರಭುತ್ವದ ವಿರುದ್ಧದ ಕ್ರಮ ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಯಾಸಿಸಂ ವಿರುದ್ಧ ಹೋರಾಡಲು ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಬೇಕಿದೆ ಎಂದು ನಾಯಕರು ಬಿಜೆಪಿ ಮೇಲೆ ಕಿಡಿ ಕಾರಿದ್ದಾರೆ.

ಗಾಂಧಿ ವಂಶದ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಮತ್ತು ವಯನಾಡ್ ಲೋಕಸಭಾ ಕ್ಷೇತ್ರದ ಎಡಪಕ್ಷಗಳ ಮುಖಂಡರು ದೂರಿದ್ದಾರೆ. ಮೋದಿ ಉಪನಾಮ ಹೇಳಿಕೆಗಾಗಿ ಮಾನಹಾನಿ ಮಾಡಿದ ಆರೋಪದ ಮೇಲೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಗಾಂಧಿ ಮಾರ್ಚ್ 23 ರಂದು ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ನೀಡಿ ಆದೇಶಿಸಿತು. ರಾಹುಲ್ ಗಾಂಧಿಗೆ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲು ನ್ಯಾಯಾಲಯವು 30 ದಿನಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿತು.

ಇದಾದ ಬಳಿಕ ಲೋಕಸಭೆಯ ಸೆಕ್ರೆಟರಿಯೇಟ್ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿತು. ಅಲ್ಲದೇ ಸಂಸದರ ಎಲ್ಲಾ ಸವಲತ್ತುಗಳನ್ನು ಕಳೆದುಕೊಂಡಿದ್ದಾರೆ ಎಂದು ನೋಟಿಸ್ ನೀಡಲಾಯಿತು. ಗಾಂಧಿಯವರು ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದಾಗ ಅವರು 19 ವರ್ಷಗಳಿಂದ ವಾಸಿಸುತ್ತಿದ್ದ ಅವರ 12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸರ್ಕಾರ 'ಕ್ಷುಲ್ಲಕ ರಾಜಕೀಯ' ಮಾಡುತ್ತಿದೆ. ಈ ಮೂಲಕ ಬಿಜೆಪಿ ಸರ್ಕಾರವು 'ಪ್ರಜಾಪ್ರಭುತ್ವವನ್ನು ತುಳಿಯುತ್ತಿದೆ' ಎಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಇತರ ವಿರೋಧ ಪಕ್ಷಗಳು ಟೀಕಿಸಿವೆ.

ರಾಹುಲ್ ಗಾಂಧಿಯವರ ಮೇಲಿನ ಕ್ರಮ ವಿರೋಧಿಸಿ ಮಂಗಳವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+