ಸರ್ವರಿಗೂ ಆರೋಗ್ಯ ಸುರಕ್ಷೆ ನೀಡುವ ಕಾಯ್ದೆಯ ಭರವಸೆ ನೀಡಿದ ರಾಹುಲ್
ರಾಯಪುರ(ಚತ್ತೀಸ್‌ಘಡ), ಮಾರ್ಚ್ 15: ಆಯುಷ್ಮಾನ್ ಭಾರತ್ ಯೋಜನೆಯನ್ನು ಟೀಕಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಅದು ಸೀಮಿತ ಆರೋಗ್ಯ ಸಮಸ್ಯೆಗಳಿಗೆ ಮಾತ್ರವೇ ರಕ್ಷಣೆ ಒದಗಿಸುತ್ತದೆ ಎಂದರು.
ಚತ್ತೀಸ್‌ಘಡದ ರಾಯ್‌ಪುರದಲ್ಲಿ ಆರೋಗ್ಯ ಪರಿಣಿತರು, ಆಶಾ ಕಾರ್ಯಕರ್ತೆಯರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಆಯುಷ್ಮಾನ್ ಭಾರತ್ ಅನ್ನು ಶ್ರೀಮಂತರ ಜೇಬು ತುಂಬಿಸಲು ಮಾಡಲಾಗಿದೆ. ಅದರ ಒಪ್ಪಂದ ಶ್ರೀಮಂತರ ಪಾಲಾಗಿದೆ ಎಂದರು.
ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ನಾವು ಆರೋಗ್ಯ ಸುರಕ್ಷಾ ಕಾಯ್ದೆ ತರುವ ಬಗ್ಗೆ ಉಲ್ಲೇಖಿಸುತ್ತಿದ್ದು, ಈ ಕಾಯ್ದೆಯು ದೇಶದ ಎಲ್ಲಾ ನಾಗರೀಕರಿಗೂ ಕನಿಷ್ಟ ಆರೋಗ್ಯ ಭದ್ರತೆಯನ್ನು ಒದಗಿಸುತ್ತದೆ. ಅಲ್ಲದೆ ಈ ಆರೋಗ್ಯ ಕಾಯ್ದೆಯಿಂದಾಗಿ ಜಿಡಿಪಿಯಲ್ಲಿ 3% ಏರಿಕೆಯೂ ಆಗುತ್ತದೆ ಎಂದು ರಾಹುಲ್ ಭರವಸೆ ನೀಡಿದರು.

ಆಸ್ಪತ್ರೆಗಳು ಅಥವಾ ಆರೋಗ್ಯ ತಜ್ಞರ ಸರಿಯಾದ ಒಳಗೊಳ್ಳುವಿಕೆ ಇಲ್ಲದೆ ಆಯುಷ್ಮಾನ್ ಭಾರತ ಯೋಜನೆಯು ಆರೋಗ್ಯ ರಕ್ಷಣೆಯನ್ನು ನೀಡುತ್ತದೆ, ಇದು ಉತ್ತಮ ಯೋಜನೆಯೊಂದರ ಲಕ್ಷಣವಲ್ಲ ಎಂದು ರಾಹುಲ್ ಹೇಳಿದರು.
ಆಶಾ ಕಾರ್ಯಕರ್ತೆಯು, ವೈದ್ಯರು, ಇತರ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಉದ್ಯಮ ಇವೆಲ್ಲವನ್ನೂ ಒಳಗೊಂಡ ಆರೋಗ್ಯ ಯೋಜನೆ ಒಂದು ಪರಿಚಯಿಸುವ ಅಗತ್ಯ ಇದೆ. ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲರ ಏಳಿಗೆಯನ್ನೂ ಒಳಗೊಂಡ ಯೋಜನೆ ಅದಾಗಿರಬೇಕಾಗುತ್ತದೆ ಎಂದು ರಾಹುಲ್ ಹೇಳಿದರು.












Click it and Unblock the Notifications