Ambedkar Row: ವಿವಾದ ಬೇರೆಡೆ ಸೆಳೆಯಲು ಸಂಸತ್‌ನಲ್ಲಿ ಗೊಂದಲ ಸೃಷ್ಟಿ: ರಾಗಾ

ಬೆಂಗಳೂರು, ಡಿಸೆಂಬರ್ 19: ಕೇಂದ್ರ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದ ವಿಚಾರ, ಸಂಸತ್‌ನಲ್ಲಿ ಭಾರೀ ಗದ್ದಲ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯವರು ಗುರುವಾರ ಸಂಸತ್ತಿನ ಜಗಳ ಕುರಿತು ಬಿಜೆಪಿಯ ಧೋರಣೆ ಬಗ್ಗೆ ಅವರು ಮಾತನಾಡಿದ್ದಾರೆ. ಅಮಿತ್ ಶಾ ಅವರ 'ಅಂಬೆಡ್ಕರ್ ಫ್ಯಾಷನ್' ಹೇಳಿಕೆ ವಿಚಾರ ಬೇರೆಡೆ ತಿರುಗಿಸಲು ಸದನದಲ್ಲಿ ಭಾರೀ ಗದ್ದಲ ಉಂಟು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗುರುವಾರ ಸಂಸತ್‌ನಲ್ಲಿ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮಧ್ಯ ಭಾರೀ ವಾಕ್ಸ್‌ಮರ ನಡೆಯಿತು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರು ಮಾತನಾಡಿದರು. ಸಂವಿಧಾನದ ಪ್ರತಿ ಹಿಡಿದು ಮಾತನಾಡಿದ ಅವರು, ಅಧಿವೇಶನ ಆರಂಭವಾದಾಗಿನಿಂದ ಬಿಜೆಪಿ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿಲ್ಲ. ವಿಚಲಿತವಾದಂತೆ ಕಾಣುತ್ತಿದೆ.

Rahul Gandhi Criticises BJP s Distraction from Ambedkar Controversy in Parliament

ಆಡಳಿತ ಪಕ್ಷದ ಚಿಂತನೆ, ಅದರ ಪ್ರಕ್ರಿಯೆಯು ಸಂವಿಧಾನ ವಿರೋಧಿಯಾಗಿದೆ. ಬಿಜೆಪಿಯು ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ವಿರೋಧಿಯಾಗಿದ್ದಲ್ಲದೇ, ಅವರ ಕೊಡುಗೆಗಳನ್ನು ಆಶಯಗಳನ್ನು ಅಳಿಸಲು ಪ್ರಯತ್ನಿಸುತ್ತಿದೆ.

ಅಮಿತ್ ಶಾ ರಾಜೀನಾಮೆಗೆ ಆಗ್ರಹ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಡಿರುವ ಟೀಕೆಯು ಅದು ಅವರ ಮನಸ್ಥಿತಯನ್ನು ಬಹಿರಂಗಪಡಿಸುತ್ತಿದೆ. ಅವರ ಹೇಳಿಕೆ ಸಂಬಂಧಿಸಿದಂತೆ ಕ್ಷಮೆಗೆ ಆಗ್ರಹಿಸಿದ್ದೇವೆ. ರಾಜೀನಾಮೆ ಸಹ ಕೋರಿದ್ದೇವೆ. ಆದರೆ ಅವರು ಗುರುವಾರ ಸಂಸತ್‌ನಲ್ಲಿ ಹೊಸ ಗೊಂದಲ ಸೃಷ್ಟಿಸಿದ್ದಾರೆ. ಸಂಸತ್ ಮೆಟ್ಟಿಲುಗಳ ಬಳಿ ನಿಂತರ ವಿಪಕ್ಷ ನಾಯಕರು, ಸಂಸದರು ಸಂಸತ್ ಪ್ರವೇಶಿಸುವಾಗ ಅಡ್ಡಿ ಉಂಟು ಮಾಡಿದ್ದಾರೆ. ನಮ್ಮನ್ನು ಒಳಬಿಡಲು ನಿರಾಕರಿಸಿದ್ದಾರೆ ಎಂದು ದೂರಿದರು.

ಅಮಿತ್ ಶಾ ಅವರು ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಗೃಹ ಸಚಿವರು ಕೂಡಲೇ ಕ್ಷಮೆಯಾಚಿಸಿ ರಾಜೀನಾಮೆ ಕೊಡುವಂತೆ ಆಗ್ರಹಿಸಿದರು.

ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದೇನು?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರತಿಕ್ರಿಯಿಸಿ, ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ಹೇಳಿಕೆ ಖಂಡಿಸಿದರು. ಟೀಕೆ ಮಾಡಿದವರು ತಮ್ಮ ತಪ್ಪು ಒಪ್ಪಿಕೊಳ್ಳಲು ನಿರಾಕರಿಸಿದರು. ಕಾಂಗ್ರೆಸ್‌ಗೆ ರಾಜೀನಾಮೆಗೂ ಒತ್ತಾಯಿಸಿದೆ. ಇದಕ್ಕೆ ವಿಫಲವಾದರೆ ಪ್ರಧಾನಿ ನರೇಂದ್ರ ಮೋದಿಯವರು ಅಮಿತ್ ಶಾ ಅವರನ್ನು ವಜಾಗೊಳಿಸಬೇಕು ಎಂದ ಅವರು, ಬಿಜೆಪಿ ಈ ವಿಚಾರ ಬೇರೆಡೆ ತಿರುಗಿಸಲು ಪ್ರಯತ್ನಿಸುತ್ತಿದೆ ಎಂದು ಜರಿದರು.

ಬಿಜೆಪಿ ನಾಯಕರು ಸಂಸತ್ ಅಧಿವೇಶನ ವೇಳೆ ಬಾಗಿಲು ಬಳಿ ನಿಂತು ವಿಪಕ್ಷಗಳನ್ನು ತಡೆಯಲು ಪ್ರಯತ್ನಿಸಿದರು. ನಮ್ಮ ಮೇಲೆ ದಾಳಿ ನಡೆಸಿದರು ಎಂದು ಅವರು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+