ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಕ್ಕೆ ರಾಹುಲ್ ಗೈರು, ನಾಯಕತ್ವ, ದೇಶದ ಬಗೆಗಿನ ಬದ್ಧತೆ ಕುರಿತು ಪ್ರಶ್ನೆ
ಭಾರತ ಕೆಲವು ದಿನಗಳ ಹಿಂದೆ 76ನೇ ಗಣರಾಜ್ಯೋತ್ಸವ ಆಚರಣೆ ಮಾಡಿತು, ಇದರ ಜೊತೆಗೆ ಇನ್ನೂ ಎರಡು ಪ್ರಮುಖ ಕಾರ್ಯಕ್ರಗಳು ದೇಶದಲ್ಲಿ ನಡೆಯುತ್ತಿವೆ. ಪ್ರಯಾಗ್ ರಾಜ್‌ನಲ್ಲಿ 144 ವರ್ಷಗಳ ಬಳಿಕ ಮಹಾಕುಂಭ ಮೇಳ ನಡೆಯುತ್ತಿದೆ. ದೆಹಲಿ ವಿಧಾನಸಭೆ ಚುನಾವಣೆ 2025ರ ಪ್ರಚಾರವೂ ನಡೆಯುತ್ತಿದೆ. ದೇಶದ ರಾಜಕೀಯ ನಾಯಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಎಲ್ಲಾ ಪ್ರಮುಖ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ, ಇದು ಅವರ ನಾಯಕತ್ವ ಮತ್ತು ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಅವರ ಬದ್ಧತೆಯ ಕುರಿತು ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದೆ.
ಮಹಾಕುಂಭ ಮೇಳದಿಂದ ಅಂತರ ಕಾಪಾಡುವ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆ ನಿರ್ಲಕ್ಷ್ಯ
ಮಹಾಕುಂಭ ಮೇಳ ವಿಶ್ವದ ಅತಿ ದೊಡ್ಡ ಸಾಂಸ್ಕೃತಿಕ ಉತ್ಸವವಾಗಿದೆ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಬಿಜೆಪಿಯ ಹಲವಾರು ನಾಯಕರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಅವರ ಕೇವಲ ಕಾರ್ಯಕ್ರಮವನ್ನು ಗೌರವಿಸುತ್ತಿಲ್ಲ, ವಿಶ್ವದ ವೇದಿಕೆಯಲ್ಲಿ ಭಾರತದ ಸಂಸ್ಕೃತಿಯ ಸಾರವನ್ನು ಎತ್ತಿ ಹಿಡಿಯುತ್ತಿದ್ದಾರೆ. ಪ್ರಯಾಗ್ ರಾಜ್ ಸಂಗಮದಲ್ಲಿ ಯೋಗಿ ಸಂಪುಟದ ಎಲ್ಲಾ ಸಚಿವರು ಪುಣ್ಯ ಸ್ನಾನ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಪ್ರಮುಖ ನಾಯಕರು ಸಹ ಪುಣ್ಯ ಸ್ನಾನ ಕೈಗೊಂಡರು. ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಸಹ ಆಗಮಿಸುತ್ತಿದ್ದಾರೆ. ಅಚ್ಚರಿ ಎಂಬಂತೆ ರಾಹುಲ್ ಗಾಂಧಿ ಇಡೀ ಕಾರ್ಯಕ್ರಮವನ್ನು ನಿರ್ಲಕ್ಷ್ಯ ಮಾಡಿದ್ದಾರೆ, ಇದು ಭಾರತದ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಕುರಿತು ಅವರಿಗೆ ಇರುವ ನಿಲುವುಗಳನ್ನು ಪ್ರತಿಬಿಂಬಿಸುತ್ತದೆ. 'ಜನಿವಾರಧಾರಿ ಬ್ರಾಹ್ಮಣ' ಎಂಬ ಅವರ ಘೋಷಣೆಯ ಹೊರತಾಗಿಯೂ ಅವರು ಗಣೇಶ ಚತುರ್ಥಿ, ನವರಾತ್ರಿಯಂತಹ ಪ್ರಮುಖ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಇದು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯದೊಂದಿಗೆ ಅವರ ಸಂಪರ್ಕದ ಕೊರತೆ ಬಹಿರಂಗಗೊಳಿಸುತ್ತಿದೆ.

ರಾಮ ಮಂದಿರ ಭೂಮಿ ಪೂಜೆ ಮತ್ತು ಅಯೋಧ್ಯೆಯ ಪವಿತ್ರೀಕರಣ ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಐತಿಹಾಸಿಕ ಕ್ಷಣಗಳಾಗಿದ ದಾಖಲಾಗಿವೆ. ಆದರೆ ಈ ಪ್ರಮುಖ ಕಾರ್ಯಕ್ರಮಗಳಿಗೆ ರಾಹುಲ್ ಗಾಂಧಿ ಗೈರಾಗಿದ್ದರು. ಅಲ್ಲದೇ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ಕಾಂಗ್ರೆಸ್ ನಾಯಕರು ದೂರ ಉಳಿದಿದ್ದು, ದೇಶದ ಜನರ ಹುಬ್ಬೇರಿಸುವಂತೆ ಮಾಡಿತ್ತು. ಪ್ರಮುಖ ಕಾರ್ಯಕ್ರಮಗಳಿಂದ ಸದಾ ದೂರು ಇರುವ ರಾಜಕೀಯ ಸಿದ್ದಾಂತ ಮತ್ತು ದೇಶದ ಸಾಂಸ್ಕೃತಿಕ ನಾಡಿಮಿಡಿತದ ಕುರಿತು ಅಂತರವನ್ನು ತೋರಿಸುತ್ತದೆ.
ಗಣರಾಜ್ಯೋತ್ಸವ ಪರೇಡ್ 2025: ರಾಷ್ಟ್ರೀಯ ಹೆಮ್ಮೆಯನ್ನಯ ಅಗೌವಿಸುವುದು
ಗಣರಾಜ್ಯೋತ್ಸವ ಭಾರತದ ಪ್ರಜಾಪ್ರಭುತ್ವದ ಹಬ್ಬವಾಗಿದೆ, ಸೇನಾ ಶಕ್ತಿ ಮತ್ತು ಸೈನಿಕರ ಬಲಿದಾನಗಳನ್ನು ಇದು ಹೇಳುತ್ತದೆ. ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ದೂರ ಉಳಿದರು. ಈ ಗೈರು ಹಾಜರಿಯನ್ನು ದೇಶದ ಜನತಾಂತ್ರಿಕ ಮೌಲ್ಯ ಮತ್ತು ಸಶಸ್ತ್ರ ಪಡೆಗಳ ಗೌರವವನ್ನು ನಿರ್ಲಕ್ಷಿಸಿರುವಂತೆ ಅರ್ಥೈಸಲಾಗುತ್ತಿದೆ. ಇದರಿಂದಾಗಿ ಅವರ ರಾಷ್ಟ್ರಾಭಿಮಾನ ಮತ್ತು ಮೌಲ್ಯಗಳ ನಿಷ್ಠೆಯನ್ನು ಪ್ರಶ್ನಿಸುವಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು, ಸಂತ್ರಸ್ತರು, ಸೈನಿಕರೊಂದಿಗೆ ಮಾತುಕತೆ ನಡೆಸುತ್ತಿದ್ದಾಗ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದರು. ಗಂಭೀರ ರಾಷ್ಟ್ರೀಯ ಸಂಕಟದ ಸಂದರ್ಭದಲ್ಲಿ ಅವರ ಗೈರು ನಾಯಕತ್ವ ಗುಣಗಳು ಮತ್ತು ರಾಷ್ಟ್ರೀಯ ಹೊಣೆಗಾರಿಕೆಯಲ್ಲಿ ಅವರ ನಿಲುವು ಕುರಿತು ತೀವ್ರ ಅನುಮಾನ ಹುಟ್ಟಿಸಿದೆ.
ಸಂವಿಧಾನ ದಿನಕ್ಕೆ ಗೈರು: ಸಂವಿಧಾನಿಕ ಮೌಲ್ಯಗಳಿಗೆ ಹೊಡೆತ
2022ರ ಸಂವಿಧಾನ ದಿನದಂದು ರಾಹುಲ್ ಗಾಂಧಿ ತಮ್ಮನ್ನು ತಾವು "ಸಂವಿಧಾನದ ರಕ್ಷಕರು" ಎಂದು ಬಿಂಬಿಸಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು, ಅವರು ನಿಗದಿತ ಕಾರ್ಯಕ್ರಮಗಳಿಗೆ ಗೈರಾದರು. ಅವರ ಗೈರು ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸದಿರುವುದು ಭಾರತದ ಪ್ರಜಾಪ್ರಭುತ್ವದ ಬೆಂಬಲವಾದ ಸಂವಿಧಾನ ಮತ್ತು ಸಂವಿಧಾನಿಕ ಮೌಲ್ಯಗಳ ಕುರಿತು ಅವರಿಗೆ ಇರುವ ಉದಾಸೀನತೆಯನ್ನು ಎತ್ತಿ ತೋರಿಸಿತು.
ಕಾಂಗ್ರೆಸ್‌ನ ಆಚರಣೆಗಳ ಕುರಿತು ನಿರ್ಲಕ್ಷ್ಯ
ರಾಹುಲ್ ಗಾಂಧಿ ಕೇವಲ ರಾಷ್ಟ್ರೀ ಕಾರ್ಯಕ್ರಮಗಳನ್ನು ಮಾತ್ರ ನಿರ್ಲಕ್ಷ್ಯ ಮಾಡಿಲ್ಲ ಕಾಂಗ್ರೆಸ್ ಪಕ್ಷದ ಆಂತರಿಕ ಆಚರಣೆಗಳಿಂದಲೂ ದೂರವಾಗಿದ್ದಾರೆ. ಪಕ್ಷ ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಗೆದ್ದ ಬಳಿಕ ಪಕ್ಷದ ಕಾರ್ಯಕರ್ತರು, ನಾಯಕರು ನಡೆಸಿದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರು ನಿರಾಕರಿಸಿದರು. ಇಂತಹ ಗೈರು ನಾಯಕತ್ವ ಗುಣ, ಪಕ್ಷದ ತಳಮಟ್ಟದ ಕಾರ್ಯಕರ್ತರ ಜೊತೆ ಬೆರೆಯಲು ವಿಫಲರಾಗುವ ಅವರ ನಿಲುವು ತಿಳಿಸುತ್ತದೆ.
ರಾಹುಲ್ ಗಾಂಧಿ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಗೈರು ಹಾಜರಾಗುವುದು ಸಾಮಾನ್ಯವಾದ ವಿಷಯವಲ್ಲ, ಅವು ದೇಶ, ಅದರ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅವರ ಬದ್ಧತೆಯನ್ನು ನಿರಂತರವಾಗಿ ಪ್ರಶ್ನಿಸುವಂತೆ ಮಾಡುತ್ತದೆ. ದೆಹಲಿ ಚುನಾವಣೆ ನಡೆಯುತ್ತಿದೆ, ಚುನಾವಣಾ ಆಖಾಡದಲ್ಲಿ ಮೊದಲು ಕಾಂಗ್ರೆಸ್ ಬಲವಾದ ಸ್ಪರ್ಧೆಗೆ ಸಿದ್ಧವಾಗಿದ್ದಂತೆ ಕಾಣಿಸುತ್ತಿತ್ತು, ಆದರೆ ಪ್ರಚಾರ ಕಣದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇತರ ಪ್ರಮುಖ ನಾಯಕರ ಗೈರು ಹಾಜರಾತಿ ಪಕ್ಷದ ಕಾರ್ಯಕರ್ತರ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿವೆ. ಈಗ ಕೇಳುತ್ತಿರುವ ಪ್ರಶ್ನೆ ರಾಹುಲ್ ಗಾಂಧಿ ಎಲ್ಲಿದ್ದಾರೆ? ಅವರು ಏಕೆ ಮಹಾಕುಂಭ ಮೇಳ, ಗಣರಾಜ್ಯೋತ್ಸವ ಮತ್ತು ದೆಹಲಿಯ ಚುನಾವಣಾ ಸಮರದಲ್ಲಿ ಕಾಣಿಸುತ್ತಿಲ್ಲ?.
ನಾಯಕತ್ವ ಕುಸಿಯುತ್ತಿರುವಾಗ ಕಾಂಗ್ರೆಸ್‌ನ ಪ್ರಚಾರ ಶಕ್ತಿ ಮತ್ತು ಭರವಸೆ ಸೊರಗುತ್ತಿದೆ, ಒಂದು ಪ್ರಮುಖ ಪ್ರಶ್ನೆ ದೊಡ್ಡದಾಗಿ ಎದ್ದಿದೆ, ಭಾರತದ ಆತ್ಮ, ಅದರ ಮೌಲ್ಯ ಮತ್ತು ಅತ್ಯಂತ ಪವಿತ್ರ ಪರಂಪರೆಗಳನ್ನು ಸದಾ ದೂರವಿಡುವ ನಾಯಕನು ಈ ದೇಶವನ್ನು ನಿಜವಾಗಿಯೂ ಮುನ್ನಡೆಸಲು ಸಾಧ್ಯವೇ?.












Click it and Unblock the Notifications