2019 ರಲ್ಲೂ ನಮ್ಮ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ: ಜಿತಿನ್ ಪ್ರಸಾದ್
ಲಕ್ನೋ, ನವೆಂಬರ್ 24: 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ್ ಹೇಳಿದರು.
ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, 'ಈ ದೇಶದಲ್ಲಿ ಮೋದಿಯವರನ್ನು ಎದುರಿಸಬಲ್ಲ ಏಕೈಕ ವ್ಯಕ್ತಿ ಎಂದರೆ ರಾಹುಲ್ ಗಾಂಧಿ ಒಬ್ಬರೇ. ಅವರು ಯಶಸ್ವಿಯಾಗಿ ಕಾಂಗ್ರೆಸ್ ಅನ್ನು ಮುನ್ನಡೆಸುತ್ತಿದ್ದಾರೆ, ಮಾತ್ರವಲ್ಲ ಈ ದೇಶದ ಬಡವರ ಕುರಿತು ಸಾಕಷ್ಟು ಕಾಳಜಿ ಹೊಂದಿದ್ದಾರೆ' ಎಂದರು.

'ರಾಹುಲ್ ಗಾಂಧಿಯವರು ಬಹಳ ವಿಧೇಯ ವ್ಯಕ್ತಿ. ತಮಗಿಂತ ಹಿರಿಯರಿಂದ ಸಲಹೆಗಳನ್ನು ತೆಗೆದುಕೊಂಡು, ಯುವ ನಾಯಕರ ಶಕ್ತಿಯನ್ನೂ ಬಳಸಿಕೊಂಡು ಮುನ್ನಡೆಯುತ್ತಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗುವ ಅವರೇ 2019 ರ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ' ಎಂದಿದ್ದಾರೆ.












Click it and Unblock the Notifications