ಅಂತರರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ QR ಕೋಡ್ ಸಹಿತ RTPCR ವರದಿ ಕಡ್ಡಾಯ

ನವದೆಹಲಿ, ಮೇ 22: ಭಾರತದಿಂದ ಬೇರೆ ದೇಶಗಳಿಗೆ ವಿಮಾನ ಪ್ರಯಾಣ ಮಾಡುವವರು ಇಂದಿನಿಂದ ತಮ್ಮೊಂದಿಗೆ ಕ್ಯೂ ಆರ್‌ ಕೋಡ್ ಹೊಂದಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ.

ಕ್ಯೂ ಆರ್ ಕೋಡ್ ಹೊಂದಿರುವ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡಲು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಮೇ 22ರಿಂದ ಭಾರತದಿಂದ ಹೊರಡುವ ಎಲ್ಲಾ ವಿಮಾನಗಳಿಗೆ ಇದು ಅನ್ವಯವಾಗಲಿದೆ ಎಂದು ನಾಗರೀಕ ವಿಮಾನಯಾನ ಸಚಿವಾಲಯ ಕಳೆದ ವಾರವೇ ತಿಳಿಸಿತ್ತು. ಹೀಗಾಗಿ ಇಂದಿನಿಂದ ಪ್ರಯಾಣಿಕರು ಕ್ಯೂ ಆರ್‌ ಕೋಡ್ ಹೊಂದಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕಾಗಿದೆ.

QR Code On RTPCR Report Must To Fly Out Of India

ಹಲವು ಮಂದಿ ನಕಲಿ ಕೊರೊನಾ ಪರೀಕ್ಷಾ ವರದಿ ನೀಡುತ್ತಿದ್ದುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರ ಮೂಲ ವರದಿಗೆ ಕ್ಯೂ ಆರ್ ಕೋಡ್ ಲಿಂಕ್ ಆಗಿರುತ್ತದೆ. ಇದು ನಿಖರತೆ ನೀಡುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಕೊರೊನಾ ಸೋಂಕಿನ ಕಾರಣವಾಗಿ ಕಳೆದ ವರ್ಷ ಮಾರ್ಚ್ 23ರಿಂದ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನ ಸೇವೆ ಸ್ಥಗಿತಗೊಳಿಸಲಾಗಿತ್ತು. ಆದರೆ ಕೆಲವು ಆಯ್ದ ದೇಶಗಳಿಗೆ ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ವಿಶೇಷ ಅಂತರರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದವು. ಏರ್ ಬಬಲ್ ಒಪ್ಪಂದದೊಂದಿಗೆ ಜುಲೈನಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಅಮೆರಿಕ, ಬ್ರಿಟನ್, ಕೆನ್ಯಾ, ಭೂತಾನ್ ಹಾಗೂ ಫ್ರಾನ್ಸ್ ಒಳಗೊಂಡಂತೆ ಸುಮಾರು 24 ದೇಶಗಳೊಂದಿಗೆ ಭಾರತ ಏರ್ ಬಬಲ್ ಒಪ್ಪಂದ ಮಾಡಿಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+