Vladimir Putin: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿ, ಪ್ರಮುಖ ಸೇನಾ ಒಪ್ಪಂದಗಳ ಮಾಹಿತಿ ಇಲ್ಲಿದೆ!
ರಷ್ಯಾ ಮತ್ತು ಭಾರತದ ನಡುವೆ ರಕ್ಷಣಾ ಒಪ್ಪಂದಗಳಿಗೆ ಸಹಿ ಬೀಳಲು ಕ್ಷಣಗಣನೆ ಆರಂಭವಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2 ದಿನಗಳ ಭಾರತ ಭೇಟಿ ಆರಂಭಿಸಿದ್ದು ಭಾರತದ ಜೊತೆಯಲ್ಲಿ ಪ್ರಮುಖ ಮಿಲಿಟರಿ ಒಪ್ಪಂದಕ್ಕೆ ಅನುಮೋದನೆ ಸಿಗುತ್ತಿದ್ದಂತೆ ಹೊಸ ಸಂಚಲನ ಸೃಷ್ಟಿಯಾಗಿದೆ. ಈ ಮೂಲಕ ಭಾರತದ ಜೊತೆಗೆ ರಷ್ಯಾ ನೂತನ ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಳ್ಳಲು & ಅದನ್ನು ಜಾರಿಗೆ ತರಲು ರಷ್ಯಾ ಸಂಸತ್ತು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಪಾಶ್ಚಿಮಾತ್ಯ ದೇಶಗಳಿಗೆ ಹೊಟ್ಟೆ ಉರಿಯುವಂತೆ ಮಾಡಿದೆ. ಡಿಸೆಂಬರ್ 4 ಗುರುವಾರ & ಡಿಸೆಂಬರ್ 5 ಶುಕ್ರವಾರ ಪುಟಿನ್ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ.
ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾಗೆ ಭಾರತ ಬೆಂಬಲ ನೀಡುತ್ತಾ ಬಂದಿದ್ದು, ಈಗಾಗಲೇ ಹಲವು ರೀತಿಯಲ್ಲಿ ದೊಡ್ಡ ಮಟ್ಟದ ಸಹಾಯ ಮಾಡಿದೆ. ಇಂತಹ ಸಮಯದಲ್ಲಿ ರಷ್ಯಾ ಮತ್ತು ಭಾರತದ ಸ್ನೇಹ ಕಂಡು ಹಲವು ದೇಶಗಳಿಗೆ ಹೊಟ್ಟೆ ಕಿಚ್ಚು ಶುರುವಾಗಿತ್ತು. ಈ ನಡುವೆ ರಷ್ಯಾ ಮತ್ತು ಭಾರತದ ಸಂಬಂಧ ಹಾಳು ಮಾಡಲು ಪಾಶ್ಚಿಮಾತ್ಯ ದೇಶಗಳು ಕೂಡ ಪ್ರಯತ್ನ ಮಾಡಿ ವಿಫಲವಾಗಿವೆ. ಇಂತಹ ಸಮಯದಲ್ಲೇ ನೇರವಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಪ್ರವಾಸ ಕೈಗೊಂಡಿದ್ದಾರೆ. ಅಲ್ಲದೆ ಪ್ರಮುಖ ಸೇನಾ ಒಪ್ಪಂದಗಳಿಗೆ ಕೂಡ ವ್ಲಾದಿಮಿರ್ ಪುಟಿನ್ ಇದೀಗ ಸಹಿ ಹಾಕಲಿದ್ದಾರೆ.

ರಷ್ಯಾ ಸಂಸತ್‌ನಲ್ಲಿ ಭಾರತದ ಬಗ್ಗೆ ಚರ್ಚೆ
ಭಾರತ ಮತ್ತು ರಷ್ಯಾ ನಡುವೆ ಶತಮಾನಗಳ ಸ್ನೇಹ ಇದ್ದು, ಎರಡೂ ದೇಶಗಳು ತಮ್ಮ ಸಂಬಂಧ ಇದೇ ರೀತಿಯಾಗಿ ಮುಂದುವರಿಯಲಿ ಎಂಬುದು ನಾಯಕರ ಆಸೆ. ಆದರೆ ಬದಲಾದ ಜಾಗತಿಕ, ಆರ್ಥಿಕ ರಾಜಕೀಯ ವಿದ್ಯಮಾನಗಳು ಇದೀಗ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಕ್ಕೆ ಅಡ್ಡಿ & ಆತಂಕ ಮೂಡುವಂತೆ ಮಾಡಿವೆ. ಇಷ್ಟೆಲ್ಲದರ ನಡುವೆ ರಷ್ಯಾ ಮಾತ್ರ ಭಾರತದ ಪರವಾಗಿಯೇ ಇದ್ದು, ರಷ್ಯಾ ಸಂಸತ್ ಕೂಡ ಭಾರತವನ್ನು ಹಾಡಿ ಹೊಗಳಿದೆ. ರಷ್ಯಾದ ಸ್ಪೀಕರ್ ಭಾರತವನ್ನು ಕುರಿತು ಮಾತನಾಡುತ್ತಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಎಸ್-500 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಒಪ್ಪಂದ?
ಒಟ್ನಲ್ಲಿ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದ್ದು, ಹೀಗೆ ಎರಡೂ ದೇಶಗಳು ಮತ್ತಷ್ಟು ಹತ್ತಿರವಾಗುತ್ತಿವೆ. ಪ್ರಮುಖವಾಗಿ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ಎಸ್-500 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಖರೀದಿ ಮಾಡುವ ಒಪ್ಪಂದಕ್ಕೆ ಅಂತಿಮ ಒಪ್ಪಂದವು ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ರಷ್ಯಾ ನಿರ್ಮಿತ ಕ್ಷಿಪಣಿಗಳ ಖರೀದಿಗೆ ಕೂಡ ಭಾರತ ಈಗ ಒಲವು ತೋರಿದ್ದು, ಭವಿಷ್ಯದಲ್ಲಿ ಇದು ಭಾರತಕ್ಕೆ ಸಾಕಷ್ಟು ಲಾಭದಾಯಕ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷರ ಭಾರತ ಭೇಟಿ ಇಡೀ ಪ್ರಪಂಚದ ಗಮನ ಸೆಳೆಯುತ್ತಿದೆ.












Click it and Unblock the Notifications