ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್: ತರ್ನ್ ತರಣ್ ಪೊಲೀಸ್ ಠಾಣೆಗೆ ರಾಕೆಟ್ ಲಾಂಚರ್‌ನಿಂದ ದಾಳಿ- ಐಎಸ್‌ಐ ಮೇಲೆ ಶಂಕೆ

|
Google Oneindia Kannada News

ಚಂಡಿಗಢ ಡಿಸೆಂಬರ್ 10: ಪಂಜಾಬ್‌ನ ಗಡಿ ಭಾಗದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಪಂಜಾಬ್‌ನ ಗಡಿ ಭಾಗದಲ್ಲಿರುವ ತರ್ನ್ ತರನ್ ಪೊಲೀಸ್ ಠಾಣೆ ಮೇಲೆ ರಾಕೆಟ್ ಲಾಂಚರ್‌ನಿಂದ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ. ಖಲಿಸ್ತಾನ್ ಪರ ಭಯೋತ್ಪಾದಕರು ಮತ್ತು ಐಎಸ್‌ಐ ಮೇಲೆ ಈ ದಾಳಿ ನಡೆಸಿರುವ ಶಂಕೆ ಇದೆ.

ಶನಿವಾರ ಬೆಳಿಗ್ಗೆ ಮಾಧ್ಯಮ ವರದಿಯಲ್ಲಿ ಈ ಆರೋಪ ಮಾಡಲಾಗಿದೆ. ಪಿಟಿಐ ಪ್ರಕಾರ, ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ರಾಕೆಟ್ ಲಾಂಚರ್ ತರಹದ ಆಯುಧದಿಂದ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದಾಳಿಯಲ್ಲಿ ಯಾವುದೇ ಗಾಯಗಳು ಅಥವಾ ರಚನೆಗೆ ಹಾನಿಯಾಗಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ರಾಕೆಟ್ ಲಾಂಚರ್ ದಾಳಿಯ ಬಗ್ಗೆ ಪೊಲೀಸ್ ಅಧಿಕಾರಿಗಳು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

Punjab: Tarn Taran police station attacked with rocket launcher - ISI suspected

ಈ ಘಟನೆಯ ಬಗ್ಗೆ ಭಾರತೀಯ ಜನತಾ ಪಕ್ಷದ ಸದಸ್ಯ ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿದ್ದಾರೆ. 'ಅಮೃತಸರ-ಭಟಿಂಡಾ ಹೆದ್ದಾರಿಯಲ್ಲಿನ ಸೂಕ್ಷ್ಮ ಸ್ಥಳವಾದ ತರ್ನ್ ತರನ್‌ನ ಸರ್ಹಾಲಿಯಲ್ಲಿನ ಪೊಲೀಸ್ ಠಾಣೆಯ ಮೇಲೆ ರಾಕೆಟ್-ಲಾಂಚರ್ ಮಾದರಿಯ ಆಯುಧವನ್ನು ಹಾರಿಸಲಾಗಿದೆ. ಪಂಜಾಬ್‌ನಲ್ಲಿ ಕೇಜ್ರಿವಾಲ್ ಅವರ ಆದೇಶದಂತೆ ಸರ್ಕಾರ ನಡೆಯುತ್ತಿದೆ. ಅವರು ಗಡಿ ರಾಜ್ಯದ ಶಾಂತಿ ಮತ್ತು ಭದ್ರತೆಯನ್ನು ನಿರ್ಲಕ್ಷಿಸಿದ್ದಾರೆ' ಎಂದು ದೂರಿದ್ದಾರೆ.

ಫೋರೆನ್ಸಿಕ್ ತಂಡವು ಪುರಾವೆಗಳನ್ನು ಸಂಗ್ರಹಿಸಲು ಮತ್ತು ದಾಳಿಯ ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಠಾಣೆಗೆ ತಲುಪಿದೆ. ಪಂಜಾಬ್‌ನ ತರ್ನ್ ತರನ್ ಪೊಲೀಸ್ ಠಾಣೆಯು ಪಾಕಿಸ್ತಾನದ ಅಂತರಾಷ್ಟ್ರೀಯ ಗಡಿಗೆ ಸಮೀಪದಲ್ಲಿದೆ. ಇದರ ಬೆನ್ನಲ್ಲೆ ಅಧಿಕಾರಿಗಳು ಪಂಜಾಬ್‌ನಾದ್ಯಂತ ಎಚ್ಚರಿಕೆ ನೀಡಿದ್ದಾರೆ.

English summary
It has come to light that the Tarn Taran police station on the border of Punjab was attacked with a rocket launcher. It is suspected that the attack was carried out by pro-Khalistan terrorists and ISI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X