ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಜ್ರದ ವ್ಯಾಪಾರಿ ಮಹುಲ್ ಚೋಕ್ಸಿ ವಿರುದ್ಧ 3 ಎಫ್ಐಆರ್ ದಾಖಲಿಸಿದ ಸಿಬಿಐ

|
Google Oneindia Kannada News

ನವದೆಹಲಿ, ಡಿಸೆಂಬರ್ 16: ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇತರ ಕನ್ಸೋರ್ಟಿಯಂ ಬ್ಯಾಂಕ್‌ಗಳಿಂದ ಹೆಚ್ಚುವರಿ 6,746 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಿಬಿಐ ದೂರಿನ ಮೇರೆಗೆ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಮೂರು ಹೊಸ ಎಫ್‌ಐಆರ್‌ಗಳನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಲ್ಯ, ನೀರವ್ ಮತ್ತು ಚೋಕ್ಸಿಯಿಂದ 18,000 ಕೋಟಿ ರೂ. ವಸೂಲಿ ಮಾಡಿದ ಬ್ಯಾಂಕ್‌ಮಲ್ಯ, ನೀರವ್ ಮತ್ತು ಚೋಕ್ಸಿಯಿಂದ 18,000 ಕೋಟಿ ರೂ. ವಸೂಲಿ ಮಾಡಿದ ಬ್ಯಾಂಕ್‌

ಕಳೆದ 2010 ಮತ್ತು 2018ರ ನಡುವಿನ ಹಗರಣವನ್ನು ಪತ್ತೆಹಚ್ಚಲು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಫಲವಾದ ನಾಲ್ಕು ವರ್ಷಗಳ ನಂತರ, ಮಾರ್ಚ್ 21ರಂದು ಸಿಬಿಐಗೆ ಮೂರು ದೂರುಗಳನ್ನು ಸಲ್ಲಿಸಿತು. ಮೆಹುಲ್ ಚೋಕ್ಸಿ ಮತ್ತು ಅವರ ಸಂಸ್ಥೆ ಗೀತಾಂಜಲಿ ಜೆಮ್ಸ್ ಲಿಮಿಟೆಡ್, ಮತ್ತು ಗಿಲಿ ಇಂಡಿಯಾ ಲಿಮಿಟೆಡ್, ನಕ್ಷತ್ರ ಬ್ರಾಂಡ್ಸ್ ಲಿಮಿಟೆಡ್‌ನಿಂದ ಉಂಟಾದ ಹೆಚ್ಚುವರಿ ನಷ್ಟವನ್ನು ವರದಿ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಒಕ್ಕೂಟದ ಇತರ ಸದಸ್ಯರು ಈ ಕಂಪನಿಗಳಿಗೆ ಸಾಲ ಸೌಲಭ್ಯಗಳನ್ನು ವಿಸ್ತರಿಸಿದ್ದಾರೆ.

''ಒಂದು ಎಫ್‌ಐಆರ್‌ ದಾಖಲಾದಾಗ ಮತ್ತು ಬ್ಯಾಂಕ್‌ಗಳಿಗೆ ಆಗಿರುವ ಒಟ್ಟು ನಷ್ಟಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿರುವಾಗ ಈಗ ಪ್ರತಿ ಸಣ್ಣ ವ್ಯವಹಾರಕ್ಕೂ ಪ್ರತ್ಯೇಕ ಎಫ್‌ಐಆರ್‌ ಆಗುವುದು ಹೇಗೆ?. 'ಆ ತರ್ಕದೊಂದಿಗೆ ಅವರು ಒಟ್ಟು 13,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ. ಅಕ್ರಮವಾಗಿ ಗೋಡೆ ನಿರ್ಮಾಣವಾಗಿದ್ದರೆ, ಪ್ರತಿ ಇಟ್ಟಿಗೆಗೆ ತಲಾ ಒಂದು ಎಫ್‌ಐಆರ್ ದಾಖಲಿಸುತ್ತೀರಾ ಎಂದು ಪ್ರಶ್ನಿಸಿದರು.

2018ರಲ್ಲಿ ಭಾರತದಿಂದ ಪರಾರಿ:

ಕಳೆದ 2018ರ ಜನವರಿ ಮೊದಲ ವಾರದಲ್ಲಿ ಭಾರತದಿಂದ ಪರಾರಿಯಾದ ನಂತರ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿರುವ ಚೋಕ್ಸಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣಗಳನ್ನು ದಾಖಲಿಸಿದೆ. ಬ್ರಿಟನ್ ಜೈಲಿನಲ್ಲಿರುವ ವಜ್ರದ ವ್ಯಾಪಾರಿ ಮೋದಿ ಅವರು ಹಸ್ತಾಂತರದ ವಿರುದ್ಧದ ಕಾನೂನು ಹೋರಾಟದಲ್ಲಿ ಗುರುವಾರ ಹಿನ್ನಡೆ ಅನುಭವಿಸಿದರು. ಏಕೆಂದರೆ ಇಲ್ಲಿನ ಹೈಕೋರ್ಟ್ ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಆರೋಪ:

''ಗೀತಾಂಜಲಿ ಜೆಮ್ಸ್ ಲಿಮಿಟೆಡ್‌ನ ಖಾತೆಯಲ್ಲಿ, ಮೆಹುಲ್ ಚೋಕ್ಸಿ ಅದರ ನಿರ್ದೇಶಕ ಧನೇಶ್ ವ್ರಜ್‌ಲಾಲ್ ಶೇಠ್, ಜಂಟಿ ಅಧ್ಯಕ್ಷ ಹಣಕಾಸು ಕಪಿಲ್ ಮಾಲಿ ರಾಮ್ ಖಂಡೇಲ್ವಾಲ್, ಸಿಎಫ್‌ಒ ಚಂದ್ರಕಾಂತ್ ಕಾನು ಕರ್ಕರೆ ಮತ್ತು ಇತರರು ತಮ್ಮನ್ನು ಅಕ್ರಮವಾಗಿ ಶ್ರೀಮಂತಗೊಳಿಸಲು ಮತ್ತು ಕಾನೂನುಬಾಹಿರವಾಗಿ ಗಳಿಸಲು ವಂಚನೆ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದು ತೋರುತ್ತಿದೆ. ಈ ಅನ್ಯಾಯದ ಲಾಭಗಳು ಮತ್ತು ಆ ಮೂಲಕ ಒಕ್ಕೂಟದ ಸದಸ್ಯ ಬ್ಯಾಂಕ್‌ಗಳಿಗೆ ನಷ್ಟವನ್ನು ಉಂಟು ಮಾಡುತ್ತವೆ. ಇದರಿಂದ ಒಕ್ಕೂಟದ ಸದಸ್ಯ ಬ್ಯಾಂಕ್‌ಗಳಿಗೆ 5564.54 ಕೋಟಿ ರೂಪಾಯಿಗಳಿಗೆ ವಂಚನೆ ಮಾಡಲಾಗಿದೆ,'' ಎಂದು PNB ಆರೋಪಿಸಿದೆ.

Punjab National Bank fraud case: CBI files 3 fresh FIRs against diamantaire Mehul Choksi

ಚೋಕ್ಸಿ ವಿರುದ್ಧ ಒಟ್ಟು ಮೂರು ಎಫ್ಐಆರ್:

ಪಿಎನ್ ಬಿ ಬ್ಯಾಂಕ್ ತನ್ನ ದೂರಿನಲ್ಲಿ, ಮೊದಲ ಎಫ್‌ಐಆರ್‌ನ ಭಾಗವಾಗಿ, ಚೋಕ್ಸಿ ಮತ್ತು ಇತರ ಆರೋಪಿಗಳು ಮಂಜೂರಾದ ಕ್ರೆಡಿಟ್ ಮಿತಿಗಳನ್ನು ನಿಜವಾದ ವ್ಯಾಪಾರ ವಹಿವಾಟುಗಳಿಗೆ ಬಳಸದೆ ಖಾತೆಗಳ ಫಡ್ಜಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ," ಎಂದು ಆರೋಪಿಸಿದೆ.
ಎರಡನೇ ಎಫ್‌ಐಆರ್ ಪಿಎನ್‌ಬಿ ನೇತೃತ್ವದ ಒಂಬತ್ತು ಬ್ಯಾಂಕ್‌ಗಳ ಒಕ್ಕೂಟದಲ್ಲಿ ಚೋಕ್ಸಿ, ಅವರ ಸಂಸ್ಥೆ ಬ್ರಾಂಡ್ಸ್ ಲಿಮಿಟೆಡ್ ಮತ್ತು ಇತರರು 807 ಕೋಟಿ ರೂಪಾಯಿಗಳ ಮೊತ್ತದ ವಂಚನೆಗೆ ಸಂಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರನೇ ಎಫ್‌ಐಆರ್ ಇದೇ ಅವಧಿಯಲ್ಲಿ ಪಿಎನ್‌ಬಿಯಲ್ಲಿ ಚೋಕ್ಸಿ ಮತ್ತು ಗಿಲಿ ಇಂಡಿಯಾ ಲಿಮಿಟೆಡ್‌ನಿಂದ ಮಾಡಿದ 375 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದೆ ಎಂದು ಉಲ್ಲೇಖಿಸಿದ್ದಾರೆ.

ಕಳೆದ 2017ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದ ಚೋಕ್ಸಿ, 2018ರಲ್ಲಿ ಭಾರತದಿಂದ ಪಲಾಯನ ಮಾಡಿದ ನಂತರ ಅಲ್ಲಿಯೇ ನೆಲೆಸಿದ್ದಾರೆ. ಚೋಕ್ಸಿ ಮತ್ತು ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಒಂದು ರೀತಿಯ ಬ್ಯಾಂಕ್ ಗ್ಯಾರಂಟಿ ಪತ್ರಗಳನ್ನು ಬಳಸಿಕೊಂಡು ವಿದೇಶಿ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯುವ ಮೂಲಕ ಆ ಕಾಲದ ಅತಿದೊಡ್ಡ ಬ್ಯಾಂಕಿಂಗ್ ಹಗರಣವನ್ನು ನಡೆಸಿದ್ದರು.
ಈ ಸಾಲಗಳನ್ನು ಮರುಪಾವತಿ ಮಾಡಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 2018ರಲ್ಲಿ ಪಿಎನ್ ಬಿ ಮೇಲೆ 13,000 ಕೋಟಿ ರೂಪಾಯಿಗೂ ಹೆಚ್ಚು ಹೊಣೆಗಾರಿಕೆಯನ್ನು ತಂದಿದೆ. 2018ರಿಂದ ಚೋಕ್ಸಿ ವಿರುದ್ಧ ಸಿಬಿಐ ಅಧಿಕಾರಿಗಳು ಕನಿಷ್ಠ ಏಳು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

English summary
Punjab National Bank fraud case: CBI files 3 fresh FIRs against diamantaire Mehul Choksi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X