Breaking: ಪಂಜಾಬ್ ಸಚಿವ ಫೌಜಾ ಸಿಂಗ್ ಸರಾರಿ ರಾಜೀನಾಮೆ
ಚಂಡೀಗಢ, ಜನವರಿ 7: ಪಂಜಾಬ್ ತೋಟಗಾರಿಕಾ ಸಚಿವ ಫೌಜಾ ಸಿಂಗ್ ಸರಾರಿ ಅವರು ಶನಿವಾರ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಅವರ ಹೆಸರು ಕಾಣಿಸಿಕೊಂಡ ತಿಂಗಳ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಸರಾರಿ ಅವರು ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ ಫೌಜಾ ಸಿಂಗ್ ಅವರ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿತ್ತು. ಅದರಲ್ಲಿ ಅವರು ಹಣವನ್ನು ಪಡೆಯಲು ಮಾಡಲು ಒಪ್ಪಂದವನ್ನು ತಿದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಆಡಿಯೋ ವೈರಲ್ ಆದ ಕೂಡಲೇ ಆಮ್ ಆದ್ಮಿ ಪಕ್ಷವು ಅವರಿಗೆ ಎರಡು ಶೋಕಾಸ್ ನೋಟಿಸ್ ನೀಡಿತ್ತು. ಅವರ ಈ ರಾಜೀನಾಮೆ ನಂತರ ಪಂಜಾಬ್‌ನ ಸಚಿವ ಸಂಪುಟದಲ್ಲಿ ಪ್ರಮುಖ ಪುನಾರಚನೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರ ಸ್ಥಾನಕ್ಕೆ ಪಟಿಯಾಲ (ಗ್ರಾಮೀಣ) ಶಾಸಕ ಡಾ.ಬಲ್ಬೀರ್ ಸಿಂಗ್ ಸರಾರಿ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅವರ ಬದಲಿ ಸ್ಥಾನಕ್ಕೆ ಸರ್ಕಾರ ಈಗಾಗಲೇ ರಾಜಭವನಕ್ಕೆ ಪತ್ರ ಬರೆದಿದ್ದು, ಶನಿವಾರ ಸಂಜೆ 4 ಗಂಟೆಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಂದ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಡೆಸುವಂತೆ ಕೋರಿದೆ. ಸಚಿವ ಸರಾರಿ ಅವರು ಆಹಾರ ಸಂಸ್ಕರಣೆ, ತೋಟಗಾರಿಕೆ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಕ್ಷಣಾ ಸೇವೆಗಳ ಕಲ್ಯಾಣ ಸಚಿವರಾಗಿದ್ದರು.
ಸೆಪ್ಟೆಂಬರ್ 29 ರಂದು, ಮಾನ್ ಅವರು ಸರರಿಗೆ ನೋಟಿಸ್ ನೀಡಿದ್ದರು. ಆದರೆ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳು ತಮ್ಮ ವಿರುದ್ಧ ಅಪಪ್ರಚಾರ ನಡೆಸಿ ವಿಷಯ ಪ್ರಸ್ತಾಪಿಸಿದರೂ ಸಿಎಂ ಮೌನವಹಿಸಿದ್ದರು. 2022 ಸೆಪ್ಟೆಂಬರ್ 11 ರಂದು ವೈರಲ್ ಆಗಿದ್ದ ಆಡಿಯೊ ಕ್ಲಿಪ್‌ನಲ್ಲಿ, ಆಹಾರ ಧಾನ್ಯಗಳ ಸಾಗಣೆಗೆ ಬಾಡಿಗೆಗೆ ಪಡೆದ ಕೆಲವು ಗುತ್ತಿಗೆದಾರರೊಂದಿಗೆ ಯೋಜನೆ ಬಗ್ಗೆ ಸಚಿವ ಸರಾರಿ ಚರ್ಚಿಸುತ್ತಿರುವುದು ಕೇಳಿಬಂದಿತ್ತು.

ಆದರೆ ಸಚಿವ ಸರಾರಿ ಕ್ಲಿಪ್ ನಕಲಿ ಎಂದು ಹೇಳಿದ್ದರು. ಈ ಕ್ಲಿಪ್ ಅನ್ನು ಅವರ ಒಎಸ್‌ಡಿ ಟಾರ್ಸೆಮ್ ಲಾಲ್ ಕಪೂರ್ ಅವರು ಸೋರಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅವರು ಪೊಲೀಸ್ ಪ್ರಕರಣದಲ್ಲಿ ತಮ್ಮ ಸಂಬಂಧಿಯನ್ನು ಸಮರ್ಥಿಸದಿದ್ದಕ್ಕಾಗಿ ಸಚಿವರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.











Click it and Unblock the Notifications