ಕೆಲಸದ ಹೊರೆಯಿಂದ ಯುವತಿ ಸಾವು: ಕಂಪನಿ ವಿರುದ್ಧ ತಾಯಿ ಆರೋಪ
ಮಹಾರಾಷ್ಟ್ರದ ಪುಣೆಯಲ್ಲಿ 26 ವರ್ಷದ ಯುವತಿಯೊಬ್ಬಳು ಅಧಿಕ ಕೆಲಸದ ಒತ್ತಡದಿಂದ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಕಂಪನಿಯ ಒತ್ತಡದಿಂದಾಗಿ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಮೃತ ಯುವತಿ ತಾಯಿ ದೂರಿದ್ದಾರೆ. ಕೆಲಸದ ಒತ್ತಡ ಹೆಚ್ಚಾದಾಗ ಕಂಪನಿಗೆ ಸ್ವತ: ತಾಯಿಯೇ ಪತ್ರ ಬರೆದಿದ್ದರು. ಆದರೂ ತಾವು ತಮ್ಮ ಮಗಳನ್ನು ಕಳೆದುಕೊಂಡಿರುವುದಾಗಿ ತಾಯಿ ಬರೆದ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
26 ವರ್ಷದ ಅನ್ನಾ ಸೆಬಾಸ್ಟಿಯನ್ ಮೃತ ಯುವತಿ.ಈಕೆ ಕೇರಳದ ನಿವಾಸಿಯಾಗಿದ್ದಾಳೆ. ಈಕೆ ಅರ್ನ್ಸ್ಟ್ ಆಂಡ್ ಯಂಗ್ (EY) ಎಂಬ ಪ್ರಸಿದ್ಧ ಕಂಪನಿಯಲ್ಲಿ ಮಾರ್ಚ್ 2024 ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಆರಂಭಿಸಿದಳು. ಇದು ಆಕೆಯ ಮೊದಲ ಕೆಲಸವಾಗಿದ್ದರಿಂದ ಕೆಲಸವನ್ನು ನಿಭಾಯಿಸುವುದು ಸುಲಭವಾಗಿರಲಿಲ್ಲ. ಹೀಗಾಗಿ ಅನ್ನಾ ಜುಲೈ 20 ರಂದು ನಿಧನಳಾಗಿದ್ದಾಳೆ ಎಂದು ತಾಯಿ ಅನಿತಾ ಆಗಸ್ಟಿನ್ ಆರೋಪಿಸಿದ್ದಾರೆ.

ಉದ್ಯೋಗ ಸೇರಿ ನಾಲ್ಕು ತಿಂಗಳೊಳಗೆ ಯುವತಿ ಸಾವು
ಉದ್ಯೋಗಕ್ಕೆ ಸೇರಿ ಬರೋಬ್ಬರಿ ನಾಲ್ಕು ತಿಂಗಳಲ್ಲಿ ಯುವತಿ ಸಾವನ್ನಪ್ಪಿದ್ದಾಳೆ. ಅನ್ನಾ ಅವರ ತಾಯಿ ಅನಿತಾ ಆಗಸ್ಟಿನ್ ಅವರು EY ಯ ಭಾರತದ ಮುಖ್ಯಸ್ಥ ರಾಜೀವ್ ಮೆಮಾನಿ ಅವರಿಗೆ ಪತ್ರ ಬರೆದು ಕಂಪನಿಯ ಕೆಲಸದ ಸಂಸ್ಕೃತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತಾಯಿ ಭಾವನಾತ್ಮಕ ಪತ್ರ
ತಾಯಿ ಅನಿತಾ ಅವರು ಪತ್ರದಲ್ಲಿ ಬರೆದಿದ್ದಾರೆ, 'ಅನ್ನಾ ನವೆಂಬರ್ 2023 ರಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಮಾರ್ಚ್ 2024 ರಲ್ಲಿ EY ನಲ್ಲಿ ಕೆಲಸವನ್ನು ಪ್ರಾರಂಭಿಸಿದರು. ಅಂತಹ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಿದ ಖುಷಿಯಲ್ಲಿದ್ದಳು. ಆದರೆ ನಾಲ್ಕು ತಿಂಗಳ ನಂತರ ಅನ್ನಾನ ಸಾವಿನ ಸುದ್ದಿ ತಿಳಿದಾಗ ನನ್ನ ಪ್ರಪಂಚವೇ ಛಿದ್ರವಾಯಿತು. ಅತ್ಯಂತ ದುಃಖದ ಸಂಗತಿಯೆಂದರೆ, ಅವರ ಅಂತ್ಯಕ್ರಿಯೆಯಲ್ಲಿ ಕಂಪನಿಯಿಂದ ಯಾರೂ ಭಾಗವಹಿಸಲಿಲ್ಲ' ಎಂದಿದೆ.
ಇದು ತನ್ನ ಮಗಳ ಮೊದಲ ಕೆಲಸವಾದ್ದರಿಂದ, ಕಂಪನಿಯ ನಿರೀಕ್ಷೆಗಳನ್ನು ಪೂರೈಸುವಲ್ಲಿ ಅನ್ನಾ ದಣಿಯುತ್ತಿರಲಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ನಿರಂತರ ಕೆಲಸ ಅನ್ನಾಳ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ದಾಳಿ ಮಾಡಿದೆ. ಕೆಲಸ ಸಿಕ್ಕ ಕೆಲವೇ ದಿನಗಳಲ್ಲಿ, ಅನ್ನಾಳಿಗೆ ಆತಂಕ, ನಿದ್ರಾಹೀನತೆ, ಒತ್ತಡದಂತಹ ಸಮಸ್ಯೆಗಳು ಕಾಡತೊಡಗಿದವು. ಭಾನುವಾರವೂ ನೌಕರರು ಕೆಲಸದಲ್ಲಿ ನಿರತರಾಗಿರಲು ತಿಳಿಸುತ್ತಿದ್ದರು ಎಂದು ಅನಿತಾ ತಿಳಿಸಿದ್ದಾರೆ.

ಅಂತ್ಯಕ್ರಿಯೆಯಲ್ಲಿ ಯಾರೂ ಭಾಗವಹಿಸಲಿಲ್ಲ...
ವಾರಾಂತ್ಯದಲ್ಲೂ ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದೆ ಎಂದು ಆಕೆ ಹೇಳಿದ್ದಾಳೆ. ಅವಳಿಗೆ ಉಸಿರು ಬಿಡಲೂ ಸಮಯ ಕೊಡಲಿಲ್ಲ. ಕೆಲಸವನ್ನು ಮರುದಿನ ಬೆಳಗಿನ ವೇಳೆಗೆ ಪೂರ್ಣಗೊಳಿಸಲು ಸಹಾಯಕ ವ್ಯವಸ್ಥಾಪಕರು ಹೇಳುತ್ತಿದ್ದರು. ಅವಳು ರಾತ್ರಿಯಿಡೀ ಕೆಲಸ ಮಾಡುತ್ತಿದ್ದಳು. ಮರುದಿನ ಬೆಳಿಗ್ಗೆ ವಿಶ್ರಾಂತಿಯಿಲ್ಲದೆ ಆಫೀಸ್ ಹೋಗುತ್ತಿದ್ದಳು. ಆಘಾತಕಾರಿ ವಿಷಯವೆಂದರೆ ಅನ್ನಾ ಅವರ ಅಂತ್ಯಕ್ರಿಯೆಯಲ್ಲಿ ಅವರ ಆಫೀಸ್‌ನಿಂದ ಯಾರೂ ಭಾಗವಹಿಸಲಿಲ್ಲ. ನನ್ನ ಮಗಳ ಅಂತ್ಯಕ್ರಿಯೆಗೆ ಬರಲು ಯಾರಿಗೂ ಒಂದು ನಿಮಿಷವೂ ಸಮಯ ಇರಲಿಲ್ಲವೇ? ಎಂದು ತಾಯಿ ಪ್ರಶ್ನೆ ಮಾಡಿದ್ದಾರೆ.
ಕಂಪನಿ ಏನು ಹೇಳಿದೆ?
26 ವರ್ಷದ ಉದ್ಯೋಗಿಯ ತಾಯಿಯ ಪತ್ರವು ಆಕೆಯ ದುರಂತ ಸಾವಿನ ಬಳಿಕ ವೈರಲ್ ಆದ ನಂತರ ಅರ್ನ್ಸ್ಟ್ ಮತ್ತು ಯಂಗ್ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಕೆಲಸದ ವಾತಾವರಣವನ್ನು ಸುಧಾರಿಸಲು ಅವರು ಪ್ರಯತ್ನಿಸುತ್ತಾರೆ ಎಂದು ಸಂಸ್ಥೆ ಹೇಳಿದೆ.
ಬಿಗ್ ಫೋರ್ ಕನ್ಸಲ್ಟೆನ್ಸಿ ಸಂಸ್ಥೆಗಳಲ್ಲಿ ಒಂದಾದ EY ಹೀಗೆ ಹೇಳಿದೆ: 'ಈ ವರ್ಷದ ಜುಲೈನಲ್ಲಿ ಅನ್ನಾ ಸೆಬಾಸ್ಟಿಯನ್ ಪಿರೆಲ್, 26, ಅವರ ದುರಂತ ಮತ್ತು ಅಕಾಲಿಕ ಮರಣದಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಕುಟುಂಬದೊಂದಿಗೆ ನಮ್ಮ ಸಂತಾಪವಿದೆ. ನಾವು ಕುಟುಂಬಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಿದ್ದೇವೆ ಮತ್ತು ನಮ್ಮ ಉದ್ಯೋಗಿಗಳಿಗೆ ಉತ್ತಮ ಕೆಲಸದ ವಾತಾವರಣವನ್ನು ಒದಗಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ'' ಎಂದಿದೆ.
ಕಂಪನಿಯು ಮತ್ತಷ್ಟು ಹೇಳಿದೆ, 'ಕುಟುಂಬವು ಅನುಭವಿಸಿದ ನಷ್ಟವನ್ನು ಯಾವುದೇ ಸಹಾಯವು ಸರಿದೂಗಿಸಲು ಸಾಧ್ಯವಿಲ್ಲ. ಅದೇನೇ ಇದ್ದರೂ, ಬಿಕ್ಕಟ್ಟಿನ ಸಮಯದಲ್ಲಿ ನಾವು ಮಾಡಲು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಿದ್ದೇವೆ. ಕುಟುಂಬದವರ ಪತ್ರವನ್ನು ಅತ್ಯಂತ ಗಂಭೀರವಾಗಿ ಮತ್ತು ನಯವಾಗಿ ಪರಿಗಣಿಸುತ್ತಿದ್ದೇವೆ. ನಾವು ಎಲ್ಲ ನೌಕರರ ಕಲ್ಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಭಾರತದಲ್ಲಿನ EY ಸಂಸ್ಥೆಯಾದ್ಯಂತ ನಮ್ಮ 100,000 ಉದ್ಯೋಗಿಗಳಿಗೆ ಉತ್ತಮ ಕೆಲಸದ ಸ್ಥಳಗಳನ್ನು ರಚಿಸಲು ನಾವು ಮಾರ್ಗಗಳನ್ನು ಹುಡುಕುತ್ತೇವೆ'' ಎಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಗಲಾಟೆ
ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಸಮರವನ್ನು ಆರಂಭಿಸಿದೆ. ಕಚೇರಿಗಳಲ್ಲಿ ಕೆಲಸದ ವಾತಾವರಣವನ್ನು ಸುಧಾರಿಸಲು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯದ ಮೇಲೆ ಕೆಲಸ ನೀಡಲು ಅನೇಕ ಜನರು ಸಲಹೆ ನೀಡಿದ್ದಾರೆ.
ಅಲ್ಲದೆ EY ನಂತಹ ಕಂಪನಿಗಳಲ್ಲಿ ಸುಧಾರಣೆಗೆ ಅನೇಕ ಜನರು ಕರೆ ನೀಡಿದ್ದಾರೆ. ಟ್ವೀಟ್‌ನಲ್ಲಿ ಬಳಕೆದಾರರು -'ತಡವಾಗಿ ಕೆಲಸ ಮಾಡುವ ಮತ್ತು ಹೆಚ್ಚು ಕೆಲಸ ಮಾಡುವ ಸಂಸ್ಕೃತಿಯು ಬಿಗ್ -4 ನಲ್ಲಿ ಮಾತ್ರವಲ್ಲದೆ ಅನೇಕ ಕಾರ್ಪೊರೇಟ್‌ಗಳಲ್ಲಿ ಉತ್ಪ್ರೇಕ್ಷಿತವಾಗಿದೆ ಎಂದು ಹೇಳಬೇಕು. ಇದನ್ನೇ ಆದರ್ಶವಾಗಿ ಕಾಣುವ ತಪ್ಪು ಸಂಪ್ರದಾಯ ಶುರುವಾಗಿದೆ. ನಾರಾಯಣ ಮೂರ್ತಿಯವರ ವಾರದಲ್ಲಿ 70 ಗಂಟೆಗಳ ಕೆಲಸ ನೆನಪಿದೆಯೇ?' ಎಂದು ಪ್ರತಿಕ್ರಿಯಿಸಿದ್ದಾರೆ.
Deeply saddened by the tragic loss of Anna Sebastian Perayil. A thorough investigation into the allegations of an unsafe and exploitative work environment is underway. We are committed to ensuring justice & @LabourMinistry has officially taken up the complaint.@mansukhmandviya https://t.co/1apsOm594d
— Shobha Karandlaje (@ShobhaBJP) September 19, 2024
ಕೇಂದ್ರದ ನಿಲುವೇನು?
ಇದೀಗ ಕೇಂದ್ರ ಕಾರ್ಮಿಕ ಸಚಿವಾಲಯ ಈ ದೂರನ್ನು ಸ್ವೀಕರಿಸಿರುವುದಾಗಿ ಹೇಳಿದೆ. ಅನ್ನಾ ಅವರ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಅಸುರಕ್ಷಿತ ಮತ್ತು ಒತ್ತಡದ ವಾತಾವರಣದ ಆರೋಪಗಳನ್ನು ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ. ನ್ಯಾಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications