ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ಬಳಿಕ Paytm ಗೂ ಶುರುವಾಯ್ತು ಸಂಕಷ್ಟ

|
Google Oneindia Kannada News

Recommended Video

Pulwama : ಪುಲ್ವಾಮಾ ದಾಳಿ ನಂತರ Paytmಗೂ ಶುರುವಾಯ್ತು ಸಂಕಷ್ಟ | Oneindia Kannada

ನವದೆಹಲಿ, ಫೆಬ್ರವರಿ 19: ಪುಲ್ವಾಮಾ ದಾಳಿಯ ಬಳಿಕ, ಪಾಕಿಸ್ತಾನದ ಬೆಂಬಲಕ್ಕೆ ನಿಂತ ಚೀನಾ ಭಾರೀ ಬೆಲೆ ತೆರಬೇಕಾದ ಸಂದರ್ಭ ಎದುರಾಗಿದೆ.

ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!

ತನ್ನ ಉತ್ಪನ್ನಗಳಿಗೆ ಭಾರತವನ್ನೇ ಬಹುದೊಡ್ಡ ಮಾರುಕಟ್ಟೆಯನ್ನಾಗಿ ಹೊಂದಿರುವ ಚೀನಾ ವಸ್ತುಗಳ ಬಗ್ಗೆ ಈಗಾಗಲೇ ಭಾರತೀಯರಲ್ಲಿ ತಿರಸ್ಕಾರ ಆರಂಭವಾಗಿದ್ದು, ಅದರ ಮೊಟ್ಟ ಮೊದಲ ಬಿಸಿ, ನಗದು ರಹಿತ ಪೇಮೆಂಟ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸಿದ್ದ Paytm appಗೆ ತಟ್ಟಿದೆ. ಚೀನಾ ಮೂಲದ ಆಲಿಬಾಬಾ ಸಂಸ್ಥೆಯ ಭಾಗವಾಗಿರುವ ಕಾರಣ ಪೇಟಿಎಂ ಅನ್ನೂ ಬಹಿಷ್ಕರಿಸಲು ಕೆಲವು ಭಾರತೀಯರು ಆರಂಭಿಸಿದ್ದಾರೆ.

ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾದ ಸರಕಾರಿ ಮಾಧ್ಯಮ ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾದ ಸರಕಾರಿ ಮಾಧ್ಯಮ

ಈಗಾಗಲೇ ಡಿಜಿಟಲ್ ಪೇಮೆಂಟ್ ಗೆ ಸಾಕಷ್ಟು app ಗಳೂ ಬಂದಿರುವ ಕಾರಣ ಪೇಟಿಎಂ ಮೇಲೆಯೇ ಹೆಚ್ಚು ಅವಲಂಬಿತರಾಗುವ ಅಗತ್ಯವೂ ಇಲ್ಲ. ಆದ್ದರಿದ ಹಲವರು ಈಗಾಗಲೇ ತಮ್ಮ ಫೊನ್ ಗಳಿಂದ ಪೇಟಿಎಂ app ಅನ್ನೇ ಡಿಲೀಟ್ ಮಾಡಿದ್ದಾರೆ. 'ನಾನು ಕಷ್ಟಪಟ್ಟು ದುಡಿದ ದುಡ್ಡು ನೇರವಾಗಿ ಕುತಂತ್ರಿ ಚೀನಾ ಪಾಲಾಗುವುದು ಬೇಡ. ಆದ್ದರಿಂದ ನಾನು ಪೇಟಿಎಂ ಮೂಲಕ ಹಣ ಪಾವತಿಸುವುದಿಲ್ಲ' ಎಂದು ಕೆಲವರು ಹೇಳುತ್ತಿದ್ದಾರೆ.

Pulwama attack: Many Indians may boycott China products

ಫೆಬ್ರವರಿ 14 ರಂದು ಪಾಕ್ ನ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬಾತ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣನಾಗಿದ್ದ. ಈ ಘಟನೆಯಲ್ಲಿ ಪಾಕ್ ಪಾತ್ರವಿದೆ ಎಂದು ಭಾರತ ಮಾತ್ರವಲ್ಲ, ಇಡೀ ವಿಶ್ವವೂ ದೂರುತ್ತಿದೆ.

ಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ: ಸೇನೆ ಎಚ್ಚರಿಕೆಯಾರು ಗನ್ ಎತ್ತುತ್ತಾರೋ ಅವರನ್ನು ಇಲ್ಲವಾಗಿಸುತ್ತೇವೆ: ಸೇನೆ ಎಚ್ಚರಿಕೆ

ಆದರೆ ಚೀನಾ ಮಾತ್ರ, 'ಸಾಕ್ಷ್ಯಾಧಾರವಿಲ್ಲದೆ ಪಾಕಿಸ್ತಾನದ ಮೇಲೆ ವೃಥಾ ಗೂಬೆ ಕೂರಿಸಬೇಡಿ' ಎಂದಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಭಾರತದ ವಿರುದ್ಧ ಪಾಕ್ ಯಾವುದೇ ಕೃತ್ಯ ಎಸಗಿದರೂ ಅದರಲ್ಲಿ ಚೀನಾ ಬೆಂಬಲ ಪರೋಕ್ಷವಾಗಿಯಾದರೂ ಇದ್ದೇ ಇರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾದ ಹಿನ್ನೆಲೆಯಲ್ಲಿ ಚೀನಾ ಉತ್ಪನ್ನಗಳ ಮೇಲೆ ಜನರೇ ಸ್ವಇಚ್ಛೆಯಿಂದ ಬಹಿಷ್ಕಾರ ಹಾಕುತ್ತಿದ್ದಾರೆ.

English summary
Pulwama terror attack: Many Indians are boycotting Chinese products after China's supoort to Pakistan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X