Holiday: ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ; ಎಲ್ಲಿ, ಯಾವಾಗ ತಿಳಿಯಿರಿ
Holiday: ಈ ವರ್ಷದ ಆರಂಭದಿಂದಲೂ ಇಲ್ಲಿಯವರೆಗೂ ಹಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ಮತ್ತೆ ಪ್ರತಿ ತಿಂಗಳಿನಂತೆ ಜೂನ್ ಅಂತ್ಯದವರೆಗೂ ಸಾಲು ಸರ್ಕಾರಿ ರಜೆಗಳು ಸಿಗಲಿವೆ. ಹಾಗಾದ್ರೆ ಎಲ್ಲೆಲ್ಲಿ ಯಾವ್ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಕದಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ವಿಶೇಷ ಕಾರ್ಯಕ್ರಮಗಳು, ಭಾರೀ ಮಳೆ ಮುಂದುವರೆದಂತಹ ಸಂದರ್ಭಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಸಾಲು ರಜೆಗಳನ್ನೇ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.

ಈಗಾಗಲೇ ಕರ್ನಾಟಕದಲ್ಲಿ ಬೇಸಿಗೆ ರಜೆ ಮುಕ್ತಾಯವಾಗಿ ಶಾಲೆಗಳು ಸಹ ಆರಂಭವಾಗಿವೆ. ಇದರ ಬೆನ್ನಲ್ಲೇ ಮುಂಗಾರು ಚುರುಕು ಪಡೆದ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಹಲವು ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿತ್ತು. ಕರ್ನಾಟಕ ಹೊರತುಪಡಿಸಿ ಇನ್ನೂ ಕೆಲವು ರಾಜ್ಯಗಳ ವಿದ್ಯಾರ್ಥಿಗಳಿಗೆ ಚಳಿಗಾಲದ ಸಂದರ್ಭದಲ್ಲಿ ತಿಂಗಳುಗಟ್ಟಲೇ ರಜೆ ನೀಡಲಾಗಿತ್ತು. ಇನ್ನೂ ಬೇಸಿಗೆಯಲ್ಲೂ ಸಹ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡಿ ಮನೆಯಿಂದಲೇ ಆನ್‌ಲೈನ್ ತರಗತಿಗಳನ್ನು ಸಹ ನಡೆಸಲಾಗಿತ್ತು.
ಇದೀಗ ಮುಂಗಾರು ಆರ್ಭಟ ಶುರುವಾದ ಹಿನ್ನೆಲೆ ಹಲವೆಡೆ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಈ ನಡುವೆಯೂ ಹಲವೆಡೆ ಜೂನ್ ಅಂತ್ಯದವರೆಗೂ ಎಲ್ಲಾ ಶಾಲಾ-ಕಾಲೇಜುಗಳಿಗೆ ಸಾಲು ಸಾರ್ವಜನಿಕ ರಜೆಗಳು ಸಿಗಲಿವೆ. ಹಾಗಾದ್ರೆ ಯಾವ್ಯಾವಾಗ ಎಲ್ಲೆಲ್ಲಿ ರಜೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸಾರ್ವಜನಿಕ ರಜಾ ದಿನಗಳು: ಜೂನ್ ತಿಂಗಳಲ್ಲಿ ಒಟ್ಟು 8 ಸರ್ಕಾರಿ ರಜಾದಿನಗಳು ಬಂದಿವೆ. ಇದರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ರಜಾ ದಿನಗಳು ಸೇರಿವೆ. ರಾಜ್ಯ ರಜಾ ದಿನಗಳು ಆಯಾ ರಾಜ್ಯಗಳ ಶಿಕ್ಷಣ ಇಲಾಖೆಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿರುತ್ತದೆ.
ವರ್ಷಾರಂಭಕ್ಕೂ ಮುನ್ನ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ, ಪ್ರತಿ ತಿಂಗಳ ಆರಂಭಕ್ಕೂ ಮುನ್ನ, ಯಾವಾಗ ಮತ್ತು ಯಾವ ರಾಜ್ಯದಲ್ಲಿ ಸರ್ಕಾರಿ ರಜಾ ದಿನ ಇರುತ್ತದೆ ಎಂದು ಆಯಾ ರಾಜ್ಯ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿರುತ್ತದೆ. ಹಾಗೆಯೇ ಜೂನ್ ತಿಂಗಳು ಭಾನುವಾರ ಹೊರತುಪಡಿಸಿದಂತೆ ಯಾವುದೇ ರಾಷ್ಟ್ರೀಯ ರಜಾ ದಿನ ಇಲ್ಲ.
ಜೂನ್ ತಿಂಗಳಲ್ಲಿ ಒಟ್ಟು 8 ಸರ್ಕಾರಿ ರಜಾದಿ ನಗಳಿವೆ. ಆದರೆ ಅವುಗಳು ಆಯಾ ರಾಜ್ಯಗಳಿಗೆ ಅನ್ವಯಿಸುತ್ತವೆ. ಈ ತಿಂಗಳು ಸಂತ ಗುರು ಕಬೀರ್ ಜಯಂತಿ ಮತ್ತು ಗುರು ಹರಗೋಬಿಂದ್ ಜಿ ಅವರ ಜನ್ಮದಿನ ಇದ್ದು, ಈ ದಿನ ಕೆಲವು ರಾಜ್ಯಗಳಲ್ಲಿ ಮಾತ್ರ ಸರ್ಕಾರಿ ರಜಾ ದಿನ ಇರುತ್ತವೆ.
ಯಾವ್ಯಾವಾಗ ಹಾಗೂ ಎಲ್ಲೆಲ್ಲಿ ಶಾಲಾ-ಕಾಲೇಜುಗಳಿಗೆ ರಜೆ?
* ಈಗಾಗಲೇ ಜೂನ್ 11ರಂದು ಸಂತ ಗುರು ಕಬೀರ್ ಜಯಂತಿಯಂದು ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಸಾರ್ವಜನಿಕ ರಜೆ ನೀಡಲಾಗಿತ್ತು.
* ಜೂನ್ 12ರಂದು ಗುರುವಾರ ಗುರು ಹರಗೋವಿಂದ ಜಿ ಅವರ ಜನ್ಮದಿನವಾಗಿದ್ದು, ಈ ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ರಜೆ ಇತ್ತು.
* ಜೂನ್ 14: ಪಹೇಲಿ ರಾಜಾ ಉತ್ಸವ ಹಿನ್ನೆಲೆ ಈ ದಿನ ಒಡಿಶಾದಲ್ಲಿ ಸಾರ್ವಜನಿಕ ರಜಾ ದಿನವಾಗಿದೆ.
* ಜೂನ್ 15 ಭಾನುವಾರ ಆಗಿದ್ದು, ಈ ದಿನ ದೇಶಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ.
* ಜೂನ್ 22 ಕೂಡ ಭಾನುವಾರ ಆಗಿದ್ದು, ಈ ದಿನ ದೇಶಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ.
* ಜೂನ್ 27ರಂದು ರಥಯಾತ್ರೆ ಹಿನ್ನೆಲೆ ಮಣಿಪುರ ಮತ್ತು ಒಡಿಶಾದಲ್ಲಿ ಸಾರ್ವಜನಿಕ ರಜೆ ಇರುತ್ತದೆ.
* ಜೂನ್ 29ರಂದು ಭಾನುವಾರ ಆಗಿದ್ದು,ದೇಶಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ.
ಜೂನ್ 30ರಂದು ಸೋಮವಾರ ರೆಮ್ನಾ ನಿ ಹಿನ್ನೆಲೆ ಮಿಜೋರಾಂ ಸಾರ್ವಜನಿಕ ರಜೆ ಇರುತ್ತದೆ.












Click it and Unblock the Notifications