ನೋಟು ಎಣಿಸುವ ಯಂತ್ರವೂ ಡಿಕೆಶಿ ಹಣಿಯುವ ತಂತ್ರವೂ...

Posted By:
Subscribe to Oneindia Kannada

ಕರ್ನಾಟಕ ಕಾಂಗ್ರೆಸ್ ನಲ್ಲಿ ಎದ್ದಿರುವ ಕೋಲಾಹಲ ಇಡೀ ದೇಶದಲ್ಲಿ ಸುಳಿದಾಡಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ-ಕಚೇರಿ, ಅವರ ಆಪ್ತರ ಮನೆ-ಕಚೇರಿಗಳ ಮೇಲೆ ನಡೆಸುತ್ತಿರುವ ದಾಳಿ ವಿಚಾರವು ಕ್ಷಣಕ್ಕೊಂದು ಸುದ್ದಿಯನ್ನು ಹೊರಹಾಕುತ್ತಿದೆ. ಈ ಪೈಕಿ ಎಷ್ಟು ಸತ್ಯ, ಯಾವುದು ಸತ್ಯ್ ಎಂಬುದನ್ನು ನಿರ್ಧರಿಸುವುದು ಕೂಡ ಕಷ್ಟವಾಗಿದೆ.

ಡಿಕೆಶಿ ಭದ್ರಕೋಟೆಯನ್ನು ಛಿದ್ರ ಮಾಡ್ತಾರಾ ತೇಜಸ್ವಿನಿ ಗೌಡ?

ಆದರೆ, ಈ ಸುದ್ದಿ ಇನ್ನೂ ಬಿರುಸು ಕಳೆದುಕೊಂಡಿಲ್ಲ. ರಾಜ್ಯ ರಾಜಕೀಯ, ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ, ಕಾಂಗ್ರೆಸ್ ಮೇಲಿನ ಪರಿಣಾಮ, ಬಿಜೆಪಿಗೆ ಆಗಬಹುದಾದ ಲಾಭ-ನಷ್ಟ ಎಲ್ಲವೂ ಚರ್ಚೆಯ ವಿಷಯವಾಗಿದೆ. ಈ ಐಟಿ ದಾಳಿಯ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿ ಸಂಸ್ಥೆಯ ಅಪರೂಪದ ಚಿತ್ರಗಳು ಇಲ್ಲಿವೆ.

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿಗೆ ಟಿಎಂಸಿ, ಡಿಎಂಕೆ ಖಂಡನೆ

ನೋಟು ಎಣಿಸುವ ಯಂತ್ರವನ್ನು ನವದೆಹಲಿಯಲ್ಲಿರುವ ಶಿವಕುಮಾರ್ ನಿವಾಸಕ್ಕೆ ತೆಗೆದುಕೊಂಡು ಹೋಗುತ್ತಿರುವುದು, ಬೆಂಗಳೂರಿನಲ್ಲಿ ಅಭಿಮಾನಿಗಳಿಗೆ ಕೈ ಮುಗಿಯುತ್ತಿರುವ ಶಿವಕುಮಾರ್ ಚಿತ್ರಗಳು ಸಹ ಇಲ್ಲಿವೆ. ಇವುಗಳ ಜತೆಗೆ ನವದೆಹಲಿಯ ಸಂಸತ್ ನಲ್ಲಿರುವ ಗ್ರಂಥಾಲಯ ಕಟ್ಟಡದಲ್ಲಿ ಗಂಡು ನವಿಲಿನ ನೃತ್ಯ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ನೀಡಿದ ಬೀಳ್ಕೊಡುಗೆ ಸೇರಿದ ಹಾಗೆ ಇನ್ನಷ್ಟು ಚಿತ್ರ-ಸುದ್ದಿ ಇಲ್ಲಿವೆ.

ಮನೆ ಎದುರು ಸಚಿವ ಡಿಕೆಶಿ

ಮನೆ ಎದುರು ಸಚಿವ ಡಿಕೆಶಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹಾಗೂ ಅವರ ಆಪ್ತರಿಗೆ ಸೇರಿದ ಮನೆ ಹಾಗೂ ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿದರು. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಸಚಿವರು ಕಂಡುಬಂದಿದ್ದು ಹೀಗೆ.

ಅಭಿಮಾನಿಗಳ ಎದುರು ಇಂಧನ ಸಚಿವ

ಅಭಿಮಾನಿಗಳ ಎದುರು ಇಂಧನ ಸಚಿವ

ಆದಾಯ ತೆರಿಗೆ ತಪ್ಪಿಸಿದ ಆರೋಪಕ್ಕೆ ಗುರಿಯಾಗಿ ಬುಧವಾರ ವಿವಿಧೆಡೆ ಅಧಿಕಾರಿಗಳ ದಾಳಿ ನಡೆದ ವೇಳೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಅಭಿಮಾನಿಗಳಿಗೆ ಕಾಣಿಸಿಕೊಂಡರು.

ನೋಟು ಎಣಿಸುವ ಯಂತ್ರ

ನೋಟು ಎಣಿಸುವ ಯಂತ್ರ

ನವದೆಹಲಿಯಲ್ಲಿ ಬುಧವಾರ ಸಚಿವ ಡಿಕೆ ಶಿವಕುಮಾರ್ ಅವರಿಗೆ ಸೇರಿದ ನಿವಾಸದ ಮೇಲೆ ದಾಳಿಗೆ ತೆರಳುವ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟು ಎಣಿಸುವ ಯಂತ್ರವನ್ನು ತೆಗೆದುಕೊಂಡು ಹೋದರು.

ಖಂಡಾಂತರ ಕ್ಷಿಪಣಿ ಪರೀಕ್ಷೆ

ಖಂಡಾಂತರ ಕ್ಷಿಪಣಿ ಪರೀಕ್ಷೆ

ಈ ಅದ್ಭುತ ಚಿತ್ರ ಸೆರೆಯಾಗಿರುವುದು ಅಮೆರಿಕದ ವಾಂಡೆನ್ ಬರ್ಗ್ ನ ವಾಯು ನೆಲೆಯಲ್ಲಿ. ಖಂಡಾಂತರ ಅಣು ಕ್ಷಿಪಣಿಗಳ ಪರೀಕ್ಷೆಯಲ್ಲಿ ಅಮೆರಿಕದ ವಾಯು ಸೇನೆ ಯಶಸ್ವಿಯಾಗಿದೆ. ಅದರ ಪರಿಕ್ಷೆಯ ಫೋಟೋ ಇದು.

ಕಲಾಕೃತಿ ಕೊಡುಗೆ

ಕಲಾಕೃತಿ ಕೊಡುಗೆ

ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಅವರ ಪತ್ನಿ ಸಲ್ಮಾ ಅವರಿಗೆ ವಿದಾಯ ಹೇಳುವ ಮುನ್ನ ಕಲಾಕೃತಿಯೊಂದನ್ನು ಕೊಡುಗೆಯಾಗಿ ನೀಡಲಾಯಿತು. ಈ ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ.

ಪುನರ್ವಸತಿಗಾಗಿ ಆಗ್ರಹಿಸಿ ಉಪವಾಸ

ಪುನರ್ವಸತಿಗಾಗಿ ಆಗ್ರಹಿಸಿ ಉಪವಾಸ

ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣದ ವೇಳೆ ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ನರ್ಮದಾ ಬಚಾವೋ ಆಂದೋಲನದ ಪ್ರಮುಖರಾದ ಮೇಧಾ ಪಾಟ್ಕರ್ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

D K Shivakumar fell to H D Devegowda's feet | Oneinida Kannada
ಕುಣಿದು -ದಣಿಯುತ್ತಿರುವ ಗಂಡು ನವಿಲು

ಕುಣಿದು -ದಣಿಯುತ್ತಿರುವ ಗಂಡು ನವಿಲು

ನವದೆಹಲಿಯ ಸಂಸತ್ ಭವನದ ಗ್ರಂಥಾಲಯ ಕಟ್ಟಡದಲ್ಲಿ ಗಂಡು ನವಿಲಿನ ನೃತ್ಯ ಕಂಡುಬಂದಿದ್ದು ಹೀಗೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IT raid on Karnataka minister DK Shivakumar, farewell to vice president Hamid Ansari and other national and international events represent through PTI photos.
Please Wait while comments are loading...