ವಿಧಾನಸೌಧದ ಮುಂದೆ ಶೀರ್ಷಾಸನ-ಇದಲ್ಲವೇ ಯೋಗಾಯೋಗ!

Posted By:
Subscribe to Oneindia Kannada

ವಿಧಾನಸೌಧದ ಎದುರು ಶೀರ್ಷಾಸನ ಹಾಕಿರುವ ಈ ಯೋಗಪಟುಗಳ ಫೋಟೋ ಎಂಥ ಅದ್ಭುತವಾಗಿ ಬಂದಿದೆ ನೋಡಿ. ಕಾರ್ಯಕ್ರಮದ ಉದ್ದೇಶ ಹಾಗೂ ಫೋಟೋ ತೆಗೆದದ್ದು ಎರಡೂ ಸೂಪರ್ ಆಗಿದೆ. ಅಂದ ಹಾಗೆ ಜೂನ್ ಇಪ್ಪತ್ತೊಂದರ ಬುಧವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆ. ಅದಕ್ಕೆ ಪೂರ್ವಭಾವಿಯಾಗಿ ಎಷ್ಟೆಲ್ಲ ಚೆಂದದ ಕಾರ್ಯಕ್ರಮ, ಅಭ್ಯಾಸಗಳು ನಡೆಯುತ್ತಿವೆ.

ಚೀನಾದ ಮಹಾಗೋಡೆಯ ಮೇಲೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ವಿಕೆ ಸಿಂಗ್ ಭ್ರಮರಿ ಪ್ರಾಣಾಯಾಮದಲ್ಲಿ ತೊಡಗಿಕೊಂಡಿದ್ದಾರೆ. ಅವರ ಸುತ್ತಲೂ ಅದೆಷ್ಟೋ ಮಂದಿ ಅಭ್ಯಾಸನಿರತರು ಇದ್ದಾರೆ. ಬೆಂಗಳೂರಿನಲ್ಲೇ ದೃಷ್ಟಿ ದೋಷವುಳ್ಳವರು ಅಭ್ಯಾಸ ನಿರತರಾಗಿರುವುದನ್ನು ನೋಡಿದರೆ ಸಬೂಬು ಹೇಳುವವರಿಗೆ ಕರುಳಲ್ಲಿ ಚುರ್ ಎನಿಸುವಂತಿದೆ.

ಯೋಗದ ಬಗ್ಗೆ 'ಆರ್ಟ್ ಆಫ್ ಲಿವಿಂಗ್' ಸಾಧಕಿ ಹೇಳಿದ್ದೇನು? (ಸಂದರ್ಶನ)

ಇನ್ನು ಸೂರತ್ ನ ಸ್ವಾಮಿ ನಾರಾಯಣ ಗುರುಕುಲದಲ್ಲಿ ವಿದ್ಯಾರ್ಥಿಗಳು ಯೋಗದಲ್ಲಿ ನಿರತರಾಗಿ, ಮೂಡಿಸಿದ ಆಕೃತಿಯೇ ಅಚ್ಚರಿ ಮೂಡಿಸುವಂತಿದೆ. ಒಟ್ಟಾರೆ ಎಲ್ಲೆಡೆಯೂ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಪೂರ್ವಭಾವಿ ಅಭ್ಯಾಸದ ಫೋಟೋಗಳೆ ರಾರಾಜಿಸುತ್ತಿವೆ. ಇಡೀ ವಿಶ್ವಕ್ಕೆ ಭಾರತ ನೀಡಿದ ಆರೋಗ್ಯ ಸೂತ್ರ ಯೋಗದ ಸ್ಮರಣೆ, ದಿನಾಚರಣೆಗೆ ಇನ್ನು ಒಂದು ರಾತ್ರಿ ಕಳೆದರೆ ಆಯಿತು.

ಒಳಗಣ್ಣಿನಿಂದ ನೋಡಿ

ಒಳಗಣ್ಣಿನಿಂದ ನೋಡಿ

ಯೋಗದ ಅನುಕೂಲಗಳ ಬಗ್ಗೆ ಏನೇ ಹೇಳಿದರೂ ಸಬೂಬು ಕಂಡುಕೊಂಡು ತಪ್ಪಿಸಿಕೊಳ್ಳುವವರು ಈ ಫೋಟೋ ನೋಡಲೇಬೇಕು. ಎಂಥವರಿಗೂ ಖಂಡಿತಾ ಈ ಫೋಟೋ ಸ್ಫೂರ್ತಿಯಾಗುತ್ತದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಮಂಗಳವಾರ ಬೆಂಗಳೂರಿನಲ್ಲಿ ದೃಷ್ಟಿ ದೋಷವುಳ್ಳವರು ಯೋಗಾಭ್ಯಾಸ ಮಾಡಿದರು.

ಉದ್ದೇಶ ಘನವಾಗಿದ್ದರೆ ಫಲಿತಾಂಶ ನಿರೀಕ್ಷೆ

ಉದ್ದೇಶ ಘನವಾಗಿದ್ದರೆ ಫಲಿತಾಂಶ ನಿರೀಕ್ಷೆ

ಯಾವುದಾದರೂ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡರೆ, ಅದರ ಉದ್ದೇಶ ಕೂಡ ಘನವಾಗಿದ್ದರೆ ಇಂಥ ಫಲಿತಾಂಶ ನಿರೀಕ್ಷೆ ಮಾಡಬಹುದು. ನವದೆಹಲಿಯ ನೆಹರೂ ಉದ್ಯಾನದಲ್ಲಿ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಅಭ್ಯಾಸದಲ್ಲಿ ತೊಡಗಿದ್ದವರು.

ಅಂತಾರಾಷ್ಟ್ರೀಯ ಯೋಗದಿನದಂದು ಗಿನ್ನಿಸ್ ಪಟ್ಟಿ ಸೇರಲಿದೆಯೇ ಮೈಸೂರು?

ಯೋಗದ ಆಸಕ್ತಿ

ಯೋಗದ ಆಸಕ್ತಿ

ಕಲಿಯಬೇಕು ಎಂಬ ಉದ್ದೇಶದಿಂದ ನವದೆಹಲಿಯ ನೆಹರೂ ಉದ್ಯಾನದಲ್ಲಿ ಆಸಕ್ತರು ಯೋಗದ ಅಭ್ಯಾಸದಲ್ಲಿ ತೊಡಗಿದ್ದ ಆಸಕ್ತರು.

ಭ್ರಮರಿ ಪ್ರಾಣಾಯಾಮ

ಭ್ರಮರಿ ಪ್ರಾಣಾಯಾಮ

ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಅವರು ಚೀನಾದ ಮಹಾಗೋಡೆಯಲ್ಲಿ ಭ್ರಮರಿ ಪ್ರಾಣಾಯಾಮದ ಅಭ್ಯಾಸ ಮಾಡುವಾಗ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ಗುರುಕುಲದ ವಿದ್ಯಾರ್ಥಿಗಳು

ಗುರುಕುಲದ ವಿದ್ಯಾರ್ಥಿಗಳು

ಯೋಗದಲ್ಲಿ ನಿರತರಾದ ವ್ಯಕ್ತಿಯ ಚಿತ್ರದ ಆಕೃತಿ ಮೂಡಿಸಿ, ಯೋಗಾಭ್ಯಾಸ ಮಾಡುತ್ತಿರುವ ಸೂರತ್ ಸ್ವಾಮಿ ನಾರಾಯಣ ಗುರುಕುಲದ ವಿದ್ಯಾರ್ಥಿಗಳು.

ವಿಧಾನ ಸೌಧದ ಎದುರು ಶೀರ್ಷಾಸನ

ವಿಧಾನ ಸೌಧದ ಎದುರು ಶೀರ್ಷಾಸನ

ಬೆಂಗಳೂರಿನ ವಿಧಾನಸೌಧದ ಮುಂಭಾಗ ದಾಖಲಾರ್ಹ ಪ್ರಯತ್ನದಲ್ಲಿ ಮೂವತ್ತು ಸೆಕೆಂಡ್ ಗಳ ಕಾಲ ಶೀರ್ಷಾಸನ ಹಾಕಿದ ಯೋಗಪಟುಗಳು.

ವಿದ್ಯಾರ್ಥಿನಿಯರ ಯೋಗಾಭ್ಯಾಸ

ವಿದ್ಯಾರ್ಥಿನಿಯರ ಯೋಗಾಭ್ಯಾಸ

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಅಹ್ಮದಾಬಾದ್ ನ ಶಾಲೆಯೊಂದರಲ್ಲಿ ಯೋಗಾಭ್ಯಾಸದಲ್ಲಿ ನಿರತರಾಗಿದ್ದ ವಿದ್ಯಾರ್ಥಿನಿಯರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
International Yoga day on June 21st. Here is the photo feature with Yoga practice in India and China, represent with PTI photos.
Please Wait while comments are loading...