ಚಳಿ ತಬ್ಬಿದ ಇಳೆಯ ತೋಳಿನಲ್ಲಿ ಮೈ ನಡುಕ, ಪುಳಕ...

Posted By:
Subscribe to Oneindia Kannada

ಚಳಿ ತನ್ನ ತೋಳನ್ನು ಚಾಚಿ ಅಪ್ಪಿ ಹಿಡಿದ ನೆಲ, ಮರ, ಜಲದ ದೃಶ್ಯಕ್ಕೇ ಹಲ್ಲು ನಡುಗುತ್ತದೆ. ಉತ್ತರ ಭಾರತದಲ್ಲಿ ಸೂರ್ಯೋದಯವೇ ತಡವೇನೋ ಎಂಬಂತೆ ಎಲ್ಲೆಲ್ಲೂ ಮಂಜು. ವಾತಾವರಣದಲ್ಲಿನ ಚಳಿಯನ್ನೇ ಖುಷಿಯಿಂದ ಆಸ್ವಾದಿಸುತ್ತಿರುವವರು ಕಾಣುತ್ತಿದ್ದಾರೆ. ಜತೆಗೆ ಎಂದಿನ ಕೆಲಸ-ಕಾರ್ಯ ಮುಂದೂಡಲಾಗದೆ ಚಳಿಯ ಜತೆಯಲ್ಲೇ ಬದುಕು ದೂಡುತ್ತಿದ್ದಾರೆ.

ಇನ್ನು ಮಧ್ಯಪ್ರದೇಶದ ಜಬಲ್ ಪುರ್ ನಲ್ಲಿ ನರ್ಮದಾ ನದಿಯ ಸೊಗಸು ಹೆಚ್ಚುವಂಥ ಹಲವು ವಿದ್ಯಮಾನಗಳು ನಡೆಯುತ್ತಿವೆ. ಸೈಬೀರಿಯನ್ ವಲಸೆ ಹಕ್ಕಿಗಳು ಇಲ್ಲಿಗೆ ಬಂದಿವೆ. ಅವುಗಳಿಗೆ ಅಹಾರ ಹಾಕುವುದು ಕೂಡ ಖುಷಿಯ ಸಂಗತಿಯೇ. ಜತೆಗೆ ಬೆಳಗ್ಗೆ ಸೂರ್ಯೋದಯದ ಕಾಲಕ್ಕೆ ಕಿತ್ತಳೆ ಬಣ್ಣದ ಮೆರುಗು ನದಿಯೆಲ್ಲ ಹರಡಿ, ಬಣ್ಣವು ಬೆರಳಿಗೆ ಅಂಟುತ್ತದೇನೋ ಎಂಬ ಭಾವ ಮೂಡುತ್ತದೆ.[2016ರಲ್ಲಿ ಗಮನ ಸೆಳೆದ 24 ಚಿತ್ರಗಳು]

ಇನ್ನೇನು ಜನವರಿ 26ರ ಗಣರಾಜ್ಯೋತ್ಸವಕ್ಕೆ ಹದಿನೈದು-ಹದಿನಾರು ದಿನಗಳು ಬಾಕಿ ಇವೆ. ಈಗಾಗಲೇ ಅದರ ತಯಾರಿಯಂತೂ ಆರಂಭವಾಗಿವೆ. ಅದೇ ರೀತಿ ಎನ್ ಎಸ್ ಜಿ ಕಮ್ಯಾಂಡೋಗಳು ಕೂಡ ತಯಾರಿ ನಡೆಸುತ್ತಿದ್ದಾರೆ. ಅಸ್ಸಾಂನ ಗುವಹತಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕಲಾವಿದರ ಸಮಾವೇಶದಲ್ಲಿ ತುಂಬ ಚಂದದ ಪ್ರದರ್ಶನ ನಡೆದಿದೆ. ನೋಡುವ ಖುಷಿಗೆ, ಕಾಡುವ ಚಳಿಯ ಜತೆಗೆ.

ಶಿಮ್ಲಾ ಮಂಜಿನ ರಸ್ತೆಗಳು

ಶಿಮ್ಲಾ ಮಂಜಿನ ರಸ್ತೆಗಳು

ಶಿಮ್ಲಾ ರಸ್ತೆಗಳು ಭಾರಿ ಹಿಮಪಾತಕ್ಕೆ ಮಂಜಿನಿಂದ ಆವೃತವಾಗಿದ್ದು, ಅವುಗಳ ಮೇಲೆ ಜನ ಸಂಚಾರ ಮಾಮೂಲಿನಂತೆ ಇದೆ.

ಹಿಮಪಾತದ ಮಧ್ಯೆ ಆಟ

ಹಿಮಪಾತದ ಮಧ್ಯೆ ಆಟ

ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ಶ್ರೀನಗರ ಹೊರವಲಯದಲ್ಲಿ ಹುಡುಗರು ಹಿಮಪಾತದ ಮಧ್ಯೆ ಆಟದಲ್ಲಿ ತೊಡಗಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ಮಂಜಿನ ಮಧ್ಯೆ ಹಸಿರು ಮೇವು

ಮಂಜಿನ ಮಧ್ಯೆ ಹಸಿರು ಮೇವು

ತಂದೆ-ಮಗಳು ಜಾನುವಾರಿಗಾಗಿ ಹಸಿರು ಮೇವು ಹೊತ್ತುಕೊಂಡು ಬರುವಾಗ ಶ್ರೀನಗರ ಹೊರವಲಯದ ಮಂಜಿನ ಮಧ್ಯೆ ಕಂಡಿದ್ದು ಹೀಗೆ.

ವಲಸೆ ಹಕ್ಕಿಗಳಿಗೆ ಕಾಳು

ವಲಸೆ ಹಕ್ಕಿಗಳಿಗೆ ಕಾಳು

ಮಧ್ಯ ಪ್ರದೇಶದ ಜಬಲ್ ಪುರ್ ನ ನರ್ಮದಾ ನದಿಯಲ್ಲಿ ವಲಸೆ ಬಂದ ಸೈಬಿರೀಯನ್ ಪಕ್ಷಿಗಳಿಗೆ ಮೇವು ಹಾಕುತ್ತಿರುವ ದೃಶ್ಯ.

ವಿದೇಶಿ ಕಲಾವಿದರ ಪ್ರದರ್ಶನ

ವಿದೇಶಿ ಕಲಾವಿದರ ಪ್ರದರ್ಶನ

ಅಸ್ಸಾಂನ ಗುವಾಹತಿಯಲ್ಲಿ ಶ್ರೀಮಂತ ಶಂಕರದೇವ ವಾರ್ಷಿಕ ಅಂತರರಾಷ್ಟ್ರೀಯ ಹಬ್ಬದಲ್ಲಿ ವಿದೇಶಿ ಕಲಾವಿದರು 'ಅಂಖಿಯಾ ಭಾಗೋನ' ಪ್ರದರ್ಶನ ನೀಡಿದರು.

ಎನ್ ಎಸ್ ಜಿ ಕಮ್ಯಾಂಡೋ ಅಭ್ಯಾಸ

ಎನ್ ಎಸ್ ಜಿ ಕಮ್ಯಾಂಡೋ ಅಭ್ಯಾಸ

ಗಣರಾಜ್ಯೋತ್ಸವ ಮೆರವಣಿಗೆಗೆ ಪೂರ್ವಭಾವಿಯಾಗಿ ನವದೆಹಲಿಯಲ್ಲಿ ಅಭ್ಯಾಸನಿರತ ಎನ್ ಎಸ್ ಜಿ ಕಮ್ಯಾಂಡೋಗಳು ಕಂಡು ಬಂದಿದ್ದು ಹೀಗೆ.

ನರ್ಮದಾ ನದಿಯಲ್ಲಿ ಸೂರ್ಯೋದಯ

ನರ್ಮದಾ ನದಿಯಲ್ಲಿ ಸೂರ್ಯೋದಯ

ಮಧ್ಯಪ್ರದೇಶದ ಜಬಲ್ ಪುರ್ ನಲ್ಲಿ ಮಂಜು ಮುಸುಕಿದ ವಾತಾವರಣ, ನರ್ಮದಾ ನದಿಯಲ್ಲಿ ಸೂರ್ಯೋದಯದ ಮನಮೋಹಕ ದೃಶ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Various national photos with a major theme of winter- represnt through PTI photos.
Please Wait while comments are loading...