ಸರ್ಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರೇ ಉತ್ತಮರು: ಬಿಜೆಪಿ ಶಾಸಕ ವಿವಾದ
ಪಟ್ನಾ, ಜೂನ್, 6: ಸರ್ಕಾರಿ ಸಿಬ್ಬಂದಿಗಿಂತ ವೇಶ್ಯೆಯರೇ ಮೇಲು ಎನ್ನುವ ಮೂಲಕ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುರೇಂದ್ರ ಸಿಂಗ್, ವೇಶ್ಯೆಯರು ಸರ್ಕಾರಿ ಅಧಿಕಾರಿಗಳಿಗಿಂತಲೂ ಉತ್ತಮರು. ಕಡೇಪಕ್ಷ ಅವರು ಹಣಕ್ಕಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ ಮತ್ತು ವೇದಿಕೆ ಮೇಲೆ ನರ್ತಿಸಿ ನಮಗೆ ಮನರಂಜನೆ ನೀಡುತ್ತಾರೆ.
ಆದರೆ, ಈ ಅಧಿಕಾರಿಗಳು ಹಣ ತೆಗೆದುಕೊಂಡ ಬಳಿಕವೂ ಕೆಲಸ ಮಾಡಿಕೊಡುತ್ತಾರೆ ಎಂಬ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.

ಅಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುವ ಅಧಿಕಾರಿಗಳನ್ನು ಹೊಡೆಯುವಂತೆ ಅವರು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಸುರೇಂದ್ರ ಸಿಂಗ್ ಅವರು ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದು ಮೊದಲೇನೂ ಅಲ್ಲ. ಇದಕ್ಕೂ ಮುಂಚೆ ಅವರು, ಅತ್ಯಾಚಾರ ಪ್ರಕರಣಗಳಿಗೆ ಪೋಷಕರು ಮತ್ತು ಸ್ಮಾರ್ಟ್‌ಫೋನ್‌ಗಳೇ ಕಾರಣ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದರು.ಅಲ್ಲದೆ, ಇತ್ತೀಚೆಗೆ ನಡೆದ ಕೈರಾನಾ ಮತ್ತು ನೂರ್‌ಪುರ ವಿಧಾನಸಭೆ ಉಪಚುನಾವಣೆಗಳಲ್ಲಿ ಬಿಜೆಪಿಯ ಸೋಲಿಗೆ ಯೋಗಿ ಆದಿತ್ಯನಾಥ ಅವರ ಸರ್ಕಾರದಲ್ಲಿರುವ ಸಚಿವರೇ ಕಾರಣ ಎಂದು ಆರೋಪಿಸಿದ್ದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಶೂರ್ಪಣಖಿಗೆ ಹೋಲಿಕೆ ಮಾಡಿದ್ದ ಸಿಂಗ್, ಪಶ್ಚಿಮ ಬಂಗಾಳವು ಜಮ್ಮು ಮತ್ತು ಕಾಶ್ಮೀರವಾಗಿ ಬದಲಾಗಲಿದ್ದು, ಹಿಂದೂಗಳು ವಲಸೆ ಹೋಗಬೇಕಾದ ಸ್ಥಿತಿ ಬರಲಿದೆ ಎಂದಿದ್ದರು.












Click it and Unblock the Notifications