ಕೇದಾರನಾಥದಲ್ಲಿ ಪ್ರಪೋಸ್ ಮಾಡಿದ್ದ ಯೂಟ್ಯೂಬರ್‌ಗಳ ವಿರುದ್ಧ ಪೊಲೀಸರಿಗೆ ಪತ್ರ ಬರೆದ ಅರ್ಚಕರು

ಡೆಹರಾಡೂನ್ , ಜುಲೈ. 05: ಉತ್ತರಾಖಂಡ್‌ನ ಪ್ರಸಿದ್ಧ ಕೇದಾರನಾಥ ದೇವಸ್ಥಾನದ ಬಳಿ ಯುವತಿಯೊಬ್ಬರು ತನ್ನ ಪ್ರಿಯಕರನಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾದ ನಂತರ, ಘಟನೆ ಕುರಿತು ದೇವಸ್ಥಾನ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಕೇದಾರನಾಥ ದೇವಸ್ಥಾನದ ಅರ್ಚಕರು ಇಂತಹ ವೀಡಿಯೊಗಳನ್ನು ಮಾಡುವ ಜನರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ವಿಡೊಯೋಗಳು, ಘಟನೆಗಳು ಸ್ಥಳದ ಧಾರ್ಮಿಕ ಪಾವಿತ್ರ್ಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಎಂದು ಆರೋಪಿದ್ದು, ಇಂತಹ ವಿಡಿಯೋ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೇವಸ್ಥಾನ ಸಮಿತಿ ಪೊಲೀಸರಿಗೆ ಸೂಚಿಸಿದೆ.

Proposal video at Kedarnath

ವೈರಲ್ ವಿಡಿಯೋದಲ್ಲಿ, ಯೂಟ್ಯೂಬರ್ ಆಗಿರುವ ಯುವತಿ ಕೇದಾರನಾಥ ದೇವಸ್ಥಾನದ ಬಳಿ ತನ್ನ ಗೆಳೆಯನೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಬಳಿಕ ಆಕೆ ಮೊಣಕಾಲಿನ ಮೇಲೆ ಕುಳಿತು ಸಿನಿಮೀಯ ಮಾದರಿಯಲ್ಲಿ ತನ್ನ ಗೆಳೆಯನಿಗೆ ಉಂಗುರದೊಂದಿಗೆ ಪ್ರಪೋಸ್ ಮಾಡುತ್ತಾರೆ. ಸಮೀಪದಲ್ಲಿ ನಡೆಯುತ್ತಿದ್ದ ಜನರು ಆಕೆಯ ಪ್ರಪೋಸಲ್ ನೋಡಿ ಆಶ್ಚರ್ಯಪಟ್ಟಿದ್ದಾರೆ ಮತ್ತು ಕೆಲವರು ಅದನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ.

ಈ ವಿಡಿಯೋಗೆ ಪ್ರತಿಕ್ರಿಯೆಯಾಗಿ ಬದರಿ-ಕೇದಾರನಾಥ ದೇವಾಲಯ ಸಮಿತಿಯು ಪೊಲೀಸರಿಗೆ ಪತ್ರ ಬರೆದಿದ್ದು, ಇಂತಹ ವಿಡಿಯೋಗಳನ್ನು ರಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿದೆ. ಯೂಟ್ಯೂಬ್‌ಗಳು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹೆಸರು ಗಳಿಸಿದವರು ಕೇದಾರನಾಥ ದೇವಾಲಯದ ಬಳಿ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಇದರಿಂದ ಭಾರತ ಮತ್ತು ವಿದೇಶಗಳಲ್ಲಿನ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.

Proposal video at Kedarnath

ಇಂತಹ ವಿಡಿಯೋಗಳು ಕೇದಾರನಾಥಕ್ಕೆ ಭೇಟಿ ನೀಡುವ ಭಕ್ತರ ನಂಬಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಚಂದ್ರ ತಿವಾರಿ ಅವರು ಧಾರ್ಮಿಕ ಭಾವನೆಗಳಿಗೆ ವಿರುದ್ಧವಾದ ಯೂಟ್ಯೂಬ್ ಶಾರ್ಟ್ಸ್ ಮತ್ತು ರೀಲ್‌ಗಳನ್ನು ರಚಿಸುವ ವ್ಯಕ್ತಿಗಳ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಮದುವೆ ಪ್ರಸ್ತಾಪಕ್ಕೆ ದೇವಸ್ಥಾನವೇ ಸರಿಯಾದ ಸ್ಥಳವೇ ಎಂಬ ಬಗ್ಗೆ ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಇದರಲ್ಲಿ ಏನ್ನೂ ತಪ್ಪಿಲ್ಲ ಎಂದಿದ್ದಾರೆ. ಆದರೆ, ಬಹಳಷ್ಟು ಮಂದಿ ಇದು ದೇವಾಲಯಕ್ಕೆ ಮಾಡಿದ ಅಗೌರವ. ಇಂತಹ ಕ್ರಮಗಳಿಂದ ಕೇದಾರನಾಥ ದೇಗುಲದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+