ನೆಹರೂ ಯುವ ಕೇಂದ್ರಗಳ ಶೀರ್ಷಿಕೆಯಿಂದ 'ನೆಹರೂ' ಹೆಸರು ಡ್ರಾಪ್?

ನೆಹರೂ ಯುವ ಕೇಂದ್ರಗಳಿಂದ ನೆಹರೂ ಹೆಸರನ್ನು ಕೈಬಿಡುವ ಪ್ರಸ್ತಾವನೆ. ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸ್ತಾವನೆ.

ನವದೆಹಲಿ, ಸೆಪ್ಟೆಂಬರ್ 6: ಗ್ರಾಮೀಣ ಯುವಕರ ವ್ಯಕ್ತಿತ್ವ ಬೆಳವಣಿಗೆಗಾಗಿ ಸುಮಾರು 45 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದ ನೆಹರೂ ಯುವ ಕೇಂದ್ರಗಳ ಹೆಸರನ್ನು ಬದಲಿಸುವ ಹೊಸ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಯಾರಿಸಿದೆ.

ಈ ಯುವ ಕೇಂದ್ರಗಳಲ್ಲಿ ಇರುವ ನೆಹರೂ ಹೆಸರನ್ನು ಕೈಬಿಟ್ಟು, ಅದನ್ನು 'ರಾಷ್ಟ್ರೀಯ ಯುವ ಕೇಂದ್ರ' ಎಂದು ಮರು ನಾಮಕರಣ ಮಾಡಲು ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ಹೇಳಿದೆ.

Proposal to Drop Nehru from Nehru Yuva Kendra Sangathan

ಭಾರತದ ಸ್ವಾತಂತ್ರ್ಯೋತ್ಸವದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಈ ಯುವ ಕೇಂದ್ರಗಳಲ್ಲಿ ಅಂದಿನ ಸರ್ಕಾರ ಆರಂಭಿಸಿತ್ತು. ಆರಂಭದಲ್ಲಿ ಕೇವಲ ಆಯ್ದ 42 ಜಿಲ್ಲೆಗಳಲ್ಲಿ ಮಾತ್ರ ಆರಂಭಗೊಂಡ ಈ ಕೇಂದ್ರಗಳನ್ನು ಆನಂತರ ದೇಶವ್ಯಾಪಿ ವಿಸ್ತರಿಸಲಾಯಿತು.

1987ರಲ್ಲಿ ಅಂದಿನ ರಾಜೀವ್ ಗಾಂಧಿ ಸರ್ಕಾರವು, ಈ ಯುವ ಕೇಂದ್ರಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿಸಿದ್ದಲ್ಲದೆ, ಇವುಗಳಿಗೆ ಸಂಘಗಳ ಸ್ವರೂಪ ಕೊಟ್ಟು ದೇಶವ್ಯಾಪಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಅನುವು ಮಾಡಿಕೊಟ್ಟಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+