#JusticeForSathyaraj ಹ್ಯಾಷ್ ಟ್ಯಾಗ್ ನಲ್ಲಿ ಕನ್ನಡಿಗರನ್ನು ಕೆಣಕಿದ ಟ್ವಿಟ್ಟಿಗರು

ಟ್ವಿಟ್ಟರ್ ನಲ್ಲಿ ಸತ್ಯರಾಜ್ ಪರ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. ಕನ್ನಡಿಗರನ್ನು ಲೇವಡಿ ಮಾಡುವ ಟ್ವೀಟುಗಳು #JusticeForSathyaraj ಹ್ಯಾಷ್ ಟ್ಯಾಗ್ ನಲ್ಲಿ ಬಂದು ಬೀಳುತ್ತಿವೆ.

ಸತ್ಯರಾಜ್ ಆಲಿಯಾಸ್ ಕಟ್ಟಪ್ಪ ಕನ್ನಡಿಗರ ಮತ್ತು ಕರ್ನಾಟಕದ ಕ್ಷಮೆಯಾಚಿಸಬೇಕು, ಅಲ್ಲಿಯವರೆಗೆ ಬಾಹುಬಲಿ 2 ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎನ್ನುವ ಕನ್ನಡಪರ ಸಂಘಟನೆಗಳ ನಿರ್ಧಾರ ಮುಂದುವರಿದ ನಂತರ, ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಸತ್ಯರಾಜ್ ಪರ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.

8-9ವರ್ಷಗಳ ಹಿಂದಿನ ಸತ್ಯರಾಜ್ ಹೇಳಿಕೆಯನ್ನು ಇಟ್ಟುಕೊಂಡು ಕನ್ನಡಿಗರು ಸತ್ಯರಾಜ್ ವಿರುದ್ದ ತಿರುಗಿ ಬೀಳುತ್ತಿರುವುದು ಸರಿಯಲ್ಲ.

ಆ ಹೇಳಿಕೆಯ ನಂತರ ಸತ್ಯರಾಜ್ ನಟನೆಯ ಹಲವು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಲಿಲ್ಲವೇ? ನಾವು ಸತ್ಯರಾಜ್ ಪರವಾಗಿದ್ದೇವೆ ಎನ್ನುವ ಟ್ವೀಟುಗಳು ಹರಿದಾಡುತ್ತಿದ್ದೇವೆ. (ವಾಟಾಳ್ ನಾಗರಾಜ್ ಸಂದರ್ಶನದ ಆಯ್ದ ಭಾಗ)

ಸತ್ಯರಾಜ್ ಅವರ ಹಲವು ಸಿನಿಮಾಗಳು ಈ ಹಿಂದೆ ಇಲ್ಲೂ ಬಿಡುಗಡೆಯಾಗಿರಬಹುದು, ಈಗ ಎಲ್ಲಾ ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ನಡೆಸುವ ಸಮಯ ಬಂದಿದೆ. ಇದು ಸುಸಂದರ್ಭ, ಮಾತ್ರವಲ್ಲ ಇದ್ದು ಒಗ್ಗಟ್ಟಿನ ಆಕ್ರೋಶವೇ ಹೊರತು ಅವಕಾಶವಾದಿತನ ಅಲ್ಲ ಎಂದು ವಾಟಾಳ್ ನಾಗರಾಜ್ ಗುರುವಾರ (ಏ 20) ' ಒನ್ ಇಂಡಿಯಾ' ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.[ಕನ್ನಡಿಗರ ಕ್ಷಮೆಕೋರಿ ಸತ್ಯರಾಜ್ ಆಡಿರುವ ಮಾತುಗಳಿವು!]

ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ, ಸತ್ಯರಾಜ್ ಹೇಳಿಕೆಗಾಗಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ತಡೆವೊಡ್ಡುವುದು ಸರಿಯಲ್ಲ. ಸತ್ಯರಾಜ್ ನೀಡಿದ ಹೇಳಿಕೆ ಅವರ ವೈಯಕ್ತಿಕ, ಇದಕ್ಕೆ ನಿರ್ದೇಶಕರು ಅಥವಾ ನಿರ್ಮಾಪಕರು ಜವಾಬ್ದಾರರಲ್ಲ ಎಂದು ರಾಜಮೌಳಿ ಹೇಳಿರುವ ವಿಡಿಯೋ ಗುರುವಾರ ಬಿಡುಗಡೆಯಾಗಿದೆ.

ಇವೆಲ್ಲದರ ನಡುವೆ ಕನ್ನಡಿಗರು, ಕರ್ನಾಟಕ ಮತ್ತು ನಮ್ಮ ನಟರನ್ನು ಲೇವಡಿ ಮಾಡುವ ಟ್ವೀಟುಗಳು #JusticeForSathyaraj ಹ್ಯಾಷ್ ಟ್ಯಾಗ್ ನಲ್ಲಿ ಬಂದು ಬೀಳುತ್ತಿದ್ದು, ಕೆಲವೊಂದು ಟ್ವೀಟುಗಳಿಗೆ ಸರಿಯಾದ ಪ್ರತ್ಯುತ್ತರ ಸಿಗುತ್ತಿದೆ. ಕೆಲವೊಂದು ಸ್ಯಾಂಪಲ್ ಟ್ವೀಟುಗಳ ಮುಂದೆ ನೋಡಿ..

ಕನ್ನಡಿಗರು ಹಿಂದಕ್ಕೆ

ಪ್ರಪಂಚ ದಿನದಿಂದ ದಿನಕ್ಕೆ ಮುಂದುವರಿಯುತ್ತಿದ್ದರೆ, ಕನ್ನಡಿಗರು ದಿನದಿಂದ ದಿನಕ್ಕೆ ಹಿಂದಕ್ಕೆ ಸಾಗುತ್ತಿದ್ದಾರೆ.

ನ್ಯಾಯಾಲಯದ ತೀರ್ಪಿಗೆ ಬೆಲೆಕೊಡದವರು

ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಬೆಲೆಕೊಡದ ಜನರು ನಟನೊಬ್ಬನಿಂದ ಕ್ಷಮಾಪಣೆಯಾಚಿಸುತ್ತಿದ್ದಾರೆ.

ಪುನೀತ್ ಒಬ್ಬ ಜೋಕರ್

ಪುನೀತ್ ಒಬ್ಬ ಜೋಕರ್

ಪುನೀತ್ ರಾಜಕುಮಾರ್ ಒಬ್ಬ ಜೋಕರ್, ಅವರನ್ನು ಹೀರೋ ಎನ್ನುವವರು ನೀವು!

ಕನ್ನಡದಲ್ಲಿ ಒಳ್ಳೆ ಸಿನಿಮಾ ಬರುವುದೇ ಇಲ್ಲ

ಕನ್ನಡದಲ್ಲಿ ಒಳ್ಳೆ ಸಿನಿಮಾ ಬರುವುದೇ ಇಲ್ಲ

ಕನ್ನಡಿಗರು ಮಾಗುವುದೇ ಇಲ್ಲ, ಒಳ್ಳೆ ಸಿನಿಮಾ ಅವರಿಗೆ ಹಿಡಿಸುವುದಿಲ್ಲ. ಕನ್ನಡದ ಸಿನಿಮಾವನ್ನು ಕನ್ನಡಿಗರು ಬಿಟ್ಟರೆ ಬೇರೆ ಯಾರೂ ನೋಡಲು ಸಾಧ್ಯವಿಲ್ಲ. ಎಂಟು ವರ್ಷದ ಹಿಂದಿನ ಹೇಳಿಕೆಯನ್ನು ಇಟ್ಟುಕೊಂಡು ಈಗ ಪ್ರತಿಭಟಿಸುತ್ತಿದ್ದಾರೆಂದರೆ ಏನರ್ಥ?

ಸತ್ಯರಾಜ್ ದೃಶ್ಯಕ್ಕೆ ಕತ್ತರಿ ಬಿದ್ದರೆ, ಕ್ಲೈಮ್ಯಾಕ್ಸ್ ಅರ್ಥವಾಗುವುದಿಲ್ಲ

ಒಂದು ವೇಳೆ ಸತ್ಯರಾಜ್ ದೃಶ್ಯವನ್ನು ಸಿನಿಮಾದಲ್ಲಿ ಕಟ್ ಮಾಡಿದರೆ ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎಂದು ಕನ್ನಡಿಗರಿಗೆ ತಿಳಿಯುವುದೇ ಇಲ್ಲ.

ರಜನಿ ಟ್ರೋಲ್ ಮಾಡುವ ಟ್ವೀಟ್

ನಿನ್ನ (ವಾಟಾಳ್ ನಾಗರಾಜ್) ಸಪೋರ್ಟ್ ಕೇಳಲು ನಾನೇನು ಬಾಷಾನಾ? ನಾನು ತಮಿಳಿಯನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+