ಖಾಸಗಿ ರೈಲು ಚೆನ್ನೈ-ಕಾಶ್ಮೀರ ಪ್ರವಾಸ: ದರ, ವ್ಯವಸ್ಥೆಗಳು

ಚೆನ್ನೈ, ಫೆಬ್ರವರಿ 09: ಐಆರ್‌ಸಿಟಿಸಿ ಭಾರತ್ ಗೌರವ್ ಹೆಸರಿನ ವಿಶೇಷ ಪ್ರವಾಸಿ ರೈಲು ಸೇವೆಯನ್ನು ಪ್ರಾರಂಭಿಸಿದೆ. ಇದೇ ಮಾದರಿಯ ಭಾರತ್ ಗೌರವ್ ಖಾಸಗಿ ರೈಲು ಸಂಚಾರವೂ ಆರಂಭವಾಗಿದೆ. ದಕ್ಷಿಣ ಭಾರತದಿಂದ ಈ ಮಾದರಿಯ ರೈಲು ಏಪ್ರಿಲ್‌ 2ರಂದು ಕಾಶ್ಮೀರಕ್ಕೆ ಸಂಚಾರವನ್ನು ಪ್ರಾರಂಭಿಸಲಿದೆ. ಈ ಪ್ರವಾಸಿ ಪ್ಯಾಕೇಜ್‌, ವ್ಯವಸ್ಥೆಗಳ ಮಾಹಿತಿ ನೀಡಲಾಗಿದೆ.

ಚೆನ್ನೈ-ಕಾಶ್ಮೀರ ನಡುವಿನ ಪ್ರವಾಸಿ ಪ್ಯಾಕೇಜ್ 15 ದಿನಗಳದ್ದು. ಸಬ್ಸಿಡಿ ಆಧಾರಿತ ಈ ಪ್ಯಾಕೇಜ್‌ ದರ 50,000- 65,000 ರೂ. ತನಕ ನಿಗದಿ ಮಾಡಲಾಗಿದೆ. ದಕ್ಷಿಣ ರೈಲ್ವೆಯ ಸಹಯೋಗದಲ್ಲಿ ಸೌತ್ ಸ್ಟಾರ್ ರೈಲ್ ಈ ಖಾಸಗಿ ಪ್ರವಾಸಿ ಪ್ಯಾಕೇಜ್ ಆಯೋಜನೆ ಮಾಡಿದೆ.

Private Bharat Gaurav Tourist Train From Chennai Know Package Details

ಈ ರೈಲು ಆಗ್ರಾ, ದೆಹಲಿ, ಅಮೃತ್‌ಸರಕ್ಕೆ ಭೇಟಿ ನೀಡಲು ಇದು ಅವಕಾಶ ನೀಡಲಿದೆ. ತಾಜ್ ಮಹಲ್, ಗೋಲ್ಡನ್ ಟೆಂಪಲ್, ಫತೇಫುರ್ ಸಿಕ್ರಿಯನ್ನು ನೋಡಲು ಈ ಪ್ಯಾಕೇಜ್‌ನಲ್ಲಿ ಅವಕಾಶ ಕೊಡಲಾಗಿದೆ. ಹೋಟೆಲ್‌, ವಾಸ್ತವ್ಯ ಮುಂತಾದ ವ್ಯವಸ್ಥೆಗಳು ಪ್ಯಾಕೇಜ್‌ನಲ್ಲಿ ಒಳಗೊಂಡಿದೆ.

ವಿವಿಧ ಸೌಲಭ್ಯಗಳು: ಪ್ರವಾಸಿತಾಣಗಳಿಗೆ ಭೇಟಿ ನೀಡುವಾಗ ಪ್ರವಾಸಿಗರು ತಮ್ಮ ದೊಡ್ಡ ದೊಡ್ಡ ಬ್ಯಾಗ್‌ಗಳನ್ನು 24*7 ಕಣ್ಗಾವಲು ವ್ಯವಸ್ಥೆ ಇರುವ ರೈಲಿನಲ್ಲಿಯೇ ಬಿಟ್ಟು ಚಿಕ್ಕ ಚಿಕ್ಕ ಬ್ಯಾಗ್‌ಗಳನ್ನು ಹಿಡಿದುಕೊಂಡು ಸಾಗುವ ಅವಕಾಶವಿದೆ.

ರೈಲಿನಲ್ಲಿಯೇ 650 ಪ್ರಯಾಣಿಕರಿಗೆ ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಹಾರಿ ಆಹಾರ ತಯಾರು ಮಾಡಿ ನೀಡಲಾಗುತ್ತದೆ. ಈ ಪ್ರವಾಸಿ ಪ್ಯಾಕೇಜ್‌ಗೆ ಶೇ 30ರಷ್ಟು ಸಹಾಯಧನದ ಸೌಲಭ್ಯವಿದೆ. ಜನರು ಪ್ರಯಾಣಕ್ಕಾಗಿ www.tourtimes.in or 7305858585 ಸಂಖ್ಯೆಗೆ ಕರೆ ಮಾಡಬಹುದು.

2021ರಲ್ಲಿ ಭಾರತ್ ಗೌರವ್ ರೈಲು ಸೇವೆ ಪ್ರಾರಂಭವಾದ ಬಳಿಕ ದಕ್ಷಿಣ ರೈಲ್ವೆ 80 ಖಾಸಗಿ ರೈಲು ಪ್ರವಾಸಿ ಪ್ಯಾಕೇಜ್‌ಗಳನ್ನು ಆಯೋಜನೆ ಮಾಡಿದೆ. ಚೆನ್ನೈನಿಂದ ಗುಜರಾತ್, ಉತ್ತರ ಪ್ರದೇಶದ ಪ್ರವಾಸಿ ತಾಣಗಳಿಗೆ ರೈಲುಗಳು ಸಂಚಾರ ನಡೆಸಿವೆ. 40,000 ಪ್ರವಾಸಿಗರು ಈ ರೈಲಿನಲ್ಲಿ ಪ್ರವಾಸ ನಡೆಸಿದ್ದಾರೆ.

ತಮಿಳುನಾಡಿನಲ್ಲಿ ಐಆರ್‌ಸಿಟಿಸಿ ಮತ್ತು ಸೌತ್ ಸ್ಟಾರ್ ರೈಲ್ವೆ ಈ ಮಾದರಿಯ ಖಾಸಗಿ ಪ್ರವಾಸಿ ಪ್ಯಾಕೇಜ್ ಟೂರ್ ಆಯೋಜನೆ ಮಾಡುತ್ತವೆ. ಪಿಪಿಪಿ ಮಾದರಿಯಲ್ಲಿ ಈ ಮಾದರಿ ಸೇವೆಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.

ಈಗಾಗಲೇ ಭಾರತೀಯ ರೈಲ್ವೆ ಭಾರತ್ ಗೌರವ್ ಹೆಸರಿನಲ್ಲಿ ಪ್ರವಾಸಿ ರೈಲುಗಳ ಸೇವೆಯನ್ನು ಆರಂಭಿಸಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಈ ಮಾದರಿ ರೈಲು ಸೇವೆಯನ್ನು ಆರಂಭಿಸಲಾಗಿದೆ. 2023ರಲ್ಲಿ, 96,491 ಪ್ರವಾಸಿಗರು ಈ ಮಾದರಿ ರೈಲುಗಳಲ್ಲಿ ಸಂಚಾರವನ್ನು ನಡೆಸಿದ್ದಾರೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿವಿಧ ಪ್ರವಾಸಿ ತಾಣಗಳನ್ನು ಪರಿಚಯಿಸಲು ಈ ಮಾದರಿ ರೈಲು ಸೇವೆ ಆರಂಭಿಸಲಾಗಿದೆ. ಅಯೋಧ್ಯೆ, ಶ್ರೀ ಜಗನ್ನಾಥ ಯಾತ್ರೆ, ಗಾರ್ವಿ ಗುಜರಾತ್ ಪ್ರವಾಸ, ಅಂಬೇಡ್ಕರ್ ಸರ್ಕ್ಯೂಟ್ ಮುಂತಾದ ಹೆಸರಿನಲ್ಲಿ ಪ್ರವಾಸಿ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+