ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಕಾ- ತಾರಾತಲಾ ಮೆಟ್ರೋ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

ಕೋಲ್ಕತ್ತಾ, ಡಿಸೆಂಬರ್‌ 30: ತಮ್ಮ ತಾಯಿಗೆ ಅಂತಿಮ ವಿದಾಯ ಹೇಳಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾ ಮೆಟ್ರೋದ ಪರ್ಪಲ್ ಲೈನ್‌ನ ಜೋಕಾ-ತಾರಾತಲಾ ವಿಭಾಗವನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಉಪಸ್ಥಿತರಿದ್ದರು. ಇದರೊಂದಿಗೆ ಪ್ರಧಾನ ಮಂತ್ರಿಯವರು ಪೂರ್ವ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಹ ಹಸಿರು ನಿಶಾನೆ ತೋರಿದರು. ಈ ಸೆಮಿ ಹೈಸ್ಪೀಡ್ ರೈಲು ಹೌರಾ- ಹೊಸ ಜಲ್ಪೈಗುರಿ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ.

ನಿಮ್ಮ ತಾಯಿ, ನಮ್ಮ ತಾಯಿ ಇದ್ದಂತೆ, ನೀವು ವಿಶ್ರಾಂತಿ ತೆಗೆದುಕೊಳ್ಳಿ: ಮೋದಿಗೆ ಮಮತಾ ಹೃದಯಸ್ಪರ್ಶಿ ಸಾಂತ್ವನನಿಮ್ಮ ತಾಯಿ, ನಮ್ಮ ತಾಯಿ ಇದ್ದಂತೆ, ನೀವು ವಿಶ್ರಾಂತಿ ತೆಗೆದುಕೊಳ್ಳಿ: ಮೋದಿಗೆ ಮಮತಾ ಹೃದಯಸ್ಪರ್ಶಿ ಸಾಂತ್ವನ

ಅರುಣ್ ಅರೋರಾ, ಜನರಲ್ ಮ್ಯಾನೇಜರ್ ಮತ್ತು ಇತರ ಹಿರಿಯ ಮೆಟ್ರೋ ರೈಲ್ವೇ ಅಧಿಕಾರಿಗಳ ಸಮ್ಮುಖದಲ್ಲಿ 6.5 ಕಿಮೀ ಮೆಟ್ರೋ ಮಾರ್ಗದ ಪ್ರಾಯೋಗಿಕ ಚಾಲನೆಯನ್ನು ಮೊದಲು ನಡೆಸಲಾಯಿತು. ಅಧಿಕಾರಿಗಳು ಮೆಟ್ರೋದ ಕಾರ್ಯವೈಖರಿ ಮತ್ತು ಸಾರ್ವಜನಿಕರ ಬಳಕೆಗೆ ಸಿದ್ಧತೆಗಳನ್ನು ಪರಿಶೀಲಿಸಿದರು. ಮೆಟ್ರೋದ ಹೊಸ ನೇರಳೆ ಮಾರ್ಗವು 6.5 ಕಿ.ಮೀ ವ್ಯಾಪ್ತಿಯಲ್ಲಿ ಆರು ನಿಲ್ದಾಣಗಳನ್ನು ಒಳಗೊಂಡಿದೆ. ಜೋಕಾ, ಠಾಕುರ್ಪುಕುರ್, ಸಖೇರ್ ಬಜಾರ್, ಬೆಹಲಾ ಚೌರಸ್ತಾ, ಬೆಹಲಾ ಬಜಾರ್, ತಾರಾತಲಾ ಇವುಗಳನ್ನು ಒಳಗೊಂಡಿರುವ ನಿಲ್ದಾಣಗಳಾಗಿವೆ.

Prime Minister Narendra Modi inaugurated the Joka-Taratala Metro

ಜೋಕಾ ಡಿಪೋದಿಂದ ಸೀಲ್ದಾ ವಿಭಾಗದ ಮಜೆರ್‌ಹತ್ ರೈಲು ನಿಲ್ದಾಣದ ಆರಂಭದವರೆಗಿನ 9.2 ಕಿಲೋಮೀಟರ್ ವ್ಯಯಡಕ್ಟ್ ವಿಸ್ತರಣೆಯನ್ನು ಜೋಕಾ-ತಾರಾತಲಾ ಸ್ಟ್ರೆಚ್ ಎಂದು ಕರೆಯಲಾಗುತ್ತದೆ. ಇದು ಜೋಕಾ-ಎಸ್‌ಪ್ಲೇನೇಡ್ ನೇರಳ ಮಾರ್ಗದ ಒಂದು ಭಾಗವಾಗಿದೆ. ಈ ಯೋಜನೆಯಲ್ಲಿ 110 ಯುಟಿಎಸ್‌ ಎಚ್‌ಎಚ್‌ ಹಳಿಗಳನ್ನು ಬಳಸಲಾಗಿದೆ.

ಆರು ಗಮನಾರ್ಹ ನಿಲ್ದಾಣಗಳಲ್ಲಿ ತಲಾ 13 ಜನರಿಗೆ ನಾಲ್ಕು ಲಿಫ್ಟ್‌ಗಳು, ಎಂಟು ಮೆಟ್ಟಿಲುಗಳು ಮತ್ತು ಏಳು ಎಸ್ಕಲೇಟರ್‌ಗಳಿವೆ. ಪ್ಲಾಟ್‌ಫಾರ್ಮ್‌ಗಳಲ್ಲಿ, ಬೆಂಚುಗಳು, ಎಎಫ್‌ಸಿ ಗೇಟ್‌ಗಳು, ಪಿಎ ವ್ಯವಸ್ಥೆಗಳು ಮತ್ತು ಎಟಿವಿಎಂಗಳಂತಹ ಹಲವಾರು ಪ್ರಯಾಣಿಕರ ಸೌಲಭ್ಯಗಳೂ ಇವೆ. ಈ ಹಿಂದೆ, ರೈಲ್ವೇ ಮಂಡಳಿಯು ಮೆಟ್ರೋದ ಹೊಸ ಜೋಕಾ-ತಾರಾತಲಾ ಸ್ಟ್ರೆಚ್‌ನ ದರದ ರಚನೆಯನ್ನು ಬಹಿರಂಗಪಡಿಸಿತು.

ಈ ಮಾರ್ಗದ ಪ್ರಯಾಣದ ದರವು ರೂ 5 ರಿಂದ ರೂ 20 ರವರೆಗೂ ಇರುತ್ತದೆ, ಇದು ಪ್ರಯಾಣಿಸುವ ನಿಲ್ದಾಣಗಳನ್ನು ಅವಲಂಬಿಸಿರುತ್ತದೆ. ಮೆಟ್ರೋಗಾಗಿ ಪ್ರವಾಸಿ ಸ್ಮಾರ್ಟ್ ಕಾರ್ಡ್ ಅನ್ನು 3 ದಿನಗಳಿಗೆ 250 ರೂ ಮತ್ತು 5 ದಿನಕ್ಕೆ 550 ರೂ ವೆಚ್ಚದಲ್ಲಿ ಖರೀದಿಸಬಹುದು. ಇದು 80 ರೂಪಾಯಿ ಭದ್ರತಾ ಠೇವಣಿ ಹೊಂದಿರುತ್ತದೆ.

English summary
Prime Minister Narendra Modi inaugurated the Joka-Taratala section of the Purple Line of the Kolkata Metro through video conferencing after bidding his mother a final farewell.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X