ಮೋದಿ ಕೈಕುಲುಕಿ ಗದ್ಗದಿತರಾದ ಅಬುಧಾಬಿ ನೌಕರರು
ಅಬುಧಾಬಿ, ಆಗಸ್ಟ್ 17 : ಭಾರತದಲ್ಲಿ ಬಂಡವಾಳ ಹೂಡಲು ಮತ್ತು ವ್ಯಾಪಾರ ವಹಿವಾಟಿಗೆ ವಿಫುಲ ಅವಕಾಶವಿದ್ದು 25 ದಶಲ್ಕಷ ಕೋಟಿ ಡಾಲರ್ ಹೂಡಿಕೆ ಮಾಡಲು ಅವಕಾಶವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಯುಎಇ ಹೂಡಿಕೆದಾರರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ಚೀನಾ, ಜಪಾನ್, ರಷ್ಯಾ ಪ್ರವಾಸ ಮಾಡಿ ಮೇಕ್ ಇನ್ ಇಂಡಿಯಾ ಅಭಿಯಾನದವನ್ನು ಪ್ರಚುರಪಡಿಸಿದ್ದ ಮೋದಿ ಅಬುಧಾಬಿಯ ವರ್ತಕರ ಹೃದಯಕ್ಕೂ ಲಗ್ಗೆ ಇಟ್ಟಿದ್ದಾರೆ. ವ್ಯಾಪಾರ, ವಾಣಿಜ್ಯ ಬಾಂಧವ್ಯ ವೃದ್ಧಿಯಲ್ಲಿ ಭೇಟಿ ಪ್ರಮುಖ ಪಾತ್ರ ವಹಿಸಲಿದೆ. 10 ಸಾವಿರಕ್ಕೂ ಅಧಿಕ ಭಾರತೀಯರು ದುಬೈನಲ್ಲಿ ವಿವಿಧ ಕಾರಣಗಳಿಂದ ಕೆಲಸ ಕಳೆದುಕೊಂಡಿದ್ದರು.
ಎರಡು ದಿನಗಳ ಅರಬ್ ರಾಷ್ಟ್ರ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಬುಧಾಬಿಗೆ ಆಗಮಿಸಿದ್ದಾರೆ. ಸೋಮವಾರ ಅವರು ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುಮಾರು 50 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ದುಬೈ ನ ಕ್ರಿಕೆಟ್ ಮೈದಾನದಲ್ಲಿ ಮೋದಿ ಅವರ ಭಾಷಣ ಕೇಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಾಮಾಜಿಕ ತಾಣಗಳಲ್ಲೂ ಮೋದಿ ಯುಎಇ ಭೇಟಿಯ ಬಗ್ಗೆ ಚರ್ಚೆ ಆರಂಭವಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಬರಮಾಡಿಕೊಳ್ಳಲು ಸ್ವತಃ ಅಬುಧಾಬಿಯ ರಾಜಕುವರ ಶೇಖ್ ಮಹಮ್ಮದ್ ಬಿನ್ ಝಾಯೇದ್ ಮತ್ತು ಅವರ ಐವರು ಸೋದರರು ಆಗಮಿಸಿದ್ದು ವಿಶೇಷವಾಗಿತ್ತು.

ತಂತ್ರಜ್ಞಾನ ಬೆಳವಣಿಗೆಗೆ ಭಾರತಕ್ಕೆ ಬನ್ನಿ
ಭಾರತದಲ್ಲಿ ತಂತ್ರಜ್ಞಾನ ಬೆಳವಣಿಗೆ ಮತ್ತು ಹೂಡಿಕೆಗೆ ಮುಕ್ತ ಅವಕಾಶವಿದೆ. ವಾಣಿಜ್ಯ ವಹಿವಾಟು ಮತ್ತು ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಕೊಲ್ಲಿ ರಾಷ್ಟ್ರಗಳ ಸಹಕಾರ ಅಗತ್ಯ ಎಂದು ಮೋದಿ ಪುನರುಚ್ಚಾರ ಮಾಡಿದರು.

ವಿಜ್ಞಾನವೇ ಜೀವನ
ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ನಂತರ ಮಾತನಾಡಿದ ಮೋದಿ, ವಿಜ್ಞಾನವೇ ಜೀವನ. ಮಾನವನ ಪ್ರತಿಯೊಂದು ಆಗು ಹೋಗುಗಳ ಇದರ ಮೇಲೆ ನಿರ್ಧರಿತವಾಗುತ್ತದೆ ಎಂದು ಹೇಳಿದರು.

ಕ್ರಿಕೆಟ್ ಮೈದಾನ ಸಜ್ಜು
ವಿಶ್ವದ ಅತಿ ಎತ್ತರ ಕಟ್ಟಡ ಬುರ್ಜ್ ಖಲೀಫಾಗೆ ಭೇಟಿ ನೀಡಿದ ಬಳಿಕ ದುಬೈ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಲಿದ್ದು 50 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ.

ಭಾರತೀಯರಿಗೆ ಸಹಾಯ ಹಸ್ತ
ಬೇರೆ ಬೇರೆ ಕೆಲಸದಲ್ಲಿ ನಿರತರಾಗಿರುವ ಭಾರತೀಯರಿಗೆ ಎಲ್ಲ ಬಗೆಯ ನೆರವು ನೀಡಲು ಸಿದ್ಧ. ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ನಾವು ಬದ್ಧರಾಗಿರುತ್ತೇವೆ ಎಂದು ಮೋದಿ ಮಾಧ್ಯಮಳೊಂದಿಗೆ ಮಾತನಾಡಿತ್ತ ಹೇಳಿದರು.

ನೋವು ತೋಡಿಕೊಂಡ ವ್ಯಾಪಾರಿಗಳು
ವಿವಿಧ ಕಾರಣಗಳಿಂದ ಭಾರತದ ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದಾರೆ. ವ್ಯಾಪಾರ ಮಾಡದ ಸ್ಥಿತಿ ನಿರ್ಮಾಣವಾಗಿದೆ. ವ್ಯಾಪಾರಿಗಳು ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳುಕೊಂಡು ಪರಿಹಾರ ಕ್ರಮಕ್ಕೆ ಮನವಿ ಮಾಡಿದರು.

ಪ್ರವಾಸೋದ್ಯಮಕ್ಕೆ ಹಣ ಹಾಕಿ
ಭಾರತದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು ಹಣ ಹಾಕಿದರೆ ಲಾಭ ಖಂಡಿತ ದೇಶ ಅಭಿವೃದ್ಧಿ ಆಗುವುದರೊಂದಿಗೆ ಜನರಿಗೆ ಅಗತ್ಯ ಸೌವಲತ್ತುಗಳನ್ನು ಕಡಿಮೆ ಬೆಲೆಯಲ್ಲಿ ತಲುಪಿಸೋಣ ಎಂದು ಅಭಿಪ್ರಾಯಪಟ್ಟರು.

ಹೊಸ ಮನೆಗಳ ನಿರ್ಮಾಣ
2022ರೊಳಗೆ ಭಾರತದಲ್ಲಿ 5 ಕೋಟಿ ಮನೆಗಳ ನಿರ್ಮಾಣ ಮಾಡಬೇಕಿದ್ದು, ಮನೆಗಳ ನಿರ್ಮಾಣಕ್ಕೆ ನಮಗೆ ತಂತ್ರಜ್ಞಾನದ ಅಗತ್ಯವಿದೆ. ವೇಗ, ಗುಣಮಟ್ಟಕ್ಕಾಗಿ ಆಧುನಿಕ ತಂತ್ರಜ್ಞಾನದ ಅಗತ್ಯವಿದೆ ಎಂದರು. ಅದನ್ನು ಅಳವಡಿಸಿಕೊಳ್ಳಲು ನಿಮ್ಮ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಹೂಡಿಕೆ ಮಾಡಿ ಬನ್ನಿ
ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬನ್ನಿ ಭಾರತದಲ್ಲಿ ಹೂಡಿಕೆ ಮಾಡಿ, ನಮ್ಮಲ್ಲಿ ಒಂದು ಲಕ್ಷ ಕೋಟಿ ರೂ. ಹೂಡಿಕೆಗೆ ಅವಕಾಶವಿದೆ ಎಂದು ಕರೆ ನೀಡಿದರು. ಭಾರತದಲ್ಲಿ ಮೂಲಸೌಕರ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶವಿದೆ ಎಂದು ತಿಳಿಸಿದರು.

ನಗರ ಪ್ರದಕ್ಷಿಣೆ
ಸೋಮವಾರ ಹೈಟೆಕ್ ಮಸ್ಡಾರ್ ನಗರಕ್ಕೆ ಭೇಟಿ ನೀಡಿದ ಪ್ರಧಾನಿ, ಚಾಲಕ ರಹಿತ ಎಲೆಕ್ಟ್ರಾನಿಕ್ ಕಾರಿನಲ್ಲಿ ದುಬೈ ದೊರೆ ಜೊತೆ ನಗರ ಪ್ರದಕ್ಷಿಣೆಯೊಂದಿಗೆ ವೀಕ್ಷಿಸಿದರು. ಮಸ್ಡಾರ್ ವಿಶ್ವದ ಮೊದಲ ಕಾರ್ಬನ್ ರಹಿತ ನಗರವಾಗಿದೆ.

ಭೇಟಿ ನೀಡಿದ್ದಕ್ಕೆ ದಾಖಲೆ
ದಶಕಗಳ ನಂತರ ಭಾರತದ ಪ್ರಧಾನಿಯೊಬ್ಬರು ಮಸ್ಡಾರ್ ಮಹಾನಗರಕ್ಕೆ ಭೇಟಿ ನೀಡಿ ದಾಖಲೆ ಬರೆದರು. ಭೇಟಿ ನೀಡಿದ ಕುರುಹಾಗಿ ಇಲೆಕ್ಟ್ರಾನಿಕ್ ಸಹಿ ಮಾಡಿದ ಪ್ರಧಾನಿ.












Click it and Unblock the Notifications